Thursday 5 January 2012

ಪಾಕದ ಗೂಡೆ...


ಬೆಲ್ಲದ ಪಾಕಲಿ ಮಾಡ್ದಷ್ಟೇ ಪೊರ್ಲು !
ಅದ್ ಕರಿ ಬೆಲ್ಲ ಅಲ್ಲ ಬಿಳಿ !
ಕೋಪಟ್ಟಿ ಬೆಟ್ಟದ ಮೇಲೆ 
ಬೀಳ್ವ ಮಂಜಿನಂಗೆ...
ಮುಟ್ಟಿರೆ ಕರಗಿಹೋದೆ !
ಅವ್ಳು ಪಾಕದ ಗೂಡೆ
ಜುಳು ಜುಳು ನದಿಯ ನಡಿಗೆ
ಹೆಜ್ಜೆ ಮೇಲೆ ಹೆಜ್ಜೆ...
ಝಲ್ ಝಲ್ ಸದ್ದಿನ ಬೆಳ್ಳಿ ಗೆಜ್ಜೆ
ಅಳವಾರದ ಗದ್ದೆ ಬದಿಯ
ನವಿಲಿಗೂ ಬಾಲೆ ಅಂಥ ನಾಟ್ಯ !
ಅವ್ಳು ಪಾಕದ ಗೂಡೆ
ಹುಣ್ಣಿಮೆ ಚಂದಿರನ ಮೇಲೆ
ಪುಟ್ಟ ಕಡು ಕಪ್ಪು ದುಂಬಿ !
ಫಳ ಫಳ ಹೊಳೆವ 
ಮುಖಲಿ ಸಣ್ಣ ಮಚ್ಚೆ ! 
ದೃಷ್ಟಿ ಆಗದಿರ್ಲಿತಾ ದೇವರೇ ಇಟ್ಟದ್ !
ಅವ್ಳು ಪಾಕದ ಗೂಡೆ
ನಾಗತೀರ್ಥಲಿ ಕಾವೇರಿಯ ಝರಿ
ಬೆನ್ನ ಮೇಲೆ ಹರಡ್ಯುಟ್ಟು ಕೇಶರಾಶಿ
ಅದೆಷ್ಟು ಉದ್ದ !
ಬಿಟ್ಟರೆ ನೆಲಕ್ಕೆ ಮುತ್ತು ಕೊಟ್ಟದೆ !
  ಆರು ಮೊಳ ಮಲ್ಲಿಗೆಯೂ ಕಡ್ಮೆನೇ...
ಅವ್ಳು ಪಾಕದ ಗೂಡೆ  
arebhase@gmail.com

No comments:

Post a Comment