ಇಂಚು, ರಣಬಿಸ್ಲ್ನ ಮರಳುಗಾಡ್ ದೇಶದ ಬಾರ್ಡರ್ಲಿ ಹಗಲುನ ಬಿಸಿಬೆವರ್ಲಿ ಹೆಗಲ್ ಮೇಲೆ ಗನ್ ಹಿಡ್ಕಂಡ್ ತಿರಿಗಿರೆ, ರಾತ್ರಿನ ಮೈ ಕೊರೆಯುವ ಕ್ವಾಟಲಿ ಟೆಂಟ್ನೊಳಗೆ ಪೆಗ್ಗು ಹೊಡ್ಕೊಂಡ್ ನಿನ್ನ ಗ್ಯಾನಲಿ ಸ್ವಪ್ನ ಕಂಡುಕೊಂಡು ನಾ ಕಳೆಯುತೊಳನೇ...
ಇಂಚು, ಸತ್ಯ ಹೇಳ್ತೊಳನೇ ಕೇಳ್... ಅಂದು ನಾ ರಜೆಲಿ ಬಾಕನ, ಇಬ್ಬರ್ ಸೇರ್ಕಂಡ್ ಸುಳ್ಳಿನ ಮಾಲೆನ ಪೋಣಿಸಿ ಮನೆಯಿಂದ ಹೊರಟ್, ಕೈಕೈ ಹಿಡ್ಕಂಡ್ ದೂರದ ಊರುನ ಬಸ್ ಹತ್ತಿ ಜೊತೇಲಿ ಕುದ್ದ್ಕಂಡು ಮಾತಾಡ್ಕಂಡ್ ಪ್ರಯಾಣ ಮಾಡ್ದ ಅನುಭವನ ನಾ ಹೆಂಗೇ ವರ್ಣಿಸಲಿನೇ ..?
ಅಲ್ಲೊಂದು ಫಿಲಂ ಥಿಯೇಟರ್... ಆ ಕತ್ತಲೆ... ನಿನ್ನ ಸ್ಪರ್ಷದ ರೋಮಾಂಚನ... ನಿನ್ನ ಬಿಸಿ ಅಪ್ಪುಗೆ... ಆ ಏದುಸಿರಿನ ಗಂಧ... ಇಲ್ಲೂ ನೆನಪಾಗ್ತುಟ್ಟು... ಅಲೆಅಲೆಯಾಗಿ ಅರಳುತ್ತಲೇ ಉಟ್ಟು ಆಹಾ..! ಎಂಥ ಮಧುರ ಅನುಭವ..! ಇಂಚು, ನಿನ್ನ ಮಧುಪಾತ್ರೆಯಂಥ ಕಣ್ಣುಗ... ಮುಂಜಾವಿನ ಇಬ್ಬನಿಯ ಹನಿಗಳಂಗೆ, ಸ್ವಪ್ನಗಳನ್ನ ಕಾಣ್ತಾ, ನೀ ಸಿಹಿಯಾಗಿ ನರಳುವ ಹೊತ್ತಲಿ ನಾನಿಲ್ಲಿ ದೇಶದ ಮೂಲೆಲಿ ಮುಳ್ಳು ತಂತಿನ ಬೇಲಿಗಳ ಈಚೆ ನಿಂತ್ಕಂಡ ಏರಲು ಹೊರಟಿರುವ ಸೂರ್ಯನ, ಮರಳುಧೂಳೆಬ್ಬಿಸಿ ಅಡಗಿಸುವ ಭೋಗರ್ಾಳಿಯ ಹಿಂದಿನ ಬದಿಲಿ ನೆರೆದೇಶದ ಕಳ್ಳರ್ಯಾರೋ ಇರೋಕುತ್ತಾ ಕಷ್ಟಪಟ್ಟು ಹುಡುಕುತೊಳನೇ.............
ಇಂಚು, ಮೊನ್ನೆ ಇದ್ದಕ್ಕಿದಂಗೇ ನಿನ್ನ ನೆನಪಾಗಿ, ನಿನ್ನ ನೋಡೋಕುತ್ತಾ ಅನ್ನಿಸಿ, ಎದೆನೋವುತಾ ಸುಳ್ಳು ಹೇಳಿ ಮೆಡಿಕಲ್ ಲೀವ್ ಹಾಕಿ ಬಂದಬುಡನಾ ತಾ ಗ್ಯಾನ ಮಾಡಿ ಮೆಲ್ಲೆ ನನ್ನ ಫ್ರೆಂಡ್ಗೆ ಹೇಳ್ಕಾಕನ, ಅಂವ ನಂಗೆ ಒಂದ್ ಮಾತ್ ಹೇಳ್ತ್, "ನಿನ್ನಂಥವಂಗೆ ಯಾಕೆರಾ ಬೇಕಿತ್ತ್ ಈ ಕೆಲಸ" ಅವನ ಮಾತು ನನ್ನ ಕೆನ್ನೆಗೆ ಹೊಡ್ದಷ್ಟು ನೋವಾತೇನೋ.....? ಇಂಚು, ನೀನೇ ಹೇಳ್ನೇ.. "ನಾನೂ ಮನುಷ್ಯ ತಾನೇ..." ದೇಶಕಾಯುತ್ತಾ ಒಳೆತಾ ನನ್ನ ಹೃದಯ ಲವ್ ಮಾಡಿಕೆ ಬತ್ತುತಾ ಗನ್ ಮೇಲೆ ಬರ್ಕೊಂಡುಟ್ಟಾ?
