Saturday, 31 December 2011

ಹೊಸ ವರ್ಷಕ್ಕೆ ಹೊಸ ಮಾತು


ಹೊಸ ವರುಷ..
ಹೊಸ ಹರುಷ..
ಹೊಸ ಉತ್ಸಾಹ...
ಹೊಸ ನಿರೀಕ್ಷೆ...
ಹೊಸ ಭರವಸೆ...
ಹೊಸ ನಿರ್ಧಾರ... 
ಹೊಸ ಬೆಳಕು...
ಹೊಸ ಫ್ರೆಂಡ್...
ಹೊಸ ಆಸೆ...
ಹೊಸ ಹೊಳಪು
ಹೊಸ ಕನಸು... 
                                                                                             ಹೊಸ ಬದುಕು
                                                                                     ಶುಭ ತರಲಿ ೨೦೧೨
arebhase@gmail.com

Friday, 30 December 2011

'ಥೇನ್' ಥಕ್ಕಧಿಮ್ಮಿ ತಾ...


ಥಕ್ಕಧಿಮ್ಮಿ ಥಕ್ಕಧಿಮ್ಮಿ ತಾ...
ಮೂಡಣ ತೀರಲಿ `ಥೇನ್' ಕುಣಿತ
ಬಂಗಾಳ ಕೊಲ್ಲೀಂದ ಎದ್ದು ಬಾತ್
ರಣ ಚಂಡಮಾರುತ !
ತಮಿಳರ ನಾಡ್ಲಿ ತಾಂಡವ ನೃತ್ಯ 
ಪಾಂಡಿಚೇರೀಲೂ ಬಿರುಗಾಳಿ ನಾಟ್ಯ 
ಮಳೆಗೆ ಹೆದರ್ಯುಟ್ಟ ತಿರುಪತಿ ತಿಮ್ಮಪ್ಪ
ಸಿಲಿಕಾನ್ ಸಿಟೀಲೂ ಭಾರೀ ಕೋಟ !
ಪ್ರಕೃತಿಗೆ ಯಾಕೆ ಬಂದದೆ ಇಂಥ ಸಿಟ್ಟ್ ?
ಮನುಷ್ಯತೇಳಿರೆ ಅಷ್ಟೊಂದು ಅಸಹ್ಯನಾ?
ಜೀವಸಂಕುಲದ ಮೇಲೆ ತಾಕತ್ ಪ್ರದರ್ಶನನಾ ?
ಬಿಟ್ಟು ಬಿಡ್ ನಿನ್ನ ಕೋಪ !
ಹೊಸ ವರ್ಷ ಬತರ್ುಟ್ಟು..
ಜನ ಖುಷೀಲಿರ್ಲಿ...
`ಥೇನ್', ಸಮಧಾನ...
ಅಬ್ಬರ ಕಡ್ಮೆ ಮಾಡ್ಕ !  
 arebhase@gmail.com

Thursday, 29 December 2011

ಕೆನ್ನೆ ಮುಟ್ಟಿಕೊಳ್ಳುವಂಗೆ ಮಾಡ್ದ ಲೇಖನ !


ವಿಶ್ವೇಶ್ವರ ಭಟ್ ಸ್ವಲ್ಪದಿನ ಹಿಂದೆ ಕನ್ನಡಪ್ರಭಲಿ `ಲೂಸ್ಟಾಕ್' ಬಗ್ಗೆ ಬರ್ದಿದ್ದೊ... ಅದ್ನ ಓದ್ತಿದ್ದಂಗೆ ನನ್ನ ಕೈ ಒಂದ್ಸಲ ಎಡಗೆನ್ನೆ ಮೇಲೆ ಹೋತ್... ಕೆಂಡದಂಗೆ ಕೆಂಪಾಗಿದ್ದ ಎರಡ್ ಕಣ್ಣ್ಗ ನೆನಪಿಗೆ ಬಂದೊ. ಅದ್ ನಾನ್ ಎಸ್ಎಸ್ಎಲ್ಸಿ ಓದ್ತಿದ್ದಾಗ ನಡ್ದ ಘಟನೆ. ಆದ್ರೂ ನಿನ್ನೆ ಮೊನ್ನೆ ನಡ್ದಂಗೆ ಮನಸ್ಲಿ ಹಸಿರಾಗಿ ಉಟ್ಟು.
ಭಾಗಮಂಡಲ ಟೌನ್ಂದ ಕಾವೇರಿ ಹೈಸ್ಕೂಲ್ಗೆ ಮೂರು ಕಿಲೋ ಮೀಟರ್ ದೂರ. ಸಾಮಾನ್ಯವಾಗಿ ಎಲ್ಲಾ ಮಕ್ಕ ನಡ್ಕಂಡೇ ಸ್ಕೂಲ್ಗೆ ಹೋಗ್ತಿದ್ದೊ. ಹಿಂಗೆ ನಡ್ಕಂಡ್ ಹೋಕಾಕನ ಪ್ರಪಂಚದ ಮಾತೆಲ್ಲಾ ಅಲ್ಲಿ ಬಂದ್ಬಿಡ್ತಿತ್ತ್. ಅಂದ್ ಹಂಗೆನೇ, ನನ್ನ ಜೊತೆ ಕೋಡಿ ಮಂಜು ಮತ್ತೊಬ್ಬ `ಪುಣ್ಯಾತ್ಮ' ಇತ್ತ್. ಮಂಜು ನನ್ನ ಕ್ಲಾಸ್ಮೆಟ್ ಇನ್ನೊಬ್ಬ `ಪುಣ್ಯಾತ್ಮ' ಇತ್ತಲ್ಲ, ಅಂವ ಪಿಯುಸಿ. ನಡ್ಕಂಡ್ ಹೋಕಾಕನ, ಲೋಕರೂಢಿ ಮಾತ್ಗ ಮುಗ್ದಮೇಲೆ, ನಮ್ಮ ಒಬ್ಬ ಲೆಕ್ಚರರ್ ವಿಷಯ ಬಾತ್. ಆ ಲೆಕ್ಚರರ್ ಬಗ್ಗೆ ಯಾವನೋ ಕೆಟ್ಟದಾಗಿ ಮಾತಾಡಿತ್ತ್. ಆ ಲೆಕ್ಚರರ್ ಒಬ್ಬ ನಡತೆಕೆಟ್ಟ ಹೆಂಗಸಿನ ಜೊತೆ ಸಂಬಂಧ ಇಟ್ಕೊಂಡುಟ್ಟು ತೇಳ್ದು, ಅಂವ ಹಬ್ಬಿಸಿದ್ದ ಸುದ್ದಿಯ ತಾತ್ಪರ್ಯ. ನಾನ್ ಇದ್ನ ಮಂಜು ಜೊತೆ ಹೇಳ್ದೆ. `ಏ ನೋಡ್ರ... ಸರ್ ಬಗ್ಗೆ ಅಂವ ಹಿಂಗಿಂಗೆ ಹೇಳ್ತುಟ್ಟು...ಪಾಪ, ಒಳ್ಳೇ ಸರ್ ಅವು. ಅವ್ರ ಬಗ್ಗೆ ಅಂಥದ್ದೆಲ್ಲಾ ಹೇಳ್ದು ಸರಿ ಅಲ್ಲ' ತಾ ನಾ ಹೇಳ್ದೆ.
ನಮ್ಮ ಜೊತೆ ಆ ಪಿಯುಸಿ ಪುಣ್ಯಾತ್ಮ ಇತ್ತಲ್ಲಾ, ಅವಂಗೆ ಆ ಲೆಕ್ಚರ್ನ ಒಳ್ಳೆದ್ ಮಾಡಿಕಣೋಕೂತ ಇತ್ತೋ ಏನೋ... ಸ್ಕೂಲ್ಗೆ ಹೋದಮೇಲೆ ನನ್ನ ಮೇಲೆ ಸರಿಯಾಗೇ ಫಿಟ್ಟಿಂಗ್ ಇಟ್ಟ್ಬಿಟ್ಟತ್ತ್. ಲೆಕ್ಚರರ್ ಮೇಲೆ ನಾನೇ ಏನೇನೋ ಹೇಳ್ಕಂಡ್ ಹೋಗ್ತೊಳೆತಾ ಒಂದಿಷ್ಟ್ ಉಪ್ಪು, ಖಾರ, ಹುಳಿ ಎಲ್ಲಾ ಸೇರ್ಸಿ ಚಾಡಿ ಹೇಳ್ತ್. ಆ ಲೆಕ್ಚರರ್ ನಮ್ಮ ಪುಣ್ಯಾತ್ಮ ಹೇಳ್ದೆಲ್ಲಾ ನಿಜತಾ ತಿಳ್ಕೊಂಡೋ. ಆದ್ರೆ ನಾನ್ ಮಂಜು ಜೊತೆ ಮಾತಾಡಿದ್ನ ಅಲ್ಲೇ ಮರ್ತ್ಬಿಟ್ಟಿದ್ದೆ.
ಜನಾರ್ದನ ಮಾಷ್ಟ್ರ್ ಗಣಿತ ಪಾಠ ಮಾಡ್ತಿದ್ದೊ. ಪಿವನ್ ಸೋಮಣ್ಣ ಬಂದ್ ನನ್ನ ಕರ್ತ್... `ಪ್ರಿನ್ಸಿಪಾಲ್ ಕರೀತೊಳೊ, ನೀನ್ ಬರೋಕುಗಡ...'ತಾ ಹೇಳ್ತ್. ಆದ್ರೆ ಅಲ್ಲಿ ಹೋದ್ರೆ ಪ್ರಿನ್ಸಿಪಾಲ್ ಇತ್ಲೆ. ಆ ಲೆಕ್ಚರರ್ ಕುದ್ದಿದ್ದೊ. `ಬಾ ಇಲ್ಲಿ...' ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಕಿರ್ಚಿದೊ... ನಂಗೆ ಗೊತ್ತಿಲ್ಲದಂಗೆ, ನಾ ಹೋಗಿ ಅವ್ರ ಮುಂದೆ ನಿಂತ್ಕಂಡಿದ್ದೆ. `ಟಪ್' ಜೋರಾಗಿ ಶಬ್ದ ಬಂದದಷ್ಟೇ ಗೊತ್ತ್.. ಅವ್ರ ಬಲಗೈ ನನ್ನ ಎಡಗೆನ್ನೆ ಮೇಲೆ 5 ಬೆರಳುಗಳ ಗುರ್ತು ಮಾಡಿತ್ತ್. ಅದೇ ನೋವ್ಲಿ ಅವ್ರ ಮುಖ ನೋಡ್ದೆ, ಎರಡೂ ಕಣ್ಣುಗ ಕೆಂಡದಂಗೆ ಕೆಂಪಾಗಿದ್ದೊ. 
ಅಂದೇ ಕೊನೆ... ನಾನ್ ಯಾರ ಬಗ್ಗೆನೂ ಏನೂ ಹೇಳಿಕಾದುತಾ ನಿಧರ್ಾರ ತಕ್ಕಂಡೆ... ಈಗ್ಲೂ ಹಂಗೆನೇ ನಡ್ಕಳ್ತೊಳೆ. ಆದ್ರೂ ಒಮ್ಮೊಮ್ಮೆ ಅಪವಾದಗ ಬಂದದೆ... ಬಹುಶ: ಚೌತಿ ದಿನ ಅಪ್ಪಿತಪ್ಪಿ ಚಂದ್ರನ ನೋಡಿಬಿಟ್ಟೊಳೆತೇಳ್ಕಂಡ್ ನಂಗೆ ನಾನೇ ಸಮಧಾನ ಮಾಡಿಕಂಡನೆ...
arebhase@gmail.com

Wednesday, 28 December 2011

ಜಗತ್ತಿನ ಹೆಚ್ಹು ಬೆಲೆಯ ಬೈಕ್ ಗ.....


ಅಕಾಡೆಮಿ ವಿರುದ್ಧ ಶುರುವಾಗಿಯುಟ್ಟು ಲಾಬಿ

 ನಮ್ಮವರ ಸತತ ಪ್ರಯತ್ನದ ಫಲವಾಗಿ 'ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ' ಶುರುವಾಗಿಯುಟ್ಟು. ಇದ್ರ ಅಧ್ಯಕ್ಷ ಮತ್ತೆ ಸದಸ್ಯ ಆಕೆ ನಮ್ಮವರೊಳಗೆನೆ ಕಾಲೆಳೆಯುವ ಆಟ ನಡೀತುಟ್ಟು. ಅಷ್ಟರಲ್ಲೇ ಅಕಾಡೆಮಿ ಆಗುದರ ವಿರುದ್ಧ ಕೆಲವು ಲಾಬಿ ಮಾಡ್ತೊಳೊ. ಇದಕ್ಕೆ ಇವತ್ತ್ನ ಕನ್ನಡಪ್ರಭಲಿ ಬಂದಿರ್ವ ಈ ಪತ್ರನೇ ಸಾಕ್ಷಿ. ನಾವು ಇದ್ರ ವಿರುದ್ಧ ಧ್ವನಿ ಎತ್ತೋಕು. ಶುರುವಾಗಿರೋ ಅಕಾಡೆಮಿನ ಉಳ್ಸಿಕೊಳ್ವ ಪ್ರಯತ್ನ ಮಾಡೋಕು. ಬನ್ನಿ, ಎಲ್ಲವೂ ಕೈ ಜೋಡಿಸನ...   
arebhase@gmail.com

ತ್ರಿವೇಣಿ ಸಂಗಮ


ಗಂಡನ ಜೊತೆ ಜಗಳ ಆಡಿ
ಸಿಟ್ಟ್ಂದ ಬ್ರಹ್ಮಗಿರೀಂದ ಹಾರಿ
ವಯ್ಯಾರಂದ ಹರಿದುಬಂದದೆ
ಕಾವೇರಿ !
ನಾಗತೀರ್ಥಲಿ ಹಾವಿನಷ್ಟೇ ಸಪೂರ
ಹರಿವ ಹಾದೀಲಿ ಕಲ್ಲೂ ಭಾರ !
ಸಿರಗಜೆ ಮನೆ ದಾಟಿ ಬಾಕಾಕನ
ನೀ ಅದೆಷ್ಟು ತೋರ !
ಉದ್ದಕ್ಕೆ ಮಲಗ್ಯುಟ್ಟು ಮರಳು ರಾಶಿ
ಅಲ್ಲಿ ಸ್ನಾನ ಮಾಡುದೇ ತುಂಬಾ ಖುಷಿ
ಒಂದು ಕಡೇಂದ ಹರ್ದು ಬರ್ವ ಕಾವೇರಿ
ಮತ್ತೊಂದು ಬದೀಂದ ಕನ್ನಿಕೆಯ ಝರಿ
ಅಲ್ಲೊಬ್ಬ ಗುಪ್ತಗಾನಿಯೂ ಉಟ್ಟು !
ಮಾಡ್ದೆ ಮೋಡಿ ಅದೃಶ್ಯದ ವೇಷ ತೊಟ್ಟು
ಅಕ್ಕ ತಂಗಿ ಸೇರುವಲ್ಲೇ ಅವಳ ಹುಟ್ಟು !
ಕರ್ದವೆ ಎಲ್ಲಾ `ಸುಜ್ಯೋತಿ' ಹೆಸರಿಟ್ಟ್..
ಬಲಗಡೆ ಸೊಂಪಗಿ ನಿಂತುಟ್ಟು ನಾಗಬನ
ಹಿಂದೆ ತಿರುಗಿರೆ ಎತ್ತರಕ್ಕೆ...ಸಂಗಮವನ
ಎದುರುಗಡೆ ಇರ್ವ ಭಗಂಡೇಶ್ವರಂಗೂ ನಮನ !
ಎಲ್ಲಾ ನೋಡ್ಕಂಡ್ ಮುಳುಗು ಹಾಕಿವೆ ಜನ
ಇದ್ ತ್ರಿವೇಣಿ ಸಂಗಮ...
arebhase@gmail.com


Tuesday, 27 December 2011

`ಹಿಂಗಾದ್ರೆ ಉದ್ಧಾರ ಆದಂಗೆನೇ... !'


ನಮ್ಮವರ ಪ್ರಯತ್ನದ ಫಲವಾಗಿ ಸಕರ್ಾರ `ಕನರ್ಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ' ಶುರು ಮಾಡಿಕೆ ಆಜ್ಞೆ ಹೊರಡಿಸ್ಯುಟ್ಟು. ಅದಕ್ಕೆ ಅಧ್ಯಕ್ಷ ಮತ್ತೆ ಸದಸ್ಯರ ನೇಮಕ, ಸಿಬ್ಬಂದಿ ಆಯ್ಕೆ, ಅಕಾಡೆಮಿ ಹೆಂಗೆ ಕೆಲ್ಸ ಮಾಡೋಕು ಇಂಥದ್ದೆಲ್ಲ ಇನ್ನೂ ನಿಧರ್ಾರ ಆತ್ಲೆ. ಈ ಬಗ್ಗೆ ಮತ್ತೊಂದು ಆದೇಶನ ಸಕರ್ಾರ ಇನ್ನಷ್ಟೇ ಹೊರಡಿಸೋಕು. ಇದು ಬೇಗ ಆಗೋಕುತೇಳಿರೆ ಸಕರ್ಾರದ ಮೇಲೆ ಮತ್ತೆ ಒತ್ತಡ ಹಾಕುದು ಅಗತ್ಯ. ಏಕೆತೇಳಿರೆ ಜನಪ್ರತಿನಿಧಿಗಳಿಗೆ ಇರ್ವ ಕಾಳಜಿ ಅಧಿಕಾರಿಗಳಿಗೆ ಇರ್ದು ಕಡಿಮೆ. ಆದ್ರೆ, `ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ರು' ತೇಳುವ ಗಾದೆ ಉಟ್ಟಲ್ಲಾ ಹಂಗೆ ನಮ್ಮಲ್ಲಿ ಸ್ವಲ್ಪ ಜನ ಮಾಡ್ತೊಳೊ. ಇದ್ರಿಂದ ಕೈಗೆ ಬಂದ `ತುತ್ತು' ಬಾಯಿಗೆ ಬಾರದಂಗೆ ಆಗಿಬಿಡುವ ಸಾಧ್ಯತೆಗಳೂ ಉಟ್ಟು !
ನಿಜ, ಅಕಾಡೆಮಿಗೆ ಅಧ್ಯಕ್ಷ ಮತ್ತೆ ಸದಸ್ಯ ಆಗುವವ್ಕೆ ನಮ್ಮ ಕಲೆ, ಸಂಸ್ಕೃತಿ, ಆಚಾರ-ವಿಚಾರ ಎಲ್ಲಾ ಲಾಯ್ಕ ಗೊತ್ತಿರೋಕು. ಭವಿಷ್ಯನ ಯೋಚನೆ ಮಾಡ್ವ ಗುಣ ಇರೋಕು. ಇದಕ್ಕೆ ಈಗ ಕೆಲ ಅರ್ಹರ ಹೆಸರೇ ಕೇಳಿ ಬರ್ತುಟ್ಟು. ದುರಂತ ನೋಡಿ, ಇಲ್ಲೂ ಕಾಲೆಳೆಯುವವು ಹುಟ್ಟಿಕೊಂಡೊಳೊ. `ನಂಗೆ ಸಿಕ್ಕದಿದ್ದರೂ ಪರ್ವಾಗಿಲ್ಲೆ, ಅವಂಗಂತೂ ಸಿಕ್ಕಿಕಾದ್' ತೇಳುವ ಮನಸ್ಥಿತಿಯವು ಎಲ್ಲವನ್ನೂ ಹಾಳು ಮಾಡಿಕೆ ಹೊರಟೊಳೊ. ಗೌಡರ ಕನಸು `ಕನರ್ಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ' ಹೆಂಗೂ ಶುರುವಾಗ್ಯುಟ್ಟು. ಇದು ಸದುಪಯೋಗ ಆಗ್ವಂಗೆ ನೋಡಿಕೊಳ್ವ ಜವಾಬ್ದಾರಿ ನಮ್ಮಲ್ಲಿ `ದೊಡ್ಡವು' ಅನ್ನಿಸಿಕೊಂಡವರ ಮೇಲೆ ಉಟ್ಟು.
ಆಡಳಿತ ಪಕ್ಷಗಳಿಗೆ ಒಂದು ಸಾಮಾನ್ಯ `ಖಾಯಿಲೆ' ಉಟ್ಟು. ಪಕ್ಷಕ್ಕಾಗಿ ಕೆಲಸ ಮಾಡ್ದವ್ರನ್ನ, ಅವ್ಕೆ ಅರ್ಹತೆ ಇಲ್ಲದಿದ್ದ್ರೂ ಸಕರ್ಾರದ ಸಂಸ್ಥೆಗಳಲ್ಲಿ ನೇಮಕ ಮಾಡಿವೆ. ನಮ್ಮ ಅರೆಭಾಷೆ ಅಕಾಡೆಮಿಲೂ ಈ ರೀತಿ ಆದುಲ್ಲೆತಾ ಹೇಳಿಕೆ ಆಲೆ. ಏಕಂದ್ರೆ, ಕೊಡಗಿಂದ ಬಂದ ಮಾಹಿತಿ ಪ್ರಕಾರ ತುಂಬಾ ಜನ ಈಗಾಗ್ಲೇ ಕೊಂಬಾರನ ಬೋಪಯ್ಯನವರ ಹಿಂದೆ ಬಿದ್ದೊಳೊ ಗಡ. ಅಕಾಡೆಮಿ ಶುರುವಾಕೆ ಮೊದಲೇ ಇಂಥದ್ದೆಲ್ಲಾ ನಡೀತ್ತುಟ್ಟತೇಳಿರೆ, ಆಮೇಲೆ ದೇವರೇ ಗತಿ !
ಈ ವಿಷಯಲಿ ನಾವು ಸ್ವಲ್ಪ ತುಳು ಅಕಾಡೆಮಿ ಕಡೆ ನೋಡಕ್. ಭಾಷೆ, ಸಂಸ್ಕೃತಿ, ಕಲೆ ಉಳಿಸುವಲ್ಲಿ ತುಳು ಅಕಾಡೆಮಿ ಒಳ್ಳೇ ಕೆಲಸ ಮಾಡ್ತುಟ್ಟು. ಈಗ ಅವು ತುಳು ಭಾಷೆಗಾಗಿ ಬೇರೆ ವಿಶ್ವವಿದ್ಯಾಲಯನೇ ಕೊಡಿತೇಳಿ ಕೇಳಿಕೆ ಹೊರಟೊಳೊ. ನಮ್ಮ ಅಕ್ಕ, ಪಕ್ಕದ ಭಾಷೆಗ ಹಿಂಗೆ ಅಭಿವೃದ್ಧಿ ಆಗ್ತಿದ್ದ್ರೆ, ನಮ್ಮಲ್ಲಿ ಮಾತ್ರ ಒಳಜಗಳ ಎಲ್ಲದಕ್ಕೂ ಕಲ್ಲು ಹಾಕ್ತುಟ್ಟು. 
`ಓ ದೇವರೆ, ನಮ್ಮ ಜನಾಂಗಲಿ ಒಳ್ಳೆದು ಮಾಡಿಕೆ ದೊಡ್ಡವು ಅನ್ನಸಿಕೊಂಡವ್ಕೆ ಈಗ್ಲಾದ್ರೂ ಒಳ್ಳೆ ಬುದ್ಧಿ ಕೊಡು' 
 arebhase@gmail.com

