ಹೈದರಾಬಾದ್ತಾ ಹೇಳಿರೆ ಕಣ್ಮುಂದೆ ಬಾದು ಬಿರಿಯಾನಿ. `ಹೈದರಾಬಾದ್ ಬಿರಿಯಾನಿ' ವರ್ಲ್ಡ್ ಫೇಮಸ್. ಬೆಂಗಳೂರ್ಲಿ ಕೂಡ `ಹೈದರಾಬಾದ್ ಬಿರಿಯಾನಿ' ಹೊಟೇಲ್ಗ ತುಂಬಾ ಒಳೊ. ಆದ್ರೆ, ಹೈದರಾಬಾದ್ಲಿ ಸಿಗ್ವ ಬಿರಿಯಾನಿ ಟೇಸ್ಟೇ ಬೇರೆ. ಅದ್ರಲ್ಲೂ `ಬಾವರ್ಚಿ ಹೈದರಾಬಾದ್ ಬಿರಿಯಾನಿ' ಅಂತೂ ಸಕತ್ ರುಚಿ, ಅದೆಂಥ ಹಾಕುವೆತಾ ಮಾತ್ರ ಗೊತ್ಲೆ. ಬಾಸ್ಮತಿ ಅಕ್ಕಿಯಿಂದನೇ ಬಿರಿಯಾನಿ ಮಾಡ್ದರಿಂದ ರೇಟೂ ಜಾಸ್ತಿ...ಕಡಿಮೆತೇಳಿರೆ ನೂರು ರೂಪಾಯಿಂದ ಶುರು ಆದೆ. ಅದೇ ಹೈದರಾಬಾದ್ಲಿ ಇನ್ನೂ ಒಂದು ಬಿರಿಯಾನಿ ಸಿಕ್ಕಿದೆ. ಅದ್ `ಕಲ್ಯಾಣಿ ಬಿರಿಯಾನಿ'
`ಕಲ್ಯಾಣಿ ಬಿರಿಯಾನಿ' ಹೆಸ್ರು ಕೇಳಿಕೆ ಎಷ್ಟು ಲಾಯ್ಕನೋ, ನೋಡಿಕೂ ಅಷ್ಟೇ ಲಾಯ್ಕ ಇದ್ದದೆ...ಕಡ್ಡಿಹಂಗೆ ಉದ್ದುದ್ದ ಬಾಸ್ಮತಿ ಅಕ್ಕಿಯ ಅನ್ನ, ಅದಕ್ಕೆ ಕೆಂಪು-ಹಸಿರು ಬಣ್ಣ, ಮೇಲೆ ಹಂಗೆ ಹರಡಿರ್ವ ಏಲಕ್ಕಿ, ಲವಂಗ, ಪಟ್ಟೆ, ಸಂಬಾರ ಸೊಪ್ಪು...ಮೂಳೆ ಇಲ್ಲದ ಮೆತ್ತನೆ ಮಾಂಸ ! ಘಮ ಘಮ ಪರಿಮಳ. ಆದ್ರೂ ಇದ್ರ ರೇಟ್ ತುಂಬಾ ಕಡ್ಮೆ... ಹೈದರಾಬಾದ್ನ ಹೈವೆ ಸೈಡ್ನ ಡಾಬಾಗಳಲ್ಲಿ 35 ರೂಪಾಯಿ ಕೊಟ್ರೆ, ಹೊಟ್ಟೆತುಂಬಾ `ಕಲ್ಯಾಣಿ ಬಿರಿಯಾನಿ' ಸಿಕ್ಕಿದೆ.
ಹೈದರಾಬಾದ್ನ ರಾಮೋಜಿ ಫಿಲಂ ಸಿಟೀಲಿ ಈಟಿವಿ ಆಫೀಸ್ ಇರ್ದು. ನಾವೆಲ್ಲಾ ಅಲ್ಲಿಂದ ಸುಮಾರು 30 ಕಿಲೋಮೀಟರ್ ದೂರದ `ಸುಷ್ಮಾ'ತೇಳುವಲ್ಲಿ ರೂಂ ಮಾಡಿಕಂಡಿದ್ದೊ. ರುಚಿ ನೋಡ್ನೋತೇಳಿರೆ, ನಾವು ಇದ್ದಲ್ಲಿ ಈ `ಕಲ್ಯಾಣಿ ಬಿರಿಯಾನಿ' ಸಿಕ್ತಿತ್ಲೆ. ಕಂಪೆನಿ ಬಸ್ಲಿ ಆಫೀಸ್ಗೆ ಹೋಕಾಕನ, ಬಾಕಾಕನ `ಕಲ್ಯಾಣಿ ಬಿರಿಯಾನಿ - 35 ರೂ.' ತೇಳುವ ಬೋರ್ಡ್ ನಮ್ಮ ಕಣ್ಣ್ಕುಕ್ಕುತ್ತಿತ್. ಒಂದ್ಸಲ ತಿಂದುನೋಡೊಕುತೇಳುವ ಆಸೆನೂ ನಮಗೆಲ್ಲಾ ಬಂದ್ಬಿಟ್ಟಿತ್ತ್. ಆದ್ರೂ ಏನೋ ಒಂದು ಸಣ್ಣ ಅನುಮಾನ....ಹೊಟೇಲ್ಗಳಲ್ಲಿ ಅಷ್ಟೊಂದು ರೇಟ್ ಇರ್ವ ಬಿರಿಯಾನಿ ಈ ಡಾಬಾಗಳಲ್ಲಿ ಇಷ್ಟು ಕಡ್ಮೆಗೆ ಮಾರಿವೆಯಲ್ಲಾ.. ಏನೋ ಮಸಲತ್ತು ಉಟ್ಟುತಾ ತಲೆ ಕೊರಿಯಕೆ ಶುರುವಾತ್. ಒಂದ್ ವೀಕ್ಲಿ ಆಫ್ ದಿನ `ಶೋಧ'ನೆಗೆ ಹೊರಟೋ...