ಇಂಚು, ನಾನೊಬ್ಬ ದೇಶ ಕಾಯುವ ಸೈನಿಕತಾ ಗೊತ್ತಿದ್ದರೂ ನೀನು ನನ್ನ ಒಪ್ಪಿಕೊಂಡಳೊಲ್ಲಾ, ಅದಿಕ್ಕೆ ನಂಗೆ ತುಂಬಾ ಆಶ್ಚರ್ಯ ಆಗ್ತುಟ್ಟುನೇ....!, ಏನು ಮಾಡುದು ಹೇಳ್.. ನಾ ಅರಸಿ ಬಂದ ವೃತ್ತಿನೇ ಅಂಥದ್ದ್. ಇಲ್ಲಿ ಎಲ್ಲಿಟ್ಟುನೇ ಪ್ರೇಮರಸದ ಸುಖದ ಅರಿವು, ದಿನಾದಿನಾ ಲೆಕ್ಕ ಹಾಕಿಕಾಗದಷ್ಟು ನಿರಂತರ ನಿರೀಕ್ಷೆಗ... ಏಕಾಂತಲಿ ತೀವ್ರ ಗೊಂದಲ, ಚಡಪಡಿಕೆ.... ಆದರೂ ದೇಶ ಕಾಯಲೇ ಬೇಕು.
ಇಂಚು, ನಂಗೇ ಯಾಕೋ ಇಂದ್ ರಾತ್ರಿ ತಡಕಣಿಕೆ ಆಗದೇ, ಮನಸ್ಸೊಳಗಿನ ಬಯಕೆ, ಭಾವನೆಗಳನ್ನ ನಿನ್ನ ಹತ್ತಿರ ಹೇಳ್ಕಣಕೂತಾ ಬರಿತೊಳೆನೆ....
ಆಯ್ಯೋ....! ಇಂಚು, ಎಲ್ಲೋ ಸ್ವಲ್ಪ ದೂರಲಿ ಗುಂಡ್ನ ಸೌಂಡ್ ಕೇಳ್ತುಟ್ಟು.. ಇಂದ್ ಯಾವ ಹೆಣ್ಣು ಅನಾಥೆಯಾದೆಯೋ, ಯಾವ ಮಕ್ಕ ಅಪ್ಪನ ಕಳಕಂಡವೆಯೋ, ಯಾವ ಅಮ್ಮಂಗೆ ಮಂಞ ಶಾಶ್ವತ ನೆನಪಾದೆಯೋ, ಹಿಂಗೆ ಸತ್ತ ವೀರನ ಕಣ್ಣಂಚಿನ ಕಡೆ ಗಳಿಗೇಲಿ ಅಚ್ಚಾದ ಬಿಂಬವೂ ಯಾವ ಗೂಡೆದೋ... ನಾಳೆ ದಿನ ನನ್ನ ಕಥೆನೂ ಇಷ್ಟೇ ಮಾರಾಯ್ತಿ !
ಇಂಚು, ಇಲ್ಲಿ ತುಂಬಾ ಹೊತ್ತಾಗ್ಯುಟ್ಟು. ಅಲ್ಲಿ ನೀ ಮೈ ಕೊರೆಯುವ ಚಳಿಗೆ ಕಂಬಳಿ ಹೊದ್ಕಂಡ್ ನನ್ನ ನೆನಪ್ಲಿ ಒಬ್ಬಳೇ ಬೆಚ್ಚಗೇ ಮಲಗಿಯೊಳ... ಅಯ್ಯೋ ಪಾಪ.....! ಆಗಲೇ ಹೇಳದ್ನಲ್ಲಾ, ಎಲ್ಲೋ ಗುಂಡ್ನ ಸೌಂಡ್ ಕೇಳ್ತುಟ್ಟುತಾ... ಇನ್ನ್ ಸ್ವಲ್ಪ ಹೊತ್ಲೇ, ನನ್ನ ಫ್ರೆಂಡ್ ಹರಿ ಜೊತೆ ಅಲ್ಲಿಗೆ ಹೋಗ್ತೊಳೆ.. ಶತ್ರುಗಳ ಜೊತೆ ಹೋರಾಡೋಕು.. ನಮ್ಮಿಬ್ಬರ ಪ್ರಿತಿ ನನ್ನ ಗನ್ಗೂ ಗೊತ್ತುಟ್ಟು... ನಾ ಸೋಲುಲೆ... ಗೆದ್ದು ನಿನ್ನ ಹತ್ರ ಬಂದನೆ....ಕಾಯ್ತಾ ಇರ್...
- ತಳೂರು ಡಿಂಪಿತಾ
arebhase@gmail.com
No comments:
Post a Comment