Monday, 26 December 2011

ವೀರಯೋಧ ಗುಡ್ಡಮನೆ ಅಪ್ಪಯ್ಯಗೌಡ


1887ಕ್ಕೆ ಸಿಪಾಯಿ ದಂಗೆ ನಡ್ದದೆ. ಇದ್ನ ಮೊದಲ ಸ್ವಾತಂತ್ರ್ಯ ಸಂಗ್ರಾಮತೇಳಿ ಗುರುತಿಸಿವೆ. ಆದ್ರೆ ಅದಕ್ಕೂ ಮೊದ್ಲೇ ಕೊಡಗು ದಕ್ಷಿಣ ಕನ್ನಡ ಭಾಗಲಿ ಬ್ರಿಟಿಷರ ವಿರುದ್ಧ ಭಾರೀ ಹೋರಾಟ ನಡ್ದಿತ್ತ್. ಗೌಡುಗ ಇದ್ರ ನೇತೃತ್ವ ವಹಿಸಿದ್ದೊತೇಳ್ದು, ನಮ್ಗೆ ಹೆಮ್ಮೆಯ ವಿಷಯ. ಅಂದ್ ಹೋರಾಟ ಮಾಡ್ದ ಆ ತಂಡಲ್ಲಿದ್ದ ಪ್ರಮುಖರಲ್ಲಿ ಗುಡ್ಡೆಮನೆ ಅಪ್ಪಯ್ಯಗೌಡ ಕೂಡ ಒಬ್ಬ ಆಗಿದ್ದೋ. ಗುಡ್ಡೆಮನೆ ಅಪ್ಪಯ್ಯಗೌಡರ ಹೋರಾಟ ಬ್ರಿಟಿಷರನ್ನ ಎಷ್ಟು ಹೆದ್ರಿಸಿತ್ತ್ ತಾ ಹೇಳಿರೆ, ಮಡಿಕೇರಿ ಕೋಟೆ ಮುಂಭಾಗಲಿ ಅವ್ರನ್ನ ಎಲ್ಲರ ಎದ್ರು ಗಲ್ಲಿಗೆ ಏರಿಸಿದ್ದೊ. ಇಲ್ಲಿನ ಸ್ವಾತಂತ್ರ್ಯ ಹೋರಾಟದ ಹಿಂದೆನೂ ದೊಡ್ಡ ಕಥೆ ಉಟ್ಟು.
ಅದು ಸುಮಾರ್ 1700ನೇ ಇಸವಿ. ಇಕ್ಕೇರಿ ರಾಜ ಸೋಮಶೇಖರ ಸುಳ್ಯ ಭಾಗನ ಕೊಡಗಿನ ದೊಡ್ಡವೀರ ರಾಜೇಂದ್ರಂಗೆ ಬಹುಮಾನವಾಗಿ ಕೊಟ್ಟದೆ. ಇಂವ ಕೊಡಗಿನ ಹಾಲೇರಿ ವಂಶದ ರಾಜ. ದೊಡ್ಡವೀರ ರಾಜೇಂದ್ರ ಆದ್ಮೇಲೆ ಚಿಕ್ಕವೀರ ರಾಜೇಂದ್ರಂಗೆ ಅಧಿಕಾರ ಸಿಕ್ಕಿದೆ. 1834 ಏಪ್ರಿಲ್ 10ಕ್ಕೆ ಬ್ರಿಟಿಷರು ಚಿಕ್ಕವೀರ ರಾಜೇಂದ್ರಂಗೆ ಮೋಸ ಮಾಡಿ ಕೊಡಗ್ನ ತಮ್ಮ ವಶಕ್ಕೆ ತಕ್ಕಂಡವೆ. ಆಡಳಿತಕ್ಕೆ ಅನುಕೂಲ ಆಗಲಿತೇಳಿ ಸುಳ್ಯ ಮತ್ತೆ ಪುತ್ತೂರ್ನ ಮಂಗಳೂರು ವಿಭಾಗಕ್ಕೆ ಸೇರಿಸಿಕೊಂಡವೆ. ಆಗ ಬ್ರಿಟಿಷರ ವಿರುದ್ಧ ತುಂಬಾ ಹೋರಾಟಗ ನಡ್ದದೆ. ಆದ್ರಲ್ಲಿ ಮುಖ್ಯವಾಗಿರ್ದು ಕೊಡಗು, ಕೆನರಾ ಬಂಡಾಯ ಅಥವಾ ಅಮರಸುಳ್ಯ ದಂಗೆ
ಪೆರಾಜೆ, ಚೆಂಬು, ಚೊಕ್ಕಾಡಿ, ಬಳಪದ ಗೌಡ ಮುಖಂಡರುಗ, ಕೊಡಗುನ ಜನರನ್ನೆಲ್ಲಾ ಕೆದಂಬಾಡಿ ರಾಮಯ್ಯ ಗೌಡ ಒಂದು ಕಡೆ ಸೇರಿಸುವ ಪ್ರಯತ್ನ ಮಾಡಿವೆ. ಮಲೆಕುಡಿಯರು, ಹೆಗ್ಡೆಗ, ಪೆರಾಜೆಯ ವೀರಣ್ಣ ಬಂಟ, ಸುಬ್ರಾಯ ಹೆಗ್ಡೆ, ಮತ್ತೆ ಕೊಡಗುನ ಗುಡ್ಡೇಮನೆ ಅಪ್ಪಯ್ಯಗೌಡರ ನೇತೃತ್ವಲಿ ಯೋಧರ ತಂಡಗ ರಚನೆ ಆದೆ. ಕೂಜುಗೋಡ್ನ ಕಟ್ಟೇಮನೆ ಮುಖ್ಯಸ್ಥರು ಇದಕ್ಕೆಲ್ಲಾ ಸಹಾಯ ಕೊಟ್ಟವೆ. ಪುತ್ತೂರು ಮತ್ತೆ ಮಂಗಳೂರ್ನ ವಶಪಡಿಸಿಕೊಂಬದು, ಸುಳ್ಯ ಮತ್ತೆ ಕೊಡುಗುಲಿ ಒಂದೇ ಸಮಯಕ್ಕೆ ಹೋರಾಟ ಮಾಡ್ದು ಇವರೆಲ್ಲರ ಉದ್ದೇಶ ಆಗಿತ್. ಎಲ್ಲವೂ ತುಂಬಾ ತುಂಬಾ ರಹಸ್ಯವಾಗಿ ನಡ್ದಿತ್ತ್.
ಕೊಡಗ್ನ ಗುಡ್ಡೇಮನೆ ಅಪ್ಪಯ್ಯ ಗೌಡ ನೇತೃತ್ವದಲ್ಲಿ ಇದ್ದ ಯೋಧರ ಪಡೆ ತೊಡಿಕಾನ ಮೂಲಕ ದಕ್ಷಿಣ ಕನ್ನಡಕ್ಕೆ ಪ್ರವೇಶ ಮಾಡ್ತ್. ಹಂಗೆ ಶುರುವಾದ ದಾಳಿಲಿ 1837ರ ಏಪ್ರಿಲ್ 3ಕ್ಕೆ ಪುತ್ತೂರು, 4ಕ್ಕೆ ಪಾಣೆಮಂಗಳೂರುನ ಈ ಹೋರಾಟಗಾರರ ತಂಡ ಬ್ರಿಟಿಷರಿಂದ ವಶಪಡಿಸಿಕೊಂಡೊ. ಏಪ್ರಿಲ್ 6ಕ್ಕೆ ಮಂಗಳೂರ್ನ ಕೂಡ ಗೆದ್ದಾಗಿತ್ ! ಅಲ್ಲಿನ ಬಾವುಟ ಗುಡ್ಡಲಿ ಕೊಡಗಿನ ಕಲ್ಯಾಣಪ್ಪನ ಧ್ವಜ ಏರಿಸಿ ಖುಷಿಪಟ್ಟಿದ್ದೊ. ಈ ಹೋರಾಟಲಿ ಗೌಡುಗ ಉತ್ಸಾಹಲಿ ಪಾಲ್ಗೊಂಡಿದ್ದೊ. ಮತ್ತೆ ಅದ್ ನಮ್ಮವರ ಶೌರ್ಯಕ್ಕೆ ಸಿಕ್ಕ ಗೆಲುವಾಗಿತ್ತ್.
ಸೋತಾದ್ಮೇಲೆ ಬ್ರಿಟಿಷರು ಸುಮ್ನೆ ಕುದ್ದಿತ್ಲೆ. ಏಪ್ರಿಲ್ 16ಕ್ಕೆ ಕೇರಳದ ಕಣ್ಣನೂರಿಂದ ಮತ್ತೆ ತಮ್ಮ ಸೈನಿಕರನ್ನ ಕರೆಸಿಕೊಂಡೊ. ಆಗ ನಡ್ದ ಯುದ್ಧ ನಮ್ಮ ವೀರರ್ ಇದ್ದ ತಂಡಕ್ಕೆ ದೊಡ್ಡ ಹಿನ್ನಡೆ ತಂದಿಟ್ಟತ್. ತುಂಬಾ ಜನ ಗೌಡ ಯೋಧರು ತೀರ್ಕೊಂಡೊ. ಅಂದೇ ಮೋಸಂದ ಬ್ರಿಟಿಷರು ಗುಡ್ಡೇಮನೆ ಅಪ್ಪಯ್ಯ ಗೌಡರನ್ನ ಬಂಧಿಸಿದೊ.
1837 ಅಕ್ಟೋಬರ್ 31. ಗೌಡುಗಳ ಪಾಲಿಗೆ ದು:ಖದ ದಿನ. ಅಂದ್ ಬೆಳಗ್ಗೆ 10 ಗಂಟೆಗೆ ಗುಡ್ಡೇಮನೆ ಅಪ್ಪಯ್ಯ ಗೌಡರನ್ನ ಬ್ರಿಟಿಷರು ಮಡಿಕೇರಿ ಕೋಟೆ ಮುಂಭಾಗಲಿ ಸಾರ್ವಜನಿಕವಾಗಿ ಗಲ್ಲಿಗೆ ಏರಿಸಿದೊ. ಬ್ರಿಟಿಷರ್ ಅಂದ್ ಎಷ್ಟು ಕ್ರೂರವಾಗಿ ವತರ್ಿಸಿದ್ದೋತೇಳಿರೆ, ಈ ಗಲ್ಲಿಗೆ ಏರಿಸುದನ್ನ ನೋಡಿಕೆ ಕೊಡಗ್ನ ಎಲ್ಲಾ ಪಟೇಲರ್, ರೈತರ್ ಬರೋಕೂತೇಳಿ ಬ್ರಿಟಷ್ ಅಧಿಕಾರಿ ಲಿಹಾಡರ್ಿ ಆಜ್ಞೆ ಮಾಡಿತ್. ಮುಂದೆ ಯಾರಾರ್ ದಂಗೆ ಏಳುವೋತೇಳೋ ಭಯನೂ ಇದ್ರ ಹಿಂದೆ ಬ್ರಿಟಿಷರಿಗೆ ಇತ್ತ್.
ಇಂಥ ವೀರ ಕೊಡಗಿನ ಗುಡ್ಡೇಮನೆ ಅಪ್ಪಯ್ಯ ಗೌಡ ಅವ್ರ ಸಾಹಸ, ಮುಂದಿನ ಪೀಳಿಗೆಗೂ ಗೊತ್ತಾಕು. ಇದನ್ನ ದೃಷ್ಟಿಲಿ ಇಟ್ಕಂಡ್ ಮಡಿಕೇರಿಯ ಸುದರ್ಶನ ವೃತ್ತಲಿ ಗುಡ್ಡೇಮನೆ ಅಪ್ಪಯ್ಯ ಗೌಡರ ಪುತ್ಥಳಿ ನಿಲ್ಲಿಸಿಯೊಳೊ. ಮುಖ್ಯಮಂತ್ರಿ ದೇವರಗುಂಡ ಸದಾನಂದ ಗೌಡ ಈ ಪುತ್ಥಳಿನ ಜನವರಿ 2ಕ್ಕೆ ಅನಾವರಣ ಮಾಡಿವೆ. (ಸದಾನಂದ ಗೌಡ, ಗುಡ್ಡೆಮನೆಯ ಅಳಿಯ. ಅವ್ರ ಹೆಣ್ಣ್ ದಾಟಿ ಗುಡ್ಡಮನೆಯವು)
ಗೌಡರ ಹೆಮ್ಮೆಯ ಈ ಸಮಾರಂಭಕ್ಕೆ ಭಾರಿ ಸಿದ್ಧತೆ ನಡ್ದುಟ್ಟು. ಹೆಚ್ಚು ಹೆಚ್ಚು ಜನ ಇಲ್ಲಿಗೆ ಬರೋಕುತೇಳಿ ನಮ್ಮ ಸಮಾಜದ ಮುಖಂಡರ್ ಕೇಳ್ಕೊಂಡೊಳೊ. ಇದ್ರ ಜೊತೆಗೆ ಕೊಡಗು-ದಕ್ಷಿಣ ಗೌಡ ಯೂಥ್ ವಿಂಗ್ನವು ಬೆಂಗಳೂರ್ಂದ ಮಡಿಕೇರಿಗೆ ರ್ಯಾಲಿ ಕೂಡ ಮಾಡ್ತೊಳೊ....
ಜನವರಿ 2ಕ್ಕೆ ಬನ್ನಿ ಮಡಿಕೇರಿಗೆ...

(ಪೂರಕ ಮಾಹಿತಿ: ಪುದಿಯನೆರವನ ರಿಶಿತ್ ಮಾದಯ್ಯ ಮತ್ತು 10 ಕುಟುಂಬ 18 ಗೋತ್ರ ಅರೆಭಾಷಾ ಸಾಕ್ಷ್ಯಚಿತ್ರ ಟೀಂ )
arebhase@gmail.com

Sunday, 25 December 2011

ಶಾಲೆಗಳಲ್ಲಿ ತಮಾಷೆ !




