Monday 9 January 2012

ಬೈನೆ ಸೇಂದಿ ನೆನಪು...


`ನಂದಿ ಮರ ಹತ್ರ ಉಟ್ಟಲ್ಲಾ, ಅಲ್ಲಿರ್ವ ಬೈನೆದ್ ಸೇಂದಿ ತುಂಬಾ ಸಿಹಿ...'  ಸೇಂದಿನ ಕ್ಯಾನ್ಂದ ಚಿಪ್ಪಿಗೆ ಬಗ್ಗಿಸಿಕೊಡ್ತಾ ಐತಪಜ್ಜ ಹೇಳ್ತಿದ್ರೆ, ನಾವು ಚಪ್ಪರಿಸಿಕಂಡ್ ಕುಡೀತ್ತಿದ್ದೊ.... ಬೈನೆ ಮರನ ಐತಪಜ್ಜ ಒಂದ್ಸಲ ಕೆಳಗೆಂದ ಮೇಲಿನವರೆಗೆ ನೋಡಿರೆ ಸಾಕ್, ಆ ಮರಕ್ಕೆ ಮಡಿಕೆ ಕಟ್ಟಿರೆ ಎಷ್ಟು ಸೇಂದಿ ಸಿಕ್ಕುದು, ಅದರ ರುಚಿ ಹೆಂಗೆ ಇದ್ದದೆ, ಅದ್ರಲ್ಲಿ ಎಷ್ಟು ಟೈಂ ವರೆಗೆ ಸೇಂದಿ ತೆಗೆಯಕ್... ಹಿಂಗೆ ಪೂತರ್ಿ ಜಾತಕನ ತೆಗ್ದ್ ಇಟ್ಟ್ಬಿಟ್ಟದೆ. ಐತಪಜ್ಜತೇಳರಿ ಒಂಥರ `ಸೇಂದಿ ತಜ್ಞ' ಇದ್ದಂಗೆ. 
ಬೆಳಗ್ಗೆ ನಾವು ಏಳಿಕೆ ಮೊದ್ಲು ಅವು ಕತ್ತಿ ತಕ್ಕಂಡ್ ಮಡಿಕೆ ಕಟ್ಟಿದಲ್ಲಿಗೆ ಹೋಗಿಬಿಡ್ತಿದ್ದೊ. ಅಲ್ಲಿ ಮರಕ್ಕೆ ಕಟ್ಟಿರ್ವ ಏಣಿ ಹತ್ತಿ ಕೊಂಬುಗೆ `ಪಟ...ಪಟ..' ತಾ ಬಡಿಯಕಾಕನ ನಮ್ಗೆ ಎಚ್ಚರಿಕೆ ಆಗಿಬಿಡ್ತಿತ್ತ್. ಮುಖ ತೊಳೆಯದೆ ಬೈನೆ ಮರದ ಬುಡಕ್ಕೆ ಓಡಿ ಬಿಡ್ತಿದ್ದೊ. ಸೇಂದಿ ತೆಗ್ದ ಕೂಡ್ಲೇ ಕುಡ್ದರೆ ಸಿಹಿ ಜಾಸ್ತಿ ಇದ್ದದೆ... ನಮ್ಗೆಲ್ಲಾ ಒಂದೊಂದು ಚಿಪ್ಪಿ ಸೇಂದಿ ಕೊಟ್ಟಮೇಲೆನೇ ಐತಪಜ್ಜ ಅಲ್ಲಿಂದ ತಕ್ಕಂಡ್ ಮಾರಿಕೆ ಹೋಗ್ತಿದ್ದದ್.
ಐತಪಜ್ಜನ ಸಹವಾಸ ಮಾಡಿ, ನಮ್ಗೂ ಬೈನೆ ಮರಗಳ ಬಗ್ಗೆ ಸ್ವಲ್ಪ ಸ್ವಲ್ಪ ಗೊತ್ತಾಗಿತ್ತ್. ಯಾವ ಯಾವ ಮರದ ಸೇಂದಿ ರುಚಿ ಹೆಂಗೆ ಇದ್ದದೆತೇ ಕುದ್ದಲ್ಲಿಂದನೇ ಹೇಳಿಬಿಡ್ತಿದ್ದೊ. ಐತಪ್ಪಜ್ಜ ನಂದಿ ಮರಹತ್ರ ಸೇಂದಿ ಇಳ್ಸಿದ್ರೆ, ಅಲ್ಲಿ ನಾವು ಹಾಜರ್ ಇರ್ತಿದ್ದೊ. ಯಾಕೆತೇಳಿರೆ ಅದ್ ಸಿಹಿ ಸಿಹಿ ಸೇಂದಿ. ಇನ್ನ್ ಮಕ್ಕಿ ತೋಟದಲ್ಲಿರ್ವ ಮರದ್ ತುಂಬಾ ಹುಳಿ. ಹೊಸ ತೋಟಲಿರ್ವ ಮರದ್ ಸೇಂದಿ ಕುಡ್ದ ಕೂಡ್ಲೆ ತಲೆ ಸುತ್ತಿಕೆ ಶುರುವಾದೆ. ಹಿಂಗೆ ಒಂದೊಂದು ಬೈನೆ ಮರದ ಕಥೆನೂ ಕುದ್ದಲಿಂದ ಹೇಳಿಬಿಡ್ತಿದ್ದೊ. ಎಳೆ ಬೈನೆ ಗಿಡದ ಗಡ್ಡ ತಿಂಬಕೆ ಕಲ್ಸಿಕೊಟ್ಟದ್, ಈ ಐತಪಜ್ಜ. 
ಹೋದ ವರ್ಷ ಮಾವನ ಮಗ್ಳ ಮದ್ವೆಗೆ ಹೋಗಿಕರ್ಾಕನ, ಅದೇ `ಸೇಂದಿ ತಜ್ಞ' ಐತಪಜ್ಜ ಸಿಕ್ತ್. `ಅಜ್ಜಾ ಈಗ ಯಾವ ಮರದ ಸೇಂದಿ ತುಂಬಾ ಸಿಹಿ ಉಟ್ಟು' ತಾ ಅವ್ರನ್ನ ಕೇಳ್ದೆ. ಐತಪಜ್ಜ ಈಗ ನಿಜವಾಗ್ಲೂ ಅಜ್ಜ ಆಗಿಬಿಟ್ಟಿತ್ತ್. ಅವ್ರನ್ನ ನೋಡಿರೆ, ಮರ ಹತ್ತುವಂಗೆ ಕಾಣ್ತಿತ್ಲೆ. `ಈಗೆಂಥ ಮಂಞ, ಯಾರೂ ಮಡಿಕೆ ಕಟ್ಟುಲೆ...ಹೊಳೆ ಕರೆ ಮರಲಿ ತುಂಬಾ ಸೇಂದಿ ಇದ್ದಂಗೆ ಕಂಡದೆ. ನಂಗೂ ಈಗ ಮರಕ್ಕೆ ಹತ್ತಿಕೆ ಆದುಲೆ....' ತಾ ಐತಪ್ಪಜ್ಜ ನಡ್ಗಿಕಂಡ್, ನಡ್ಗಿಕಂಡ್ ಹೇಳ್ದೊ. ಈಗ ಬೈನೆ ಮರಕ್ಕೆ ಮಡಿಕೆ ಕಟ್ಟಿರೆ, `ಸ್ಕ್ವಾಡ್' ನವ್ರ ಕಾಟನೂ ಉಟ್ಟುತಾ ಐತಪ್ಪಜ್ಜನ ಮಂಞ ಹೇಳ್ತ್.
ಬೈನೆ ಸೇಂದಿದ್ ರುಚಿ ಯೋಚ್ನೆ ಮಾಡಿ, ಈಗ ಸೇಂದಿ ಸಿಕ್ಕರೆ ಎಷ್ಟು ಲಾಯ್ಕ ಇತ್ತ್ತಾ ಅಂದ್ಕಂಡೆ. ಕೊನೆಗೆ ಅಲ್ಲೇ ಸೀನಪ್ಪನ ಮನೆಗೆ ಹೋಗಿ ನೀರಾ ಕುಡ್ದ್ ನಮ್ಮ ಆಸೆ ತೀರಿಸಿಕೊಂಡೋ... ಆದ್ರೂ ಬೈನೆ ಸೇಂದಿದ್ ರುಚಿ ನೀರಾಲಿ ಸಿಕ್ಕುಲ್ಲೆ... 
arebhase@gmail.com

No comments:

Post a Comment