ಅವ್ಳ ಕಣ್ಣ್ತುಂಬಾ ನೀರ್... ಪಾಪ, ಅದೆಂಥ ಕಷ್ಟಲಿ ಉಟ್ಟೋ ಏನೋ. ಅವಳ್ನ ಕೇಳ್ನೋತಾ ಯೋಚನೆ ಮಾಡ್ದೆ. ಮತ್ತೆ ಅವ್ಳು ಮರಡುದು ಜೋರಾದುತಾ ಯೋಚನೆ ಮಾಡ್ಕಂಡ್ ನಾನ್ ಸುಮ್ಮನಾದೆ. ಆ ಗೂಡೆ ಸ್ವಲ್ಪ ಹೊತ್ತು ಮರ್ಡುದು, ಮತ್ತೆ ಏನೋ ಸಮಾಧಾನ ಆದಂಗೆ ಸುಮ್ಮನಾದು... ಪುನ: ದು:ಖ ತಡೆಯಕ್ಕಾದೆ ಜೋರಾಗಿ ಮರ್ಡುದು, ಕಚರ್ೀಫ್ ತಕ್ಕಂಡ್ ಕಣ್ಣ್ ಮೂಗು ವರೆಸಿಕೊಳ್ಳುದು ಮಾಡ್ತಿತ್ತ್. ಅವ್ಳು ಮರ್ಡಿಕಾಕನ ಬಸ್ಲಿ ಕುದ್ದವೆಲ್ಲಾ ನನ್ನನ್ನೇ ನೋಡ್ತಿದ್ದೊ...
ನಾನ್ ಆಫೀಸ್ಲಿ ಇರ್ಕಾಕನ ಅಮ್ಮ ಫೋನ್ ಮಾಡಿದ್ದೊ. ನನ್ನ ತಂಗೆಗೆ ಡೆಲಿವರಿ ಆಗಿತ್. `ನೀನ್ ಮಾವ ಆಗ್ಯೊಳರಾ' ತಾ ಖುಷಿ ಖುಷೀಲೇ ಹೇಳಿದ್ದೊ. ಆಗ ನಾನ್ ಮಧ್ಯಾಹ್ನ ಮೇಲಿನ ಶಿಫ್ಟ್ಲಿ ಇದ್ದೆ. ಅದೊಂಥರ ವಿಚಿತ್ರ ಶಿಫ್ಟ್. ಮಧ್ಯಾಹ್ನ ಮೂರು ಗಂಟೆಗೆ ಶುರುವಾದ್ರೆ, ಮಧ್ಯರಾತ್ರಿ 12 ಹೊಡೆಯುವ ವರೆಗೆ ಆಫೀಸ್ಲಿ ಇರೋಕು. ನಂಗೂ ತಂಗೆ ಕೂಸುನ ನೋಡಿಕೆ ಆಸೆ ಶುರುವಾತ್. ಕೂಡ್ಲೇ ಮಾರನೇ ದಿನಕ್ಕೆ ರಜೆ ಅಜರ್ಿ ಬರ್ದ್ ಕೊಟ್ಟೆ. ಅಂದ್ ರಾತ್ರಿ 12 ಗಂಟೆವರೆಗೆ ಡ್ಯೂಟಿ ಮಾಡಿ, ಮಡಿಕೇರಿ ಬಸ್ ಹತ್ತಿಕೆ ಯೋಚನೆ ಮಾಡ್ದೆ. ಆಫೀಸ್ ಕ್ಯಾಬ್ಲೇ ಸೆಟಾಲೈಟ್ ಬಸ್ಸ್ಟ್ಯಾಂಡ್ಗೆ ಡ್ರಾಪ್ ತಕ್ಕಂಡೆ.