ಸಂಜೆ ಹೊತ್ತ್... ಹಯತ್ನಗರದಲ್ಲಿರ್ವ, ಡಾಬಾಕ್ಕೆ ತುಂಬಾ ಲಾಯ್ಕಲಿ ಸೀರಿಯಲ್ ಲೈಟ್ ಹಾಕಿದ್ದೊ. ಚಿರಂಜೀವಿದ್ ಯಾವುದೋ ಒಂದ್ ತೆಲುಗು ಹಾಡ್ ಜೋರಾಗಿ ಕೇಳ್ತಿತ್. ಒಳಗೆ ಡಿಮ್ ಲೈಟ್ ಇರ್ವ ಒಂದ್ ಕಡೆ ಹೋಗಿ ಕುದ್ದೊ. ಡಾಬಾ ಪೂತರ್ಿ ಬಿರಿಯಾನಿ ಘಮ ಘಮ ! ನಮ್ಮ ಜೊತೆ ಇದ್ದಂವ ಒಬ್ಬ `ಕಲ್ಯಾಣಿ ಬಿರಿಯಾನಿ'ಗೆ ಆರ್ಡರ್ ಮಾಡಿಯೇ ಬಿಡ್ತ್. ಕಾಲು ಗಂಟೆ ವೇಯ್ಟ್ ಮಾಡ್ದ ಮೇಲೆ ನಮ್ಮ ಟೇಬಲ್ಗೆ ಬಿಸಿಬಿಸಿ `ಕಲ್ಯಾಣಿ ಬಿರಿಯಾನಿ' ಬಾತ್.... ಏನೋ ಡೌಟ್ ಇಟ್ಕಂಡ್ ಮಾಂಸನ ಮುಟ್ಟಿ ನೋಡ್ದೆ... ಯಾಕೋ ಅದ್ ಚಿಕನ್ ಇದ್ದಂಗೆ ಇತ್ಲೆ... ಎಲ್ಲಕ್ಕಿಂತ ಮೊದ್ಲ್ ಆರ್ಡರ್ ಮಾಡ್ದಂವ ಅದಾಗ್ಲೆ ಚಪ್ಪರಿಸಿಕೆ ಶುರ್ ಮಾಡಿಯಾಗಿತ್ತ್. `ಬೋನ್ಲೆಸ್' ಮಾಂಸನ ಎಳ್ದೆಳ್ದ್ ತಿನ್ತಿತ್. ಅಂವ ಹಂಗೆ ತಿಂಬಕಾಕನ ನಂಗೆ ದೂರದಲ್ಲೆಲ್ಲೂ `ಅಂಬಾ' ತೇಳ್ದ ಹಂಗೆ ಆತ್ !
ವೇಯ್ಟರ್ನ ಕರ್ದ್, ನಂಗೆ ಗೊತ್ತಿರ್ವ ಹರಕುಮುರುಕು ತೆಲುಗುಲಿ ಅವ್ನ ಇದೆಂಥ ಮಾಂಸತಾ ಕೇಳ್ದೆ... ನನ್ನ ಊಹೆ ಸರಿಯಾಗಿತ್... ಅದೆಂಥ ಮಾಂಸತಾ ವೇಯ್ಟರ್ ಹೇಳ್ತಿದ್ದ್ರೆ, ನನ್ ಪಕ್ಕ ಚಪ್ಪರಿಸ್ತಿದ್ದಂವ ಬಾಯಿಗೆ ಕೈ ಅಡ್ಡ ಇಟ್ಟ್ಕಂಡ್ ವಾಷ್ಬೇಷನ್ ಕಡೆ ಓಡ್ತಿತ್... ಆಗ ನನ್ನ ಮುಂದೆ ಇದ್ದ `ಕಲ್ಯಾಣಿ ಬಿರಿಯಾನಿ' ಮಧ್ಯೆಂದನೂ `ಅಂಬಾ' ತೇಳುವ ಧ್ವನಿ ಕೇಳ್ತಿತ್...
arebhase@gmail.com
ಹಮ್ ಇನ್ ಕೆಂಚ ಬಿರಿಯಾನಿತ ಹೇಳಿ ನಾಯಿ ಬಿರಿಯಾನಿ ಕೊಡದರೆ ಸಾಕ್
ReplyDelete