ಭಾಗಮಂಡಲ ಕಡೆ ಸ್ಕೂಲ್ಗಳಲ್ಲಿ ಕೂಡ ಅರೆಭಾಷೆ ಒಂಥರ `ರಾಷ್ಟ್ರೀಯ ಭಾಷೆ' ಇದ್ದಂಗೆ. ಮಕ್ಕ ಮಕ್ಕ ಮಾತಾಡಿಕನ ಅರೆಭಾಷೆನೇ ಮಾತಾಡ್ದು. ಅಯ್ಯಂಗೇರೀಂದ ಬರ್ವ ಅಬ್ದುಲನೇ ಇರ್ಲಿ, ಚೆಟ್ಟಿಮಾನಿಂದ ಬರ್ವ ಕೊಡವ ಹೈದನೇ ಆಗಿರ್ಲಿ, ಎಲ್ಲವೂ ಅರೆಭಾಷೆಲೇ ಮಾತಾಡ್ದು. ಈ ವಿಷಯ ಕ್ಲಾಸ್ಗಳಲ್ಲಿ ಒಂದೊಂದ್ಸಲ ತುಂಬಾ ತಮಾಷೆ ನಡೆಯಕ್ಕೆ ಕಾರಣ ಆಗ್ತಿತ್ತ್.
ಭಾಗಮಂಡಲ ಹೈಸ್ಕೂಲ್ಲಿ ಶ್ರೀಕೃಷ್ಣ ಭಟ್ತೇಳಿ ಒಬ್ಬ ಮಾಷ್ಟ್ರು ಒಳೊ. ಅವು ಗಣಿತ ಪಾಠ ಮಾಡಿವೆ. ನಾವು ಅಲ್ಲಿ ಶಾಲೆಗೆ ಹೋಕಾಕನ ಈ ಮಾಷ್ಟ್ರು ತುಂಬಾ ಹೊಡಿತ್ತಿದ್ದೊ. (ಈಗ ಹಂಗೆ ಹೊಡ್ದವೆನಾತ ಗೊತ್ಲೆ) ಹೇಳಿಕೇಳಿ ನಮ್ಮಂತವ್ಕೆ ಲೆಕ್ಕತೇಳಿರೇ ಯಾವಾಗ್ಲೂ ಗಟ್ಟಿ ಕಡಂಬುಟ್ಟು ಇದ್ದಂಗೆ. ಹಂಗಾಗಿ ಪೆಟ್ಟು ಸ್ವಲ್ಪ ಜಾಸ್ತಿನೇ ಬೀಳ್ತಿತ್. ಕೆನ್ನೆಗೆ ಛಟೀರ್ತಾ ಹೊಡೆಯುದು ಅವ್ರ ಸ್ಟೈಲ್. ಮಕ್ಕ ಎಲ್ಲಾ ಅವ್ರನ್ನ ಕರೀತ್ತಿದ್ದದ್ `ಭಟ್ಟ ಮಾಷ್ಟ್ರು' ತೇಳಿಯೇ... 8ನೇ ಕ್ಲಾಸ್ `ಬಿ' ಸೆಕ್ಸನ್ಗೆ `ಭಟ್ಟ ಮಾಷ್ಟ್ರು' ಕ್ಲಾಸ್ ಟೀಚರ್. ಗಣಿತದ ಜೊತೆ ಭೌತಶಾಸ್ತ್ರನೂ ಆವೇ ಪಾಠ ಮಾಡ್ತಿದ್ದೊ. ಅಂದ್ರೆ ದಿನಲಿ ಎರಡೆರಡು ಪೀರಿಯಡ್ ! ಒಂದೊಂದು ಸಲ ಎರಡೂ ಪೀರಿಯಡ್ಗಳ್ಲಿ ಎಲ್ಲವ್ಕೂ `ಲಾಠಿ ಚಾಜರ್್' ಆಗಿಬಿಡ್ತಿತ್ತ್. ಅವು ಒಂದ್ ದಿನ ಬಾತ್ಲೆತೇಳಿರೇ ನಮ್ಗೆಲ್ಲಾ ಖುಷಿಯೋ ಖುಷಿ `ಇಂದ್ ಭಟ್ಟ ಬಾಲೆ ಗಡ' ತೇಳಿಕಂಡ್ ಮಕ್ಕ ತಿರ್ಗಾಡ್ತಿದ್ದೊ. ಮಾಷ್ಟ್ರು ಬಾದುಲ್ಲೆತೇಳುವ ಖುಷೀಲಿ `ಭಟ್ಟ ಮಾಷ್ಟ್ರು' ಹೋಗಿ ನಮ್ಮ ಬಾಯೀಲಿ ಬರೀ `ಭಟ್ಟ' ಉಳ್ಕಂಡ್ಬಿಡ್ತಿತ್ತ್ !
`ಭಟ್ಟ ಮಾಷ್ಟ್ರು' ಮಂಗಳೂರು ಕಡೆಯವು. ಅರೆಭಾಷೆ ಸ್ವಲ್ಪ ಸ್ವಲ್ಪ ಅರ್ಥ ಮಾಡ್ಕೊಳ್ತಿದ್ದೊ. ಒಂದೊಂದ್ಸಲ ಮೂಡ್ ಬಂದಾಗ ಅರೆಭಾಷೆಲೇ ಮಾತಾಡಿ ಜೋಕ್ ಮಾಡ್ತಿದ್ದೊ. `ಭಟ್ಟ ಮಾಷ್ಟ್ರು' ಹೋಗಿ ನಮ್ಮ ಬಾಯೀಲಿ `ಭಟ್ಟ' ಮಾತ್ರ ಉಳ್ಕಂಡಿದ್ದದ್ ಅವ್ಕೂ ಹೆಂಗೋ ಗೊತ್ತಾಗಿತ್ತ್. ಕ್ಲಾಸ್ಗೆ ಬಾಕಾಕನ ಒಂದೊಂದ್ಸಲ ಅವೇ `ಭಟ್ಟ ಬಾತ್ ಭಟ್ಟ' ತೇಳಿಕಂಡೇ ಬರ್ತಿದ್ದೊ. ನಂ ಕ್ಲಾಸ್ಗೆ ತಣ್ಣಿಮಾನಿಂದ ಒಬ್ಬ ಹೈದ ಬರ್ತಿತ್. ಮಲ್ಲೇಶತೇಳಿ ಅವ್ನ ಹೆಸ್ರ್. ಅವಂದ್ ಅಪ್ಪಟ ಅರೆಭಾಷೆ. ಒಂದು ವಾರ ಮಲ್ಲೇಶ ಸ್ಕೂಲ್ಗೆ ಚಕ್ಕರ್ ಹೊಡ್ದಿತ್ತ್. ಅಂವ ವಾಪಸ್ ಸ್ಕೂಲ್ಗೆ ಬಂದ ದಿನ, ಕ್ಲಾಸ್ ಟೀಚರ್ ಆಗಿದ್ದ `ಭಟ್ಟ ಮಾಷ್ಟ್ರು', `ಯಾಕೋ ಒಂದು ವಾರ ಬಂದಿಲ್ಲ?' ತಾ ಕೇಳ್ದೊ... ಅದ್ಕೆ ಮಲ್ಲೇಶ `ದೊಂಡೆ ಬೇನೆ ಸಾ...' ತಾ ಉತ್ತರ ಕೊಟ್ಟತ್. ಎಲ್ಲವ್ಕೆ ಜೋರು ನಗೆ. ಇಂವ ಎಂಥ ಹೇಳ್ತುಟ್ಟುತಾ ನಮ್ಮ `ಭಟ್ಟ ಮಾಷ್ಟ್ರಿ'ಗೆ ಗೊತ್ತಾತ್ಲೆ. `ದೊಂಡೆ ಬೇನೆನಾ..? ಏನೋ ಹಾಗೆ ಹೇಳಿದ್ರೆ ?' ತಾ ಮತ್ತೆ ಕೇಳ್ದೊ. ಆಗ ಮಲ್ಲೇಶ ಅವ್ನ ಗಂಟಲ್ ಹಿಡ್ಕಂಡ್ `ಸಾ... ನಂಗೆ ಇಲ್ಲೇ ಬೇನೆ ಆಗ್ತಿತ್ತು... ಅದ್ಕೆ ದೊಂಡೆ ಬೇನೆತಾ ಹೇಳ್ದೆ' ತಾ ಹೇಳ್ತ್. ಅಂದ್ `ಭಟ್ಟ ಮಾಷ್ಟ್ರು' ಮಕ್ಕಳ ಜೊತೆ ಸೇರ್ಕಂಡ್ ಜೋರಾಗಿ ನಗಾಡಿಬಿಟ್ಟಿದ್ದೊ.
ಸ್ಕೂಲ್ಲಿ ಮಾತಾಡಿಕಾಕನ ಹಿಂಗೆ ಅರೆಭಾಷೆ ಮಿಶ್ರ ಆಗಿ ತುಂಬಾ ಸಲ ತಮಾಷೆಯ ಪ್ರಸಂಗಗ ಸೃಷ್ಟಿಯಾಗಿದ್ದೊ.
arebhase@gmail.com

Saturday, 24 December 2011

ಹಳೇ ನೆನಪಿಗೆ ಜಾರಿಬಿದ್ದಾಗ...


ಕೊಡಗು ಅಂದ್ರೆ, ರುಚಿರುಚಿಯಾದ ಜೇನ್ ನೆನಪಿಗೆ ಬಂದ್ ಬಾಯಲ್ಲಿ ಹಂಗೆನೇ ನೀರು ಸುರ್ದದೆ. ಅದ್ರಲ್ಲೂ ಈ ಡಿಸೆಂಬರ್ ತಿಂಗಳ ಜೇನು ಉಟ್ಟಲ್ಲಾ ತುಂಬಾ ಟೇಸ್ಟ್. ಭತ್ತದ ಹೂನ ಮಕರಂದಲಿ ಈ ಜೇನು ತಯಾರಾದೆ. ಬಾಟಲೀಲಿ ಇಟ್ಟ ಜೇನ್ನ ತೆಗ್ದ್ ತಿಂದರೆ ಅದ್ರ ನಿಜವಾದ ರುಚಿ ಗೊತ್ತಾದುಲ್ಲೆ. ಪೆಟ್ಟಿಗೇಂದ ಎರಿಗಳ್ನ ತೆಗ್ದ್ ಅದ್ನ ಜೇನು ಮೆಷಿನ್ಗೆ ಹಾಕಿಕ್ಕೆ ಮೊದ್ಲು, ಆ ಎರಿಯ ಮೇಲು ಭಾಗ ಸಿಪ್ಪೆನ ಸಪೂರಕ್ಕೆ ತೆಗ್ದವೆ. ಆ ತೆಗ್ದ ಭಾಗ ಉಟ್ಟಲ್ಲಾ, ಅಲ್ಲಿ ಸ್ವಲ್ಪ ಸ್ವಲ್ಪ ಜೇನ್ ಇದ್ದದೆ. ಇದನ್ನ ಆ ಮೇಣದ ಜೊತೆಲೇ ತಿನ್ನೋಕು... ಆಹಾ ! ಆ ರುಚಿ ನೀವು ಯಾವತ್ತಿಗೂ ಮರೆಯಕ್ಕಿಲ್ಲೆ...  
ಮೊದ್ಲೆಲ್ಲಾ ಬೇಸಿಗೆ ರಜೆ ಸಿಕ್ಕಿತ್ತೇಳಿರೇ ಸಾಕ್, 2 ತಿಂಗ ಪೂತರ್ಿ ತಾತನ ಮನೇಲೇ ಬಿಡಾರ ! ನಮ್ಮಂಗೆ ಅಲ್ಲಿಗೆ ನಮ್ಮ ಆಂಟಿ ಮಕ್ಕ, ಮಾವನ ಮಕ್ಕತೇಳಿಕಂಡ್ ಸುಮಾರ್ ಎಂಟ್ಹತ್ತು ಮಕ್ಕ ಬರ್ತಿದ್ದೋ. ಶಾಲೇಗೆ ಹೋದ್ರೆ ಅಲ್ಲಿ ಪಾಠ ಮಾತ್ರ ಕಲಿಯಕ್. ಆದ್ರೆ ಇಂತ ಮಕ್ಕ, ಮಕ್ಕ ಸೇರ್ವ ಜಾಗಲಿ ಪಾಠಕ್ಕಿಂತ ಬೇರೆಯದ್ದೇ ಆಗಿರ್ವ ವಿಷಯಗ ಗೊತ್ತಾದೆ ! ಎರಡು ಬೆರಳು ನಾಲಿಗೆ ಕೆಳಗೆ ಇಟ್ಟ್, ವಿಷಲ್ ಹೊಡೆಯಕೆ ನಾ ಕಲ್ತದ್ದ್ ಹಿಂಗೆನೇ ! ಹೊಳೇಗೆ ಹೋಗಿ ದನಗಳ್ನ ಸ್ನಾನ ಮಾಡಿಸಿಕಾಕನ ಈಜುದು ಕೂಡ ಕಲ್ತ್ಬಿಟ್ಟಿದ್ದೊ ! ಹೆಂಗೆ ತಿಂದರೆ ಜೇನು ತುಂಬಾ ಟೇಸ್ಟ್ತೇಳ್ದು ಗೊತ್ತಾದೂ ಈ ಮಕ್ಕಳಾಟಂದನೇ !
ನನ್ನ ದೊಡ್ಡಮಾವ ದೊಡ್ಡ ಕೃಷಿಕ. ಎಲ್ಲವೂ ಕಾಫಿ ಬೆಳ್ದ್ ದುಡ್ಡ್ ಮಾಡ್ತಿದ್ರೆ, ಅದೆಲ್ಲಿಂದನೋ ಟೀ ಗಿಡ ತಂದ್ ಬೆಟ್ಟದ ಮೇಲೆ ನೆಟ್ಟ್ ದುಡ್ಡು ಕಳ್ಕಂಡವ್ ಇವು. ಇಂಥವ್ಕೆ ಜೇನು ನೊಣಗ ತುಂಬಾ ಲಾಯ್ಕ ಹೊಂದಿಕೊಂಡಿದ್ದೊ. ತೋಟಲಿ ತುಂಬಾ ಕಡೆ ಇಟ್ಟಿದ್ದ ಪೆಟ್ಟಿಗೆಗಳಲ್ಲಿ ಒಳ್ಳೇ ಜೇನ್ ಸಿಕ್ತಿತ್. (ಈಗ ಅವೂ ದುಡ್ಡುಕೊಟ್ಟೇ ಭಾಗಮಂಡಲಂದ ಜೇನು ತಾದು) ಒಂದೇ ಒಂದು ನೊಣದಿಂದ ಕಚ್ಚಿಸಿಕೊಳ್ಳದೇ ಪೆಟ್ಟಿಗೇಂದ ಜೇನು ತೆಗೀತ್ತಿದ್ದೊ. ನಮ್ಗೆಲ್ಲಾ ಜೇನು ಪೆಟ್ಟಿಗೆ ಹತ್ರ ಹೋಕೆನೇ ಹೆದ್ರಿಕೆ. ಅಂಥದ್ರಲ್ಲಿ ಮಾವ ಸುಲಭಲಿ ಜೇನು ತೆಗೀತ್ತಿದ್ದಿದ್ದನ್ನ, ಹುಲ್ಲುಮುಂಡ ಸೆರೇಲಿ ನಿಂತ್ಕಂಡ್ ನಾವೆಲ್ಲಾ ಕುತೂಹಲಂದ ನೋಡ್ತಿದ್ದೊ. 
ಪೆಟ್ಟಿಗೆಂದ ಜೇನ್ ತೆಗೆಯುದೇಳಿರೆ, ಎರಿಗಳ್ನ ತೆಗೆಯುದು. ಆ ಎರಿಗಳ್ನ ತಂದ್, ಅದ್ರ ಮೇಲಿರ್ವ ಮೇಣದ ಸಿಪ್ಪೆನ ತೆಳ್ಳಂಗೆ ಕೀಸಿ (ಇದೇ ಮೇಣದ ಸಿಪ್ಪೆನ ಅಗ್ದ್ ತಿಂದರೆ ತುಂಬಾ ರುಚಿತಾ ನಾ ಹೇಳ್ದ್) ಮೆಷಿನ್ಗೆ ಹಾಕಿ ತಿರುಗಿಸಿರೆ, ಮೆಷಿನ್ ಬುಡಲಿರ್ವ ಟ್ಯಾಪ್ಲಿ ಚಿನ್ನದ ಬಣ್ಣಲಿ ಗಟ್ಟಿ ಜೇನ್ ಬಂದದೆ. ಹಿಂಗೆ ಮೆಷಿನ್ ತಿರುಗಿಸಿಕೂ ನಮ್ಮ ಮಧ್ಯೆ ಪೈಪೋಟಿ ನಡೀತ್ತಿತ್ತ್. ಇಲ್ಲಿ ಸಿಕ್ವ ಜೇನ್ನ ಸೋಸಿ ಗಾಜ್ನ ಬಾಟ್ಲಿಲಿ ಇಟ್ಟ್ರೆ, ನೂರು ವರ್ಷ ಕಳೆದ್ರೂ ಹಂಗೆನೇ ಇದ್ದದೆ. 
ಇಂಥದ್ದನೆಲ್ಲಾ ಯೋಚನೆ ಮಾಡಿಕಾಕನ ಆ ಕಾಲನೇ ಎಷ್ಟು ಲಾಯ್ಕತಾ ಅನ್ಸಿದೆ. ಈ ಒಂದು ವಿಷಯಲ್ಲಂತೂ ನಾವು ಪುಣ್ಯ ಮಾಡಿದ್ದೊ. ಈಗಿನ ಎಷ್ಟು ಮಕ್ಕಳಿಗೆ ಇಂಥ ಅವಕಾಶ ಸಿಕ್ಕಿದೆ ? ರಜೆ ಸಿಕಿರೆ ಸಾಕ್ ಟ್ಯೂಷನ್ ಹಾವಳಿ. ಹಂಗಾಗಿ ಪುಸ್ತಕದ ಬದನೆಕಾಯಿ ಬಿಟ್ಟರೆ ಬೇರೆ ಎಂತ ಕೂಡ ತಿಳ್ಕಂಬಕೆ ಆದುಲ್ಲೆ...

- `ಸುಮಾ' 
arebhase@gmail.com

Friday, 23 December 2011

ಓ ಗೂಡೆ, ಚಳಿಯಾಗ್ತುಟ್ಟು !


ಅಬ್ಬಬ್ಬಾ ಎಂಥಾ ಕೋಟ !
ಕಂಬಳಿ ಮೇಲೆ ಕಂಬಳಿ
ಹೊದ್ದು ಮಲಗಿರೂ
ನುಗ್ಗಿ ಬಂದದೆ !
ಪೆಗ್ ಹಾಕಂವ ಕ್ವಾಟ್ರ್
ಖಾಲಿ ಮಾಡ್ಯುಟ್ಟು.. !
ಬೀಡಿ ಬಿಟ್ಟ್ ಸಿಗರೇಟ್ ಹಿಡ್ದುಟ್ಟು
ಏನು ಮಾಡಿರೂ ಚಳಿ ತಡಿಯಕ್ಕಾಲೆ !
ಕಣ್ಣ್ಗ ಮಾತ್ರ ಪಿಳಿಪಿಳಿ ಹೊಳ್ದವೆ
ಮುಖ ಪೂರ್ತಿ ಮಂಕಿ ಕ್ಯಾಪ್ !
ಎರಡೂ ಕೈ ತೊಡೆಸೆರೇಲಿ
ಕೋಟ ಮಾತ್ರ ಕಡ್ಮೆ ಆದುಲ್ಲೆ !
ಬೆಳಗ್ಗೆದ್ರೆ ಆನೆ ಹೂಸಿದಂಗೆ
ಆಕಾಶಂದ ಇಳ್ದ್ ಬಂದ ಮಂಜು !
ಹುಲ್ಲು ದಾರೀಲಿ ಇಬ್ಬನಿ ರಾಗ
ಕಾಲ್ ಮರಕಟ್ಟಿ ಹೋಗುವಂಗೆ ಕೋಟ !
ಇನ್ನೆಷ್ಟು ದಿನ ಈ ಕೋಟದ ಕಾಟ ?
ನನ್ನ ಗೂಡೆ ಇಲ್ಲಿದ್ದಿದ್ದರೆ...
ಒಂದೇ ಒಂದು ಸಿಹಿಮುತ್ತು...
ಚಳಿಯೇ ಹೆದರಿ ಓಡ್ತಿತ್ !

- 'ಸುಮಾ'
arebhase@gmail.com


ಕೊಲೆವರಿ ಹಾಡ್ನ್ ಮ್ಯೂಸಿಕ್ ...

ಇಲ್ಲಿ ಕ್ಲಿಕ್ ಮಾಡಿರೆ ಕೊಲೆವರಿ ಹಾಡ್ನ್ ಮ್ಯೂಸಿಕ್ ಸಿಕ್ಕಿದೆ.
ಇಲ್ಲಿರ್ವ 'ಟೈಟ್ ಮಾಸ್ಟರ್ ' ಪದ್ಯನ ಆ ಮ್ಯೂಸಿಕ್ ಗೆ ಸರಿಯಾಗಿ ಹಾಡಿ ಖುಷಿಪಡಿ....  
arebhase@gmail.com

(ತಮಿಳ್ನ ಕೊಲೆವೆರಿ ಹಾಡ್ನ ಮ್ಯೂಸಿಕ್ ಇಟ್ಕಂಡ್ ಅರೆಭಾಷೇಲಿ ಹಾಡಿರೆ ಹೆಂಗಿರ್ದು? ಅಂಥ ಒಂದು ಪ್ರಯೋಗ ಇಲ್ಲಿ ಮಾಡ್ಯೊಳೊ. ಕೊಲೆವೆರಿ ಹಾಡ್ ಟ್ಯೂನ್ಗೆ ಈ ಪದನ ಒಂದ್ಸಲಿ ಹಾಡಿ ನೋಡಿ, ಎಂಜಾಯ್ ಮಾಡಿ )

 ಬಾಯ್ಸ್...
ಐಯಾಮ್ ಸಿಂಗ್ ಸಾಂಗ್
ಸೂಪ್ ಸಾಂಗ್
ಫ್ಲಾಪ್ ಸಾಂಗ್
ವೈ ದಿಸ್ ಡ್ರಿಂಕಿಂಗ್ಡ್ರಿಂಕಿಂಗ್,ಡ್ರಿಂಕಿಂಗ್ ರಾ
ವೈ ದಿಸ್ ಡ್ರಿಂಕಿಂಗ್ಡ್ರಿಂಕಿಂಗ್,ಡ್ರಿಂಕಿಂಗ್ ರಾ
ರಿದಂ ಕರೆಕ್ಟ್ ?
ವೈ ದಿಸ್ ಡ್ರಿಂಕಿಂಗ್ಡ್ರಿಂಕಿಂಗ್,ಡ್ರಿಂಕಿಂಗ್ ರಾ
ಮೈಂಟೈನ್ ಪ್ಲೀಸ್..
ªÉÊ ¢¸ï ræAQAUï..... gÁ?
UÁè¸ï vÀÄA¨Á ºÀ¤©Ã ºÀ¤©Ã..
ºÀ¤©Ã PÀ®gï UÉÆïïØ !
ºÀ¤©Ã PÀÄqÀÝAªÀ mÉÊmï mÉÊlÆ
ªÉÊ ¢¸ï ræAQAUï ræAQAUï ræAQAUï gÁ
ªÉÊ ¢¸ï ræAQAUï ræAQAUï ræAQAUï gÁ
ªÉÊmï PÀ®gï ¨É棃 ¸ÉÃA¢
¸ÉÃA¢ mÉøïÖ ¹éÃmÉÆà ¹éÃmï
¹éÃmï EzÀÝgÀÆ PÀÄqÀÝAªÀ mÉÊlÆ..
FUÀ ¸ÉÃA¢ ¹PÀÄÌzÉà E¯Éè..
ªÉÊ ¢¸ï ræAQAUï ræAQAUï ræAQAUï gÁ
ªÉÊ ¢¸ï ræAQAUï ræAQAUï ræAQAUï gÁ
¨sÁªÀ, UÁè¸ï vÀPÁ... ºÀA¢UÉÊ¥ÀÄ£ÀÆ »qÀÌ
¥À¥À¥ÁA ¥À¥À¥ÁA ¥À¥À¥ÁA ¥À¥À¥ÁA ¥Á¥ÁA
ºÉAUÀÄlÄÖ ?
¸ÀÆ¥Àgï ¨sÁªÀ... gÉr..
M£ï, lÆ, wæÃ.. ¥sÉÆÃgï....
ªÁí ªÁmï J QPï ¨sÁªÀ !
NPÉ ¨sÁªÀ...
ಈಗ ಕಳ್ಳ್ ಚೇಂಜ್..
ಕೈಲಿ ಗ್ಲಾಸ್, ಗ್ಲಾಸ್ಲಿ ಬೀರು
ಬೀರ್ ತುಂಬಾ ನೀರು !
ಕುಡ್ದ್ ಕುಡ್ದ್, ಬೀರು ಕುಡ್ದ್
ಬಾತ್ರೂಂ ಕಡೆಗೆ ಓಡ್ದು
ಓಸಿ ಓಸಿ ಓಮೈ ಓಸಿ
ತೋರ್ಸು ನಿನ್ನ ಪವರ್ರು
ಓಸಿ ಕುಡ್ದು, ತುಂಬಾ ಬೋರು
ದಿಸ್ ಸಾಂಗ್ ಯು ಫಾರ್ ಸೂಪರ್ ಬಾಯ್ಸ್
ಇನ್ನೂ ಬೇಕಾ ಒರಿಜಿನಲ್ ಚಾಯ್ಸ್ ?
ªÉÊ ¢¸ï ræAQAUï ræAQAUï ræAQAUï gÁ
ªÉÊ ¢¸ï ræAQAUï ræAQAUï ræAQAUï gÁ

`ಸುಮಾ'

Thursday, 22 December 2011

ಜೇನು ಬೇಟೆ !


ನಂದಿ ಮರದ ಮೇಲೆ
ದೊಡ್ಡಜೇನ್ ಗೂಡು
ಮೊರದಗಲ ಗಾತ್ರ, ಕಂದು ಬಣ್ಣ
ಅದ್ರ ಮೇಲೆ ಬಿತ್ತ್ ಚೋಮುಣಿ ಕಣ್ಣ್ !
ಆಕಾಶದಷ್ಟ್ ಎತ್ತರದ ಮರ
ಕೊಡೆ ಬಿಡಿಸಿದಂಗೆ ನಿತ್ತುಟ್ಟು
ಅಡೀಲಿ ಒಂದೂ ಕೊಂಬೆಗ ಇಲ್ಲೆ
ಮೇಲೆ ಇರ್ವ ಜೇನು ಕರೀತ್ತುಟ್ಟು !
10 ಕೆಜಿ ಇರುದಾ ಜೇನು ?
ಮರಿಗಾ ಕುಡ್ದು ಬಿಟ್ಟೊಳನಾ ?
ಚಳಿ ಬೇರೆ, ಬೆರ್ಸಿ ಕಚ್ಚಿಬಿಡುದಾ?
ಮನಸೊಳಗೇ ಲೆಕ್ಕ ಹಾಕಿತ್ ಚೋಮುಣಿ
ಆದದ್ದಾಗಲಿ ಇಂದ್ ರಾತ್ರಿನೇ ಜೇನ್ಬೇಟೆ
ಮೂಲೆಮನೆ ಮೊಣ್ಣಪ್ಪನೂ ಸೇರ್ಕಂಡತ್
ಮುಖ ಮುಚ್ಚಿಕೆ ಬಲೆ ಬಲೆ ಬ್ಯಾಗ್
ಬೆಂಕಿ ಇಡಿಕೆ ಹುಲ್ಲು ರೆಡಿಯಾತ್
ರಾತ್ರಿಯಾತ್,  ನಂದಿ ಮರದ ಬುಡಲಿ
ಸದ್ದಿಲ್ಲದೆ ಸೇರಿದ್ದೋ ಇಬ್ಬರೂ
ಹುಲ್ಲು ಸೇರ್ಸಿ ಬೆಂಕಿ ಹಾಕಿತ್ ಮೊಣ್ಣಪ್ಪ
ಮಂಗನಂಗೆ ಮರಹತ್ತಿದ್ ಚೋಮುಣಿ
ಸುತ್ತಲೂ ಗುಂಯ್ ಗುಂಯ್....
ಶುರುವಾಗಿತ್ತ್ ಜೇನ್ನೊಣಗಳ ಹಾಡು
ಮೊಣ್ಣಪ್ಪನ ತಲೆನೇ ಕಾಣ್ತಿಲ್ಲೆ...
ಅದ್ ಹೆದ್ರಿ ಅವ್ನ ತೊಡೆಸೆರೆ ಸೇರಿತ್ತ್ !
ಮರದ ಮೇಲೆ ಚೋಮುಣಿ ಹೈದ
ಅವ್ನ ಕೈಲಿ ಜೇನ್ ಗೂಡ್ !
ಉಫ್... ಉರುಗಿರೇ...
ಅಲ್ಲಿ ಬಂಗಾರದ ಬಣ್ಣದ ಜೇನ್ !

- `ಸುಮಾ'
 arebhase@gmail.com

ಟೈಟ್ ಮಾಸ್ಟರ್


(ತಮಿಳ್ನ ಕೊಲೆವೆರಿ ಹಾಡ್ನ ಮ್ಯೂಸಿಕ್ ಇಟ್ಕಂಡ್ ಅರೆಭಾಷೇಲಿ ಹಾಡಿರೆ ಹೆಂಗಿರ್ದು? ಅಂಥ ಒಂದು ಪ್ರಯೋಗ ಇಲ್ಲಿ ಮಾಡ್ಯೊಳೊ. ಕೊಲೆವೆರಿ ಹಾಡ್ ಟ್ಯೂನ್ಗೆ ಈ ಪದನ ಒಂದ್ಸಲಿ ಹಾಡಿ ನೋಡಿ, ಎಂಜಾಯ್ ಮಾಡಿ )

ಬಾಯ್ಸ್...
ಐಯಾಮ್ ಸಿಂಗ್ ಸಾಂಗ್
ಸೂಪ್ ಸಾಂಗ್
ಫ್ಲಾಪ್ ಸಾಂಗ್
ವೈ ದಿಸ್ ಡ್ರಿಂಕಿಂಗ್, ಡ್ರಿಂಕಿಂಗ್, ಡ್ರಿಂಕಿಂಗ್ ರಾ
ವೈ ದಿಸ್ ಡ್ರಿಂಕಿಂಗ್, ಡ್ರಿಂಕಿಂಗ್, ಡ್ರಿಂಕಿಂಗ್ ರಾ
ರಿದಂ ಕರೆಕ್ಟ್ ?
ವೈ ದಿಸ್ ಡ್ರಿಂಕಿಂಗ್, ಡ್ರಿಂಕಿಂಗ್, ಡ್ರಿಂಕಿಂಗ್ ರಾ
ಮೈಂಟೈನ್ ಪ್ಲೀಸ್..
ªÉÊ ¢¸ï ræAQAUï..... gÁ?
UÁè¸ï vÀÄA¨Á ºÀ¤©Ã ºÀ¤©Ã..
ºÀ¤©Ã PÀ®gï UÉÆïïØ !
ºÀ¤©Ã PÀÄqÀÝAªÀ mÉÊmï mÉÊlÆ
ªÉÊ ¢¸ï ræAQAUï ræAQAUï ræAQAUï gÁ
ªÉÊ ¢¸ï ræAQAUï ræAQAUï ræAQAUï gÁ
ªÉÊmï PÀ®gï ¨É棃 ¸ÉÃA¢
¸ÉÃA¢ mÉøïÖ ¹éÃmÉÆà ¹éÃmï
¹éÃmï EzÀÝgÀÆ PÀÄqÀÝAªÀ mÉÊlÆ..
FUÀ ¸ÉÃA¢ ¹PÀÄÌzÉà E¯Éè..
ªÉÊ ¢¸ï ræAQAUï ræAQAUï ræAQAUï gÁ
ªÉÊ ¢¸ï ræAQAUï ræAQAUï ræAQAUï gÁ
¨sÁªÀ, UÁè¸ï vÀPÁ... ºÀA¢UÉÊ¥ÀÄ£ÀÆ »qÀÌ
¥À¥À¥ÁA ¥À¥À¥ÁA ¥À¥À¥ÁA ¥À¥À¥ÁA ¥Á¥ÁA
ºÉAUÀÄlÄÖ ?
¸ÀÆ¥Àgï ¨sÁªÀ... gÉr..
M£ï, lÆ, wæÃ.. ¥sÉÆÃgï....
ªÁí ªÁmï J QPï ¨sÁªÀ !
NPÉ ¨sÁªÀ...
ಈಗ ಕಳ್ಳ್ ಚೇಂಜ್..
ಕೈಲಿ ಗ್ಲಾಸ್, ಗ್ಲಾಸ್ಲಿ ಬೀರು
ಬೀರ್ ತುಂಬಾ ನೀರು !
ಕುಡ್ದ್ ಕುಡ್ದ್, ಬೀರು ಕುಡ್ದ್
ಬಾತ್ರೂಂ ಕಡೆಗೆ ಓಡ್ದು
ಓಸಿ ಓಸಿ ಓಮೈ ಓಸಿ
ತೋರ್ಸು ನಿನ್ನ ಪವರ್ರು
ಓಸಿ ಕುಡ್ದು, ತುಂಬಾ ಬೋರು
ದಿಸ್ ಸಾಂಗ್ ಯು ಫಾರ್ ಸೂಪರ್ ಬಾಯ್ಸ್
ಇನ್ನೂ ಬೇಕಾ ಒರಿಜಿನಲ್ ಚಾಯ್ಸ್ ?
ªÉÊ ¢¸ï ræAQAUï ræAQAUï ræAQAUï gÁ
ªÉÊ ¢¸ï ræAQAUï ræAQAUï ræAQAUï gÁ

`ಸುಮಾ'



Tuesday, 20 December 2011

`ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ '


ನಮ್ಮವರ ತುಂಬಾ ದಿನದ ಒಂದು ಬೇಡಿಕೆ ಈಡೇರಿಟ್ಟು. ಹೌದು `ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ' ಶುರು ಮಾಡಿಕೆ ರಾಜ್ಯ ಸರ್ಕಾರ ಒಪ್ಪಿಟ್ಟು. ಈ ಬಗ್ಗೆ ಇದೇ ತಿಂಗಳ 15ಕ್ಕೆ ಸರ್ಕಾರದ ಆದೇಶ ಹೊರಬಿದ್ದುಟ್ಟು. ಈ ಅಕಾಡೆಮಿಯ ಕೇಂದ್ರ ಕಚೇರಿ ಮಡಿಕೇರಿಲೇ ಇದ್ದದೆ.
ಅರೆಭಾಷೆ ಮಾತಾಡುವ 18 ಗೋತ್ರಗಳ ಜನ ಕೊಡಗು ಮತ್ತೆ ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಒಳೊ. ಇದಲ್ಲದೆ ಕೇರಳ, ಮೈಸೂರು, ಬೆಂಗಳೂರು, ಮುಂಬೈ, ದುಬೈ, ಅಮೆರಿಕಾಲಿ ಕೂಡ ನಮ್ಮವು ಹರಡಿ ಹೋಗ್ಯೊಳೊ. ಈ ಜನಗಳ ಸಾಹಿತ್ಯ ಮತ್ತೆ ಸಾಂಸ್ಕೃತಿಕ ಆಶೋತ್ತರಗ ಬೆಳೆಯುವಂಗೆ ಪ್ರೋತ್ಸಾಹ ಕೊಡುದೇ ಈ ಅಕಾಡೆಮಿ ಸ್ಥಾಪನೆಯ ಉದ್ದೇಶ.
ಅರೆಭಾಷೆಗೆ ಸುಮಾರು 500ಕ್ಕೂ ಜಾಸ್ತಿ ವರ್ಷಗಳ ಇತಿಹಾಸ ಉಟ್ಟು. ಈ ಭಾಷೆನ ಉಪಯೋಗಿಸುವವರದ್ದ್ ಶ್ರೀಮಂತ ಸಂಸ್ಕೃತಿ. ಅಕಾಡೆಮಿ ಶುರು ಮಾಡಿಕೆ ಸರ್ಕಾರ ಈ ಎಲ್ಲಾ ಅಂಶಗಳನ್ನ ಪರಿಗಣನೆಗೆ ತೆಗೆದುಕೊಂಡುಟ್ಟು.
`ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ' ಶುರುಮಾಡಿಕೆ ಮುಖ್ಯಮಂತ್ರಿ ದೇವರಗುಂಡ ಸದಾನಂದ ಗೌಡ ಅಂಗೀಕಾರ ಕೊಟ್ಟೊಳೊ. ಇದಕ್ಕೂ ಮೊದ್ಲು ಕನ್ನಡ ಮತ್ತೆ ಸಂಸ್ಕೃತಿ ಮಂತ್ರಿ ಗೋವಿಂದ ಕಾರಜೋಳ ಈ ಅಕಾಡೆಮಿ ಬಗ್ಗೆ ಒಪ್ಪಿಗೆ ಕೊಟ್ಟಿದ್ದೊ. ಇದೆಲ್ಲಾ ಆದ್ಮೆಲೆ ಕನ್ನಡ ಮತ್ತೆ ಸಂಸ್ಕೃತಿ, ವಾರ್ತಾ ಇಲಾಖೆ ಅಧೀನ ಕಾರ್ಯದರ್ಶಿ   ಹೆಚ್ವಿ ರಾಮಚಂದ್ರ ಅಧಿಕೃತ ಆದೇಶ ಹೊರಡಿಸಿಯೊಳೊ.
ಹೊಸದಾಗಿ ಶುರುವಾಗ್ತಿರ್ವ ಅರೆಭಾಷೆ ಅಕಾಡೆಮಿಯ ರೂಪುರೇಷೆ, ಅಂಗರಚನೆ ಮತ್ತೆ ಹುದ್ದೆಗಳ ನೇಮಕಾತಿಗೆ ಸಂಬಂಧ ಪಟ್ಟಹಂಗೆ ಸರ್ಕಾರ ಇನ್ನು ಸ್ವಲ್ಪ ದಿನಲೇ ಮತ್ತೊಂದು ಆದೇಶ ಹೊರಡಿಸಿದೆ. ಈ ಅಕಾಡೆಮಿಗೆ ಒಬ್ಬ ಅಧ್ಯಕ್ಷ ಇದ್ದವೆ. ಅವ್ರ ಜೊತೆ 13 ಸದಸ್ಯಗ ಕೆಲ್ಸ ಮಾಡಿವೆ. ಕೊಡಗು ಮತ್ತೆ ದಕ್ಷಿಣಕನ್ನಡದ ಅರೆಭಾಷಿಕರನ್ನ ಸರ್ಕಾರ ಇದಕ್ಕೆಲ್ಲಾ ನೇಮಕ ಮಾಡ್ದೆ.
ಮುಖ್ಯಮಂತ್ರಿ ದೇವರಗುಂಡ ಸದಾನಂದ ಗೌಡ ನಮ್ಮವೇ ಆಗಿರ್ದು, ಈ ಅಕಾಡೆಮಿ ಶುರುವಾಗ್ತಿರುದಕ್ಕೆ ಪ್ರಮುಖ ಕಾರಣತ ಹೇಳಕ್. ಇನ್ನ್ ಸ್ಪೀಕರ್ ಕೊಂಬಾರನ ಬೋಪಯ್ಯ ಮತ್ತೆ ಇಂಧನ ಮಂತ್ರಿ ಶೋಭಾ ಕರಂದ್ಲಾಜೆ ಕೂಡ ಇಲ್ಲಿ ತುಂಬಾ ಕೆಲ್ಸ ಮಾಡ್ಯೊಳೊ. ಇದ್ರ ಜೊತೆಗೆ ನಮ್ಮ ಜನಾಂಗದ ತುಂಬಾ ಜನ ಪ್ರತ್ಯಕ್ಷವಾಗಿ ಮತ್ತೆ ಪರೋಕ್ಷವಾಗಿ ಅರೆಭಾಷೆ ಅಕಾಡೆಮಿ ಶುರು ಮಾಡುದ್ರ ಹಿಂದೆ ಪರಿಶ್ರಮ ಪಟ್ಟೊಳೊ. ಈ ಎಲ್ಲಾ ಮಹನೀಯರಿಗೂ ತುಂಬಾ ತುಂಬಾ ಧನ್ಯವಾದಗ. 
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ' ಸರಿಯಾದ ದಿಕ್ಕ್ಲಿ ಕೆಲ್ಸ ಮಾಡ್ಲಿ, ಸ್ಥಾಪನೆಯ ಉದ್ದೇಶ ಸಾರ್ಥಕ ಆಗ್ಲಿತೇಳುದೇ ಎಲ್ಲರ ಹಾರೈಕೆ.

- `ಅರೆಭಾಷೆ ವಾರ್ತೆ ' 
arebhase@gmail.com

Monday, 19 December 2011

ಅರೆಭಾಷೆ ಅಕಾಡೆಮಿ ಸ್ಥಾಪನೆ

ಗೌಡರಿಗೆ ಸಿಹಿ ಸುದ್ದಿ - ಅರೆಭಾಷೆ ಅಕಾಡೆಮಿ ಶುರುಮಾಡಿಕೆ ಸರ್ಕಾರದ ಒಪ್ಪಿಗೆ 

Sunday, 18 December 2011

ಭಾಗಮಂಡಲದ `ಲಕ್ಕಡಿಕೋಟೆ' !