ಶುಕ್ರವಾರ ಆಗಿದ್ದ್ರಿಂದ ಬಸ್ಗೆಲ್ಲಾ ಫುಲ್ ರಷ್. ವೀಕೆಂಡ್ಗೆ ಊರಿಗೆ ಹೋಗವು, ಮಡಿಕೇರಿ ಕಡೆ ಟ್ರಿಪ್ ಹೊರಟವು.. ಹಿಂಗೆ ಗಿಜಿ ಗಿಜಿ ಜನ. ಅಂತೂ ಒಂದ್ ಮಡಿಕೇರಿ ಬಸ್ ಸಿಕ್ತ್. ಜನರ ತಳ್ಳಾಟ ಮಧ್ಯೆನೇ ಬಸ್ ಹತ್ತಿದೆ. `ಸ್ವಾತಂತ್ರ್ಯ ಹೋರಾಟಗಾರರಿಗಾಗಿ' ತಾ ಬರ್ದಿರ್ವಲ್ಲಿ ಕಿಟಕಿ ಸೀಟ್ ಸಿಕ್ತ್. ನನ್ನ ಪಕ್ಕದ ಸೀಟ್ ಬಿಟ್ಟರೆ, ಬಸ್ಲಿ ಬೇರೆ ಕಡೆ ಸೀಟ್ ಖಾಲಿ ಇತ್ಲೆ. ಇನ್ನೇನ್ ಕಂಡಕ್ಟರ್ `ರೈಯ್ಯಾ...' ತಾ ಹೇಳೊಕು, ಅಷ್ಟೊತ್ತಿಗೆ ಆ ಗೂಡೆ ಅರ್ಜೆಂಟ್ ಅರ್ಜೆಂಟ್ ಆಗಿ ಬಂದ್ ನನ್ನ ಪಕ್ಕದ ಸೀಟ್ಲೇ ಕೂತತ್. ಸುಮಾರು 20-22 ವರ್ಷದ ಪೊರ್ಲುನ ಗೂಡೆ.
`ಸುಂಟಿಕೊಪ್ಪ...' ಆ ಗೂಡೆ ಕಂಡಕ್ಟರ್ಗೆ ಹೇಳಿ ಟಿಕೆಟ್ ತಕಣ್ತ್. ಆಗ್ಲೂ ಅವ್ಳ ಕಣ್ಣ್ಲಿ ನೀರ್. ಕಂಡಕ್ಟರ್ ನನ್ನ ಕಡೆ ಒಂದ್ಸಲ ನೋಡಿ, ಮತ್ತೆ ಅವ್ಳನ್ನೇ ಕೇಳ್ತ್... `ಒಂದೇ ಸೀಟಾ..?' ಅವ್ಳು ಮಾತಾಡ್ತ್ಲೆ, ತಲೆನಾ ಉದ್ದುದ್ದ ಆಡ್ಸಿ, ಹೌದುತೇಳ್ತ್... ಅಷ್ಟೊತ್ತಿಗೆ ನಾನ್ ಕುಶಾಲನಗರಕ್ಕೆ ಟಿಕೆಟ್ ತಕ್ಕಂಡೆ. ಬಸ್ ರಾಮನಗರಲಿ ಒಮ್ಮೆ ಜನ ಇಳ್ಸಿ, ಮತ್ತೊಂದಷ್ಟು ಜನ್ರನ್ನ ಹತ್ಸಿಕಂಡ್ ಮತ್ತೆ ಹೊರಟತ್. ಆದ್ರೂ ನನ್ನ ಪಕ್ಕಲಿ ಕೂತ ಗೂಡೆ ಮರಡುದು ನಿಲ್ಲಿಸ್ತಿಲ್ಲೆ... ನಂಗೆ ಕಿರಿ ಕಿರಿ ಆಕೆ ಶುರುವಾತು. ಆದ್ರೂ ಪಾಪ, ಅವ್ಳಿಗೆ ಅದೆಂಥ ನೋವಿರ್ದೋ ಏನೋತೇಳಿ ಹಂಗೆ ಸುಮ್ಮನೇ ಕಣ್ಣ್ ಮುಚ್ಚಿಕಂಡೆ. ನಿದ್ರೆ ಹತ್ತಿಬಿಡ್ತ್.
