ಅಂತೂ ಅಣ್ಣಿ ಹೈದಂಗೆ ಅಮ್ಮಿ ಗೂಡೆ ಜೊತೆ ಮದ್ವೆ ಆತ್ ! ಭಾಗಮಂಡಲ ಗೌಡ ಸಮಾಜಲಿ ಭಾರೀ ಗೌಜಿಲಿ ಮದ್ವೆ ನಡ್ತ್. ಅಣ್ಣಿ ಹೈದನ ಬೆಂಗ್ಳೂರು ಫ್ರೆಂಡ್ಸ್ಗ ಕೂಡ ಮದ್ವೆಗೆ ಬಂದಿದ್ದೊ. ಚೆಟ್ಟಿಲಿ ಹಂದಿಮಾಂಸ ಖಾಲಿ ಆದ್ಮೇಲೆನೇ ಅವು ಆನೇಕಲ್ ಬಸ್ ಹತ್ತಿ ವಾಪಸ್ ಹೋದ್. ಅಣ್ಣಿಗೂ, ಅಮ್ಮಿಗೂ ಹೊಸ ಅನುಭವ ! `ಅದೂ' ಮುಗ್ದ್ ಹೋತ್. ಇನ್ನು ಮದುವೆಯ ಐದನೇ ದಿನ... ತುಪ್ಪ ತಕ್ಕೊಂಡು ಹೋದು. ಮಿಳ್ಳಿಗೆ ತುಪ್ಪ ತುಂಬ್ಸಿ ಅದ್ರಮೇಲೆ ಬಾಳೆ ಎಲೆ ಇಟ್ಟ್, ಬಕ್ಕ್ ಹಗ್ಗಂದ ಕಟ್ಟಿ ಹೊಸ ಜೋಡಿ ಹೊರಟೇ ಬಿಟ್ಟೊ... ಜೊತೇಲಿ ಅಣ್ಣಿನ ಅಕ್ಕ, ಅಕ್ಕನ ಮಂಞ, ನೆರೆಮನೆ ಗೂಡೆ... ಹಿಂಗೆ ಒಟ್ಟು ಐದ್ ಜನ ತುಪ್ಪ ತಕ್ಕಂಡ್ ರಾಮ ಬಸ್ ಹತ್ತಿದೊ..
ಚೇರಂಬಾಣೇಲಿ ಬಸ್ ಇಳ್ದ್ ಆಟೋ ಮಾಡ್ಕಂಡ್ ಎಲ್ಲವೂ ಅಮ್ಮಿ ತವ್ರು ಮನೆಗೆ ಹೊರಟೋ. ಅಣ್ಣಿ ಡ್ರೈವರ್ದ ಹೆಗ್ಲ್ ಮೇಲೆ ಕೈ ಹಾಕ್ಕಂಡ್ ಮುಂದೆ ಕುದ್ದಕಣ್ತ್. ಇನ್ನು ನಾಲ್ಕು ಜನ ಹಿಂದೆ ಸೀಟ್ಲಿ ಅಡ್ಜೆಸ್ಟ್ ಮಾಡ್ಕಂಡ್ ಕುದ್ದುಕೊಂಡೊ. ಪಾಕ ಹೊಳೆ ದಾಟಿದಂಗೆ ಸಿಗ್ವ ಅಪ್ಪ್ಲಿ ಆ ಆಟೋ ಏನು ಮಾಡಿರೂ ಹತ್ತಿತ್ಲೆ. ಕೊನೆಗೆ ಅಣ್ಣಿ ಹೈದ ಇಳ್ದ್, `ಲೇಲೇ ಲೈಸಾ'ತಾ ದೂಡಿ, ಬಿಳಿ ಷಟರ್್ನ ಕೊಳೆ ಮಾಡ್ಕಣ್ತ್. ಕೊನೆಗೂ ಅಮ್ಮಿನ ಅಮ್ಮನ ಮನೆ ಬಾತ್. ನೆಂಟರಿಗೆ ಒಳ್ಳೇ ಉಪಚಾರನೇ ಮಾಡ್ದೊ. ಆಟೋ ದೂಡಿ ಸುಸ್ತಾಗಿದ್ದ ಅಣ್ಣಿ, ನಾದಿನಿ ಕೊಟ್ಟ ಆರೆಂಜ್ ಜ್ಯೂಸ್ನ ಒಂದೇ ಉಸುರಿಗೆ ಬಾಯಿಗೆ ಸುರ್ಕಂಡ್ ಬಿಡ್ತ್. ಅಮ್ಮಿನ ಚಾಲಾಕಿ ತಂಗೆ ಆ ಜ್ಯೂಸ್ಲಿ ಮೆಣ್ಸು ಹುಡಿ ಸೇರ್ಸಿದ್ದದ್, ಜ್ಯೂಸ್ ಕುಡ್ದ್ ಆದ್ಮೆಲೆನೇ ಅಣ್ಣಿಗೆ ಗೊತ್ತಾದ್. ಎಲ್ಲವ್ಕೆ ನಗೆ ಆದ್ರೆ, ಅಣ್ಣಿ ಹೈದನ ಪಾಡ್... ಅಯ್ಯೋ ಪಾಪ !