          ಅಂದ್ ಭಾನುವಾರ... ಕ್ರಿಕೆಟ್ ಆಡ್ನೋತೇಳಿ ಬೆಳಿಗ್ಗೆ ಬೆಳಿಗ್ಗೆನೇ ನಾವು ಫ್ರೆಂಡ್ಸೆಲ್ಲಾ ಸ್ಕೂಲ್ ಗ್ರೌಂಡ್ಲಿ ಸೇರ್ದೋ. ಯಾಕೋ ಏನೋ ಐದೈದ್ ಓವರ್ನ ಒಂದ್ ಆಟ ಆಡಿಕಾಕನ ಬೇಜಾರ್ ಆಗಿಬಿಡ್ತ್. ಎಂಥ ಮಾಡ್ದು? ಹೆಂಗಾರು ಮಾಡಿ ದಿನಕಳೆಯೋಕಲ್ಲಾ... ರಜೆ ಇರ್ಕಾಕನ ನಾವು ಎಂದ್ ಕೂಡ ಮನೆಲಿ ಕುದ್ದವು ಅಲ್ಲ. ಭಾಗಮಂಡಲ ಸುತ್ತಮುತ್ತ ಇದ್ದ ಬೆಟ್ಟಗುಡ್ಡ, ಯಾರ್ಯಾರ್ದೋ ತೋಟ ಎಲ್ಲಾ ಸುತ್ತಾಡಿ ಬಿಡ್ತಿದ್ದೊ. ತಲಕಾವೇರಿಯ ಬ್ರಹ್ಮಗಿರೀಂದ ಅಲ್ಲಿರ್ವ ವಿಂಡ್ಮಿಲ್ವರೆಗೆ ಬೆಟ್ಟದ ಇಂಚು ಇಂಚು ಹತ್ತಿ ಇಳ್ದುಬಿಟ್ಟ ವಾನರ ಪಡೆ ನಮ್ಮದ್. ಇನ್ನ್ ತಾವೂರು ಬೆಟ್ಟ, ನಿಶಾನೆ ಮೊಟ್ಟೆ, ಕೋಪಟ್ಟಿ ಬೆಟ್ಟ ಹಿಂಗೆ ಸಿಕ್ಕ ಸಿಕ್ಕ ಬೆಟ್ಟಗಳ್ನೆಲ್ಲಾ ಹತ್ತಿ ತೇನ್ಸಿಂಗ್ನಂಗೆ ಧ್ವಜ ಹಾರಿಸಿದ್ದೊ! ಇಷ್ಟೆಲ್ಲಾ `ಉರಿಬಂದ್ರೂ' ನಮ್ಮ ಕೈಂದ ಒಂದ್ ಸ್ಥಳ ತಪ್ಪಿಸಿಕೊಂಡ್ಬಿಟ್ಟಿತ್. ಅದು `ಲಕ್ಕಡಿಕೋಟೆ' !

ಭಾಗಮಂಡಲತೇಳಿರೆ ಹೆಚ್ಚು ಜನಕ್ಕೆ ಗೊತ್ತಿರ್ದು ಭಗಂಡೇಶ್ವರ ದೇವಸ್ಥಾನ, ತ್ರಿವೇಣಿ ಸಂಗಮ ಮತ್ತೆ ಹನಿಸೊಸೈಟಿ. ಇಂಥ ಊರಿಗೆ ಹಿಂದೆಯೊಮ್ಮೆ ಟಿಪ್ಪು ಸುಲ್ತಾನ್ ಬಂದಿತ್ತ್. ಅವ್ನ ಬಗ್ಗೆ ಇತಿಹಾಸ ಏನೇ ಹೇಳಿರೂ, ಜನರ ದೃಷ್ಟಿಲಿ ಅಂವ ಒಬ್ಬ ಮತಾಂಧ. ಕೊಡಗುಲಿ ತುಂಬಾ ಜನ ಕೊಡಗ್ರ್ನ ಹೆದ್ರಿಸಿ, ಅವರನ್ನೆಲ್ಲಾ ಮುಸ್ಲಿಮರನ್ನಾಗಿ ಮಾಡಿತ್ತ್. ಈಗ್ಲೂ ಕೊಡಗಿನ ಕೆಲವು ಮುಸ್ಲಿಮರಿಗೆ ಮನೆ ಹೆಸ್ರುಗ ಇರುದೇ ಇದಕ್ಕೆ ಸಾಕ್ಷಿ. ಈ ಟಿಪ್ಪು ಸುಲ್ತಾನ್ ಭಾಗಮಂಡಲಲ್ಲೂ ತನ್ನ ಬುದ್ಧಿ ತೋರ್ಸಿತ್ತ್. ಇಲ್ಲಿನ ಭಗಂಡೇಶ್ವರ ದೇವಸ್ಥಾನಲಿ ನುಗ್ಗಿದ ಕೂಡಲೇ ಎಡಗಡೆಲಿ ಸೊಂಡಿಲು ಇಲ್ಲದೆ ಇರ್ವ ಎರಡು ಕಲ್ಲಿನ ಆನೆಗ ಕಂಡವೆ. ಈ ಆನೆಗಳ ಸೊಂಡಿಲ್ನ ಕತ್ತರಿಸಿದ್ದ್ ಇದೇ ಟಿಪ್ಪು ಸುಲ್ತಾನ್ ! ಇನ್ ಭಗಂಡೇಶ್ವರ ಗುಡಿಯ ಮಾಡ್ಲಿ ಬೆಳ್ಳಿಯ ಒಂದ್ ಚಿಕ್ಕ ಶೀಟ್ ನೋಡಕ್. ದೇವರ ಶಾಪಂದ ತಪ್ಪಿಸಿಕಣಿಕೆ ಟಿಪ್ಪು ಈ ಶೀಟ್ ಹಾಕಿಸಿತ್ಗಡ. ಹಿಂಗೆ ಭಾಗಮಂಡಲಲಿ ಇದ್ದ ಟಿಪ್ಪುಗೆ ಉಳ್ಕಣಿಕೆ ಒಂದ್ ಜಾಗ ಬೇಕಿತ್ತಲ್ಲಾ... ಅದ್ಕೆತೇಳಿ ಕಟ್ಟಿಸಿದ್ದೇ `ಲಕ್ಕಡಿಕೋಟೆ'
ಆ ಭಾನುವಾರ ನಾವು ಲಕ್ಕಡಿಕೋಟೆಗೆ ಹೋದುತೇಳಿ ತೀಮರ್ಾನ ಮಾಡ್ದೊ. ಈ ಕೋಟೆ ಬಗ್ಗೆ ನಮ್ಗೆ ಕಥೆಗಳ್ಲಿ ಕೇಳಿ ಮಾತ್ರ ಗೊತ್ತಿತ್. ಆದ್ರೆ ಅಲ್ಲಿಗೆ ಹೆಂಗೆ ಹೋದು? ಎಷ್ಟು ದೂರ ಆದೆ? ಇದ್ಯಾವುದೂ ಗೊತ್ತಿತ್ಲೆ. ಆಗ ನಮ್ಮ ಸಹಾಯಕ್ಕೆ ಬಂದದ್ದ್ ಮುನ್ನ. ಅವ್ರ ತೋಟಕ್ಕಾಗಿ ಲಕ್ಕಡಿಕೋಟೆಗೆ ಹೋಕೆ ದಾರಿ ಇತ್ತ್. ಅವ್ನ ತಾತನ ಜೊತೆ ಸುಮಾರು ಸಲ ಅಂವ ಅಲ್ಲಿಗೆ ಹೋಗಿ ಬಂದಿತ್. ಹಂಗಾಗಿ ಅವ್ನೇ ನಮ್ಗೆ ಗೈಡ್ ಆಕೆ ಒಪ್ಪಿಕಣ್ತ್. ಒಂದು ವಿಷಯ ಹೇಳ್ನೆ, ನಾವೆಲ್ಲಾ ಆಗ 8, 9 ನೇ ಕ್ಲಾಸ್ನ ಹೈದಂಗ !
ಭಾಗಮಂಡಲ ತ್ರಿವೇಣಿ ಸಂಗಮ ಉಟ್ಟಲ್ಲಾ... ಅದ್ರ ಎದುರುಗಡೆ ಇರುದೇ `ಸಂಗಮಕಾಡು' ಈ `ಸಂಗಮಕಾಡು'ನ ತುತ್ತ ತುದೀಲಿ `ಲಕ್ಕಡಿಕೋಟೆ' ಉಟ್ಟು. ಸಂಗಮಕಾಡುಗೆ ಒತ್ತಿಕಂಡೆ, ನಮ್ಮ ಮುನ್ನನ ಕಾಫಿತೋಟ ಇರ್ದು. ಹಂಗಾಗಿ ಅವ್ನ ಮನೆಕಡೇಂದನೇ ನಮ್ಮ ಯಾತ್ರೆ ಶುರುವಾತ್. ಎಲ್ಲರಲ್ಲೂ ಹಿಮಾಲಯ ಹತ್ತಿಕೆ ಇದ್ದಂಗೆ ಉತ್ಸಾಹ. ಒಬ್ಬೊಬ್ಬರ ಹತ್ರನೂ ಒಂದೊಂದು ಬ್ಯಾಗ್. ಅದ್ರೊಳಗೆ ಜ್ಯೂಸ್, ಬಿಸ್ಕೆಟ್, ಚಕ್ಕುಲಿ, ಚಿಪ್ಸ್, ಪಪ್ಸ್... ಹನ್ನೊಂದು ಗಂಟೆ ಹೊತ್ತಿಗೆ ಮುನ್ನನ ಮನೆ ಹತ್ರಂದ ಹೊರಟೊ. ಮುನ್ನ ಸೇರಿ ನಾವು 6 ಜನ.. `ಹಾವುಗ ಇದ್ದವೆ ನೋಡ್ಕಂಡ್ ಹೋಗಿ...' ಮುನ್ನನ ತಾತ ಎಚ್ಚರಿಕೆ ಕೊಡ್ತ್. ಅವ್ರಮ್ಮ ಒಂದೆರಡು ಪ್ಯಾಕ್ ಬಿಸ್ಕೆಟ್ ತಂದ್ ಗುರುನ ಬ್ಯಾಗ್ಗೆ ಹಾಕಿದೊ. ಈಗ ಮುನ್ನ ಮುಂದೆ ಮುಂದೆ... ನಾವು ಅವನ ಹಿಂದೆ ಹಿಂದೆ...
ಎರಡು ಗಂಟೆ ಕಾಫಿತೋಟದೊಳಗೆನೇ ನಡ್ದ ಮೇಲೆ ನಿಧಾನಕ್ಕೆ ಕಾಡ್ ಶುರುವಾತ್. ಅಲ್ಲಿವರೆಗೆ ಸ್ವಲ್ಪ, ಸ್ವಲ್ಪ ದಾರಿ ಇತ್. ಅಲ್ಲಿಂದಾಚೆ ನಾವು ಹೋದ್ದೇ ದಾರಿ ! ಕೋತಿಗಳ್ನ ಬಿಟ್ರೆ ಮತ್ತೆಂಥ ಪ್ರಾಣಿಗ ಅಲ್ಲಿ ನಮ್ಗೆ ನೋಡಿಕೆ ಸಿಕ್ತ್ಲೆ. ಸುಸ್ತಾತ್ತೇಳೆ ನಾವೆಲ್ಲಾ ಒಂದು ಮರದ ಕೆಳಗೆ ಕಲ್ಲ್ ಮೇಲೆ ಕೂತ್ರೆ, ನಮ್ಮ ತಲೆ ಮೇಲೆ ಕೊಂಬೆಗಳಲ್ಲಿ ಕೋತಿಗ ಕುದ್ದಕಂಡ್ ನಮ್ಮನೇ ನೋಡ್ತಿದ್ದೊ. ರವಿ ಒಂದ್ ಪ್ಯಾಕ್ ಬಿಸ್ಕೆಟ್ನ ಮೇಲಕ್ಕೆ ಬಿಸಾಡ್ತ್...ಒಂದು ದೊಡ್ಡ ಮಂಗ ಅದ್ನ ಕ್ಯಾಚ್ ಮಾಡಿ, ಮೂಸಿ ನೋಡಿ ಹೊತ್ಕಂಡ್ ಇನ್ನೊಂದು  ಮರಕ್ಕೆ ಹಾರ್ತ್. ಜೊತೇಲಿದ್ದ ಕೋತಿಗನೂ ಅದ್ರ ಹಿಂದೆನೇ ಹಾರ್ದೊ...
ಅಲ್ಲಿ ಸ್ವಲ್ಪ ಹೊತ್ತ್ ರೆಸ್ಟ್ ತಕ್ಕಂಡ್ ಮತ್ತೆ `ಲಕ್ಕಡಿಕೋಟೆ' ಹುಡ್ಕಂಡ್ ಹೊರ್ಟೊ. ಸ್ವಲ್ಪ ದೂರ ಹೋಕಾಕನ ಅಲ್ಲಿ ದೊಡ್ಡ ಚರಂಡಿ ಹಂಗೆ ಮಾಡಿರ್ದು ಕಂಡತ್ `ಇದ್ ಕಡಂಗ... ಟಿಪ್ಪು ಇರ್ಕಾಕಕನ ಇದ್ರೊಳಗೆ ನೀರಿತ್ತ್.. ಮೊಸಳೆಗಳ್ನ ಕೂಡ ಸಾಕಿಕಂಡಿತ್ತ್. ಅವಂಗೆ ಗೊತ್ತಿಲ್ದೆ ಯಾರರ್ ಕೋಟೆಗೆ ಬಂದ್ರೆ ಅವ್ರನ್ನ ಇದ್ರೊಳಗೆ ದೂಡಿ ಬಿಡ್ತಿತ್..' ಮುನ್ನ ಎಲ್ಲಾ ನೋಡಿದ್ದಂಗೆ ಆ ಕಡಂಗದ ಕಥೆ ಹೇಳ್ತ್. ಅದ್ನ ಕೇಳ್ಕಂಡ್ ನಾವ್ ಕಡಂಗ ದಾಟಿ ಮುಂದೆ ಹೋದೊ... ಅಲ್ಲಿಂದ ಸ್ವಲ್ಪ ದೂರ ಹೋಕಾಕನ, ಅಲ್ಲಿ ಅರ್ಧ ಬಿದ್ದ ಗೋಡೆ, ದೊಡ್ಡ ದೊಡ್ಡ ಕಲ್ಲ್ಗ ಬಿದ್ದಿದ್ದದ್ ಕಾಣ್ತ್... ಅಷ್ಟೊತ್ತಿಗೆ ಅರುಣ, `ಇಲ್ಲಿ ಯಾರ್ರ ಮನೆ ಕಟ್ಟಿಕಂಡ್ ಇದ್ದದ್ದ್? ಪಾಪ ಮಳೆಗೆ ಬಿದ್ದುಹೋಗಿರೋಕು ಕಂಡದೆ..' ತಾ ಹೇಳಿ, ಇನ್ನೇನೋ ಮುಂದಕ್ಕೆ ಹೇಳಿಕೆ ಹೊರ್ಟತ್.. ಆಗ ಮುನ್ನ, `ಅಯ್ಯೋ ಇದ್ ಬಿದ್ದ ಮನೆ ಅಲ್ಲ ಮಾರಾಯ, ಲಕ್ಕಡಿಕೋಟೆ !'ತಾ ಹೇಳ್ತ್.
ಕೋಟೆತೇಳಿರಿ ಮಡಿಕೇರಿ ಕೋಟೆ ಹಂಗೆ ಇರ್ದೇನೋತೇಳಿ ಯೋಚ್ನೆ ಮಾಡಿಕಂಡ್ ಬಂದಿದ್ದ ನಮ್ಗೆ, ಈ `ಲಕ್ಕಡಿಕೋಟೆ' ನೋಡಿ ತುಂಬಾ ನಿರಾಸೆ ಆತ್. ಆದ್ರೂ ಟಿಪ್ಪು ಇದ್ದ ಜಾಗತೇಳಿಕಂಡ್, ನಾವು ತಂದಿದ್ದ ದೊಣ್ಣೆನ ಟಿಪ್ಪು ಖಡ್ಗ ಹಿಡ್ದಂಗೆ ಆ್ಯಕ್ಟ್ ಮಾಡಿ ತುಂಬಾ ಖುಷಿಪಟ್ಟೊ. (ಆಗ ದೂರದರ್ಶನಲಿ ಟಿಪ್ಪುಸುಲ್ತಾನ್ ಧಾರಾವಾಹಿ ಬರ್ತಿತ್) ತಂದಿದ್ದ ಎಲ್ಲಾ ತಿಂಡಿಗಳ್ನ ಖಾಲಿ ಮಾಡಿ ಮತ್ತೆ ಬೆಟ್ಟ ಇಳಿಯಕೆ ಶುರು ಮಾಡ್ದೊ... ಮುನ್ನನ ಕಾಫಿ ತೋಟ ಹತ್ರ ಬಾಕಾಕನ, ಭಾಗಮಂಡಲ ದೇವಸ್ಥಾನಲಿ ಸಾಯಂಕಾಲ ಹೊತ್ತು ಹಾಕ್ತಿದ್ದ ಭಕ್ತಿಗೀತೆ ಕೇಳ್ತಿತ್....

- `ಸುಮಾ'
 arebhase@gmail.com
(ಕೋಟೆಯ ಚಿತ್ರ ಕೇವಲ ಸಾಂದರ್ಭಿಕ  )

Saturday, 17 December 2011

`ದೀಪವು ನಿನ್ನದೆ, ಗಾಳಿಯೂ ನಿನ್ನದೆ...'


`ರಾತ್ರಿ ಬೆಟ್ಟ ಮೂಲೆಂದ ಆನೆ ಮರ್ಡತ್ತಿತ್ತ್... ಚಿನ್ನು ಮನೆವರೆಗೂ ಜಾಗ್ರತೆಲಿ ಹೋಗು ಮಗಳೇ..' ಒಲೆ ಬುಡಲಿ  ರೊಟ್ಟಿ ತಟ್ತಿದ್ದ ಅಮ್ಮ, ಸ್ಕೂಲ್ಗೆ ಹೊರಟಿದ್ದ ಗೀತಾಂಗೆ ಎಚ್ಚರಿಕೆ ಕೊಟ್ಟತ್. ಗೀತಾನ ಅಪ್ಪ ಅಷ್ಟೊತ್ತಿಗೆ ಗದ್ದೆ ಕಡೆ ಹೋಗಿಯಾಗಿತ್ತ್. ರಾತ್ರಿ ಆನೆಗ ಮೆಟ್ಟಿ ಎಷ್ಟು ಭತ್ತ ಹಾಳಗ್ಯುಟ್ಟುತೇಳೋ ಯೋಚನೆ ಅವಂಗೆ. ಹೌದು, ಈವರ್ಷ ನೆಟ್ಟಿದ್ದ ಕೊಂಕಣಿ ಭತ್ತ ಒಳ್ಳೆ ಇಳುವರಿ ಕೊಟ್ಟಿತ್ತ್. ಕಳ್ದವರ್ಷ ಶುಂಠಿ ಹಾಕಿದ್ದ ಜಾಗಲ್ಲಂತೂ ಬೆಳೆ ಕುಣ್ಕಂಡ್ ಬಂದಿತ್. ಗೀತಾಳ ಅಪ್ಪ ಬಸಪ್ಪಂಗೆ ಈಗ ಆ ಬೆಳೆನ ಉಳ್ಸಿಕೊಳ್ದೇ ದೊಡ್ಡ ಯೋಚನೆ ಆಗ್ಯುಟ್ಟು. ಜೇನುಕಾಡು ಬೆಟ್ಟ ಕಡೇಂದ ಬರ್ವ ಕಾಡಾನೆಗ, ವಾಪಸ್ ಹೋಕಾಕನ ಗದ್ದೆನ ಪೂತರ್ಿ ಸ್ಮಶಾನ ಮಾಡಿಬಿಡ್ತಿದ್ದೊ. ಆ ಗುಂಪುಲಿ ಮೂರು ಮರಿಯಾನೆಗ ಕೂಡ ಒಳೊ.
ಮೂರು ದಿನ ಹಿಂದೆ ಕಾಡಾನೆಗ ಮೂಲೆಮನೆ ಮೊಣ್ಣಪ್ಪನ ಜಾಗಕ್ಕೆ ಬಂದಿದ್ದೊ. ಅವ್ಕೆ ಎಷ್ಟು ಬುದ್ಧಿ ಉಟ್ಟುತೇಳಿರೆ, ಆನೆಗ ಹೋಕೆ ಎಷ್ಟು ಜಾಗ ಬೇಕೋ ಅಷ್ಟು ಮಾತ್ರ ದಾರಿನ ಒಣಗಿಲು ಮರ ತಕ್ಕಂಡ್ ಸೋಲಾರ್ಬೇಲಿ ಮಧ್ಯೆ ಮಾಡಿಕಂಡಿದ್ದೊ. ಒಂದು ಸೈಡ್ಂದ ರಾಜಮುಡಿ ಭತ್ತ, ಪಚ್ಚೆಬಾಳೆ, ತೆಂಗಿನ ಮರ ಎಲ್ಲಾ ಸ್ವಾಹ ಮಾಡಿ ಸೈಲೆಂಟಾಗಿ ಮತ್ತೆ ಬೆಟ್ಟ ಸೇರ್ಕೊಂಡಿದ್ದೊ. ಹೆಂಗಿದ್ರೂ ಸೋಲಾರ್ ಬೇಲಿ ಉಟ್ಟು. ಆನೆಗ ನನ್ನ ಜಾಗಕ್ಕೆ ಬಾಕಿಲ್ಲೆತಾ ಗೊರ್ಕೆ ಹೊಡ್ಕಂಡ್ ನಿದ್ದೆ ಮಾಡಿದ್ದ ಮೊಣ್ಣಪ್ಪ ಬೆಳಗ್ಗೆ ಎದ್ದು ನೋಡಿರೆ ಅಲ್ಲಿ ಎಂಥ ಉಟ್ಟು? ಲಕ್ಷ ಲಕ್ಷ ಸುರ್ದು ಹಾಕ್ಸಿದ ಸೋಲಾರ್ ಬೇಲಿನೂ ಇಲ್ಲೆ, ಕಷ್ಟಪಟ್ಟು ಬೆಳ್ಸಿದ ಬೆಳೆನೂ ಇಲ್ಲೆ.
ಗೀತಾಂಗೆ ಆನೆಗ ಅಂದ್ರೆ ಅಂಥ ಹೆದ್ರಿಕೆಯೇನೂ ಇಲ್ಲೆ. ಕಾಡಾನೆಗ ಮರ್ಡುದುನ ಕೇಳ್ಕಂಡ್ ಬೆಳ್ದವ್ಳು ಅವ್ಳು.  ಮನೆ ಹತ್ರ ಕಾಡಾನೆ ಹಿಂಡು ಬಂದದ್ನ ತುಂಬಾ ಸಲ ನೋಡ್ಯುಟ್ಟು. ಒಂದ್ಸಲ ಸಾಯಂಕಾಲ ಹೊತ್ಲಿ ಅಪ್ಪನ ಜೊತೆ ನಡ್ಕಂಡ್ ಬಾಕಾಕನ ಇವ್ಳ ಕಣ್ಣೆದ್ರೇ ಆನೆಗಳ ಹಿಂಡ್ ಅಡ್ಡ ದಾಟಿತ್ತ್. ಆಗ ಅಪ್ಪನ ಕೈನ ಗಟ್ಟಿಯಾಗಿ ಹಿಡ್ಕಂಡ್ ಆನೆಗ ದಾಟಿ ಹೋಗುವ ತನಕ ನೋಡಿಕಂಡ್ ನಿಂತಿತ್ತ್. ಆನೆಗ ಸುಮ್ಮನೆ ಮನುಷ್ಯನ ಮೇಲೆ ದಾಳಿ ಮಾಡ್ದುಲೆತೇಳುವ ಸತ್ಯನೂ ಗೊತ್ತಾಗಿತ್ತ್.
ಮೊದ್ಲಾಗಿದ್ರೆ ಕೂಡಿಗೆ ಶಾಲೆ. ಮನೆಗೆ ಬೇಗ ಬಂದ್ ತಲುಪಕ್ಕಾಗಿತ್. ಈಗ ಹಂಗೆ ಅಲ್ಲ. ಗೀತಾ ಕುಶಾಲನಗರಲಿ ಕಾಲೇಜಿಗೆ ಹೋಗ್ತುಟ್ಟು. ಮನೆ ಸೇರಿಕಾಕನ ಸಾಯಂಕಾಲ ಏಳು ಗಂಟೆಯಾದ್ರೂ ಆದೆ. ಇವ್ಳ ಊರು ಸೀಗೆಹೊಸೂರ್ಂದ ಕಾಲೇಜಿಗೆ ಹೋಗೋ ಮಕ್ಕ ಇದ್ದೊ. ಎಲ್ಲವೂ ಒಟ್ಟಿಗೆ ಹೋಗಿ ಬಾದು ಮಾಡ್ತಿದ್ದೊ. ಆದ್ರೆ ಚಿನ್ನುನ ಮನೇಂದ ಗೀತಾ ಮನೆಗೆ ಹತ್ತು ನಿಮಿಷ ಕಾಡು ಮಧ್ಯ ದಾರಿ... ಇಲ್ಲಿ ಗೀತಾ ಒಬ್ಳೇ ಹೋಗಕ್ಕಾಗಿತ್ತ್. ಅಂದ್ ಹಂಗೆನೇ, ಚಿನ್ನುಗೆ ಬಾಯ್ ಹೇಳಿ, ಗೀತಾ ಅವ್ಳ ಮನೆಕಡೆ ಹೋಗ್ತಿತ್.. ಬೆಳಗ್ಗೆ ಮಡಿಕೇರಿ ಆಕಾಶವಾಣಿಲಿ ಕೇಳಿದ್ದ `ದೀಪವು ನಿನ್ನದೆ, ಗಾಳಿಯೂ ನಿನ್ನದೆ...' ಹಾಡ್ನ ಗುಣು ಗುಣುತಾ ಹೇಳ್ಕಂಡ್, ಅಮ್ಮ ಎಂಥ ತಿಂಡಿ ಮಾಡಿರ್ದುತಾ ಯೋಚನೆ ಮಾಡ್ಕಂಡ್ ಹೆಜ್ಜೆ ಹಾಕ್ತಿತ್. ಆದ್ರೆ...
ಎಂಥದೋ ಚರಪರ ಸದ್ದ್... ಗೀತಾಂಗೆ ಸ್ವಲ್ಪ ಹೆದ್ರಿಕೆ ಆತ್. ಹಿಂದೆ ತಿರುಗಿ ನೋಡ್ತ್ಲೆ... ನಡಿಗೆನ ಇನ್ನೂ ಜೋರು ಮಾಡ್ತ್. ಗೀತಾ ಜೋರಾಗಿ ನಡ್ದಂಗೆ, ಹಿಂದೆ ಬರ್ತಿದ್ದ ಶಬ್ದನೂ ಜೋರಾಗಿ ಕೇಳ್ತಿತ್. ಇದೆಲ್ಲಾ ಬರೀ 5 ನಿಮಿಷ ಅಷ್ಟೇ... ಕಾಲೇಜ್ಂದ ಬರ್ವ ಮಗ್ಳಿಗಾಗಿ ಚಕ್ಕುಲಿ ಕಾಯಿಸ್ತಿದ್ದ ಅಮ್ಮಂಗೆ, `ಅಮ್ಮಾ' ತೇಳ್ವ ಜೋರು ಶಬ್ದ ಕೇಳ್ದೊಂದೇ ಗೊತ್ತು. ಮತ್ತೆ ಗೀತಾ ಮನೆಗೆ ಬಂದದ