`ನಾನು ಮಂಡ್ಯ ಹತ್ತಿರ ಇದ್ದೀನಿ. ಆರೂವರೆ ಹೊತ್ತಿಗೆ ಅಲ್ಲಿರ್ತೀನಿ...' ನನ್ನ ಪಕ್ಕದ ಗೂಡೆ ಹಂಗೆ ಫೋನ್ಲಿ ಯಾರಿಗೋ ಹೇಳಿಕಂಡ್ ಮತ್ತೆ ಜೋರು ಮರ್ಡಿಕೆ ಶುರು ಮಾಡಿಕಾಕನ ನಂಗೆ ಎಚ್ಚರ ಆತ್. ಇದೊಳ್ಳೆ ಕಥೆ, ಒಳ್ಳೇ ಅಳುಬುರುಕಿ ಗಂಟುಬಿತ್ತಲ್ಲತಾ ಯೋಚನೆ ಮಾಡ್ಕಂಡ್ ನಾನ್ ಮೆಲ್ಲೆ ಕಣ್ಣು ಮುಚ್ಚಿಕಂಡೆ. ಮರ್ಡ್ತಿದ್ದ ಅವ್ಳು ಈಗ ಬಿಕ್ಕಳಿಸಿಕೆ ಶುರುಮಾಡ್ತ್. ಮಂಡ್ಯ ದಾಟ್ತಿದ್ದಂಗೆ ಅವ್ಳ ಬಿಕ್ಕಳಿಕೆ ಜೋರ್ ಆತ್. ಒಮ್ಮೆ ಬಲಕ್ಕೆ ತಿರುಗಿ ಅವ್ಳ ಕಡೆ ನೋಡ್ದೆ. ಕಣ್ಣ್ ಒರ್ಸಿಕಂಡೇ ಬಿಕ್ಕಳಿಸ್ತಿತ್. ಅವ್ಳ ಹತ್ರ ಕಣ್ಣೀರ್ ಬಿಟ್ರೆ ಬೇರೆ ನೀರ್ ಇದ್ದಂಗೆ ಕಾಣ್ತ್ಲೆ. ನನ್ನ ಬ್ಯಾಗ್ಂದ ನೀರ್ ತೆಗ್ದ್ ಅವ್ಳ ಮುಂದೆ ಹಿಡ್ದೆ. ಅವ್ಳು ಬೇಡತಾ ಹೇಳುವಂಗೆ ಅಡ್ಡಡ್ಡ ತಲೆ ಆಡಿಸ್ತ್. `ನೀರು ಕುಡೀರಿ ಸರಿ ಹೋಗುತ್ತೆ...' ಅವ್ಳಿಗೆ ನಾನೇನೋ ಆತ್ಮೀಯ ಅನ್ನೋ ಹಂಗೆ ಹೇಳ್ದೆ... ಒಂದ್ಸಲ ನನ್ನ ಮುಖ ನೋಡ್ತ್, ಏನ್ ಅನ್ಸಿತೋ ಏನೋ... ನೀರಿನ ಬಾಟಲಿ ತಕ್ಕಂಡ್ ನಿಧಾನಕ್ಕೆ ಕುಡ್ತ್... ಬಿಕ್ಕಳಿಕೆ ನಿಂತಂಗೆ ಆದ್ಮೇಲೆ, `ಥ್ಯಾಂಕ್ಸ್' ಹೇಳಿ ಬಾಟಲಿ ವಾಪಸ್ ಕೊಡ್ತ್.
ಅವ್ಳನ್ನ ನೋಡಿದ್ರೆ, ರಾತ್ರಿ ಊಟ ಕೂಡ ಮಾಡ್ತ್ಲೆ ಅನ್ನೋ ಹಂಗೆ ಇತ್ತ್. ಬ್ಯಾಗ್ಂದ ಹೈಡ್ ಆ್ಯಂಡ್ ಸೀಕ್ ಬಿಸ್ಕೆಟ್
ತೆಗ್ದ್ ಪ್ಯಾಕೆಟ್ ಓಪನ್ ಮಾಡಿ ಅವ್ಳ ಎದ್ರು ಹಿಡ್ದೆ... ಏನೂ ಮಾತಾಡದೆ, ಅವ್ಳು ಐದಾರು ಬಿಸ್ಕೆಟ್ ತಕ್ಕಂಡ್ ಗಬಗಬನೆ ತಿಂದತ್... ಕೈಭಾಷೆಲೇ ನೀರು ಕೇಳಿ ಕುಡ್ತ್. ನಾನೂ ಬಿಸ್ಕೆಟ್ ತಿಂದ್ ನೀರು ಕುಡ್ದೆ. ಅಷ್ಟು ಹೊತ್ತಿಗೆ ಅವ್ಳು ಮರ್ಡುದು ಕಡ್ಮೆ ಆಗಿತ್ತ್. ಬಹುಶ: ಕಣ್ಣಲ್ಲಿ ನೀರ್ ಆರಿ ಆಗಿತ್ತೋ ಏನೋ... ಇದೇ ಒಳ್ಳೇ ಸಂದರ್ಭತೇಳಿ ಮೆಲ್ಲನೆ ಆ ಗೂಡೆನಾ ಕೇಳ್ದೆ, `ಯಾಕೆ ಆಗ್ಲಿನಿಂದ ಒಂದೇ ಸಮನೇ ಅಳ್ತಿದ್ದೀರಿ? ಏನಾಯ್ತು?' ಅವ್ಳು ಮತ್ತೆ ಮರ್ಡಿಕೆ ಶುರು ಮಾಡ್ತ್... ನಂಗೆ ಯಾಕೆ ಬೇಕಿತ್ತಪ್ಪಾ ಈ ಪ್ರಶ್ನೆ ಕೇಳುವ ಉಸಾಬರಿತಾ ಅನ್ಸಿತ್. ಮರ್ಡುದು ಸ್ವಲ್ಪ ನಿಯಂತ್ರಣಕ್ಕೆ ಬಂದ ಮೇಲೆ ಅವ್ಳಾಗೆ ಶುರು ಮಾಡ್ತ್... ಅವ್ಳ ದು:ಖ ಹೇಳಿಕಣಿಕೆ ಯಾರೋ ಒಬ್ಬ ಬೇಕಿತ್ತ್ ಕಂಡದೆ, ಈಗ ನಾನ್ ಸಿಕ್ಕಿದ್ದೆ.
ಅವ್ಳು ಸಾಫ್ಟ್ವೇರ್ ಎಂಜಿನಿಯರ್. ಕಾಫಿತೋಟಲಿ ರೈಟರ್ ಆಗಿದ್ದ ಅವ್ಳ ಅಪ್ಪ, ಕಷ್ಟಪಟ್ ಈ ಗೂಡೆನ ಎಂಜಿನಿಯರ್ ಮಾಡಿತ್ತ್. ಆದ್ರೆ ಆ ಅಪ್ಪ ಇನ್ನ್ ಇಲ್ಲೆ. ಕಾಫಿ ತೋಟಲಿ ಕೆಲ್ಸ ಮಾಡಿಕಂಡ್ ಇರ್ಕಾಕನ, ಒಂದ್ ಕಾಡಾನೆ ಅವ್ರನ್ನ ಮೆಟ್ಟಿ ಕೊಂದ್ಬಿಟ್ಟಿತ್. ವಿಷಯ ಗೊತ್ತಾದ ಕೂಡ್ಲೇ, ಈ ಗೂಡೆ ಬಸ್ ಹತ್ತಿತ್ತ್... ತನ್ನನ್ನ ಎಂಜಿನಿಯರ್ ಮಾಡಿಕೆ ಅಪ್ಪ ಪಟ್ಟ ಕಷ್ಟ, ಆ ಅಪ್ಪ ಇನ್ನ್ ಇಲ್ಲೆತೇಳುವ ನೋವು ಅವ್ಳನ್ನ ಕಾಡ್ತಿತ್ತ್. ಆ ಅಪ್ಪನ ಹೆಣ ನೋಡುವರೆಗೆ ಅವ್ಳಿಗೆ ಇನ್ನೆಂಥ ಮಾಡಿಕೆ ಸಾಧ್ಯ? ನಾನೊಂದಿಷ್ಟು ಅವ್ಳಿಗೆ ಸಮಾಧಾನ ಮಾಡಿ, ಅವ್ಳಿಷ್ಟಕ್ಕೆ ಅವ್ಳನ್ನ ಬಿಟ್ಟೆ.
ಎಂಥ ವಿಪರ್ಯಾಸ ನೋಡಿ, ಅಂದ್ ಹುಟ್ಟಿದ ನನ್ನ ತಂಗಿ ಕೂಸುನ ನೋಡಿಕೆ ನಾನ್ ಖುಷೀಲಿ ಹೊರ್ಟಿದ್ದೆ. ಆದ್ರೆ ಅದೇ ಬಸ್ಲಿ ಅಪ್ಪನ ಕಳ್ಕಂಡ ಗೂಡೆ ! ಒಂದು ಹುಟ್ಟಿನ ಸಂತಸ... ಮತ್ತೊಂದು ಸಾವಿನ ನೋವು !
arebhase@gmail.com
No comments:
Post a Comment