ಅದ್ ಇದ್ ಮಾತಾಡಿಕಂಡ್ ನೆಂಟರ್ಗ ವಡೆ ತಿನ್ತಿದ್ದೊ... ಅಮ್ಮಿಗೆ ವಡೇಲಿ ಎಂಥದ್ದೋ ಸಿಕ್ಕಿದಂಗೆ ಆತ್. ಉಗ್ದಂಗೆ ಅಲ್ಲ, ನುಂಗಿದಂಗೆ ಅಲ್ಲ... ಅದ್ರೂ ಎಷ್ಟು ಹೊತ್ತು ಸಾಧ್ಯನೋ ಅಷ್ಟೂ ಹೊತ್ತು ಆ ದವಡೆಂದ ಈ ದವಡೆಗೆ, ಈ ದವಡೆಂದ ಆ ದವಡೆಗೆ ಹಾಕಂಡ್ ಅಗೀತ್ತಿದ್ದರೆ, ಅವ್ಳ ನೆರೆಮನೆ ಹೈದಂಗೆ ಜೋರು ನಗೆ. ಅಂವ ಅಮ್ಮಿಗೆ ಕೊಟ್ಟ ವಡೇಲಿ ಬಬಲ್ ಗಮ್ ಹಾಕಿಟ್ಟಿತ್ತ್. ಸರಿ, ಹಂಗೆ ಮಧ್ಯಾಹ್ನ ಆತ್. ಎಲ್ಲವೂ ಊಟಕ್ಕೆ ಎದ್ದೊ.
ಗಮ್ಮತ್ ಊಟ. ಚಪ್ಪರ ದಿನ ಮಾಡ್ದ ಹಂದಿ ಗೈಪು ಐದು ದಿನ ಬಿಸಿ ಮಾಡಿ ಮಾಡಿ, ಈಗ ಒಳ್ಳೆ ಲಾಯ್ಕ ಆಗಿತ್ತ್. ಜೊತೆಗೆ ತುಪ್ಪದನ್ನ, ಕೋಳಿ ಸಾರ್, ಅನ್ನ, ಸಾಂಬಾರ್, ಚೆಟ್ಟು ಪಲ್ಯ, ಅಮ್ಟೆಕಾಯಿ ಉಪ್ಪಿನಕಾಯಿ, ಕೇಸರಿಬಾತ್... ಕೊನೆಗೆ ಚಟ್ನಿ ಕೂಡ ಇತ್ತ್. ತುಪ್ಪ ತರ್ವ ದಿನ ಮಾಡ್ದ ಚಟ್ನಿಲಿ ಏನೋ ಒಂದು ವಿಶೇಷನ ಮಿಕ್ಸ್ ಮಾಡಿದ್ದವೆ. ಅದ್ ಏನುತೇಳ್ದುನ ಹೊಸ ಜೋಡಿ ಹೇಳೊಕು. ಇಲ್ಲೂ ಹಂಗೆ ಆತ್. ಅಣ್ಣಿ, ಅಮ್ಮಿ ಬಿಟ್ಟ್ ಎಲ್ಲವೂ ಊಟ ಮುಗ್ಸಿ ಎದ್ದೊ. ಎಷ್ಟು ಹೊತ್ತು ಆದ್ರೂ ಚಟ್ನಿಗೆ ಏನು ಹಾಕ್ಯೊಳೊತೇಳಿ ಹೇಳಿಕೆ ಈ ಜೋಡಿಗೆ ಆತ್ಲೆ. ಅಮ್ಮಿ ತಂಗೆ ಒಂದು ಕ್ಲೂ ಕೊಟ್ಟತ್. `ಅದ್ ಬಿಳಿ ಇದ್ದದೆ'... `ಸುಣ್ಣ' ಅಣ್ಣಿದ್ ಉತ್ತರ. ಅದ್ಕೆ ಅಮ್ಮಿ, `ನಿಮ್ಮ ತಲೆ, ಸುಣ್ಣನ ಚಟ್ನಿಗೆ ಹಾಕಿವೆನಾ? ಅದ್ ಅಕ್ಕಿ ಇರೋಕು ಕಂಡದೆ' ತಾ ಹೇಳ್ತ್. ಆದ್ರೆ ಆ ಉತ್ರ ಸರಿ ಆತ್ಲೆ... ಬಿಳಿ ಇರ್ವ ಒಂದೊಂದೇ ವಸ್ತುಗಳ್ನ ಅಮ್ಮಿನೂ, ಅಣ್ಣಿನೂ ಹೇಳಿಕೆ ಶುರು ಮಾಡ್ದೊ... `ಹಾಲು, ಮೊಸರು, ನೆಸ್ಲೆ ಚಾಕ್ಲೆಟ್...' ಹೂಂ... ಯಾವ ಉತ್ತರನೂ ಸರಿ ಆತ್ಲೆ... ಅಮ್ಮಿನ ತಂಗೆ ಇನ್ನೊಂದು ಕ್ಲೂ ಕೊಟ್ಟತ್. `ಅದ್ ತಲೇಲಿ ಇದ್ದದೆ...' ಅಣ್ಣಿ ಮುಖನ ಸಿಂಡರಿಸಿಕಣ್ತ್ `ಛೀ... ಹೇನ್ ಹಾಕ್ಯೊಳನಾ ಚೆಟ್ನಿಗೆ ?' ತಾ ಕೇಳ್ತ್... ಅದ್ಕೆ ಅಮ್ಮಿನ ತಂಗೆ, `ಎಂಥ ಭಾವ ನೀವು, ಚಟ್ನಿಗೆ ಯಾರಾರ್ ಹೇನ್ ಹಾಕಿವೆನಾ? ನೀವು ತಪ್ಪು ಒಪ್ಪಿಕಂಡ್ ಉಂಗುರ ಬಿಚ್ಚಿಡಿ, ಉತ್ತರ ನಾನೇ ಹೇಳ್ನೆ'ತಾ ಹೇಳ್ತ್. ಅಣ್ಣಿಗೆ ಹೊರಡುವ ಅಜರ್ೆಂಟ್ ಆಗಿದ್ದ್ರಿಂದ, ಉಂಗುರ ಬಿಚ್ಚಿ ನಾದಿನಿ ಕೈಗೆ ಕೊಡ್ತ್... ಹಂಗಾರೆ ಚಟ್ನಿಗೆ ಹಾಕಿದ್ದ ಆ `ತಲೇಲಿರ್ವ ಬಿಳಿ ವಸ್ತು' ಯಾವ್ದು?
`ಅಯ್ಯೋ ಭಾವ, ಅಷ್ಟೂ ಗೊತ್ತಾತ್ಲೆನಾ ಅದ್ ಮಲ್ಲಿಗೆ ಹೂ..' ತೇಳಿ ಅಮ್ಮಿನ ತಂಗೆ ಅಲ್ಲಿಂದ ಜಾಗ ಖಾಲಿ ಮಾಡ್ತ್...
arebhase@gmail.com
No comments:
Post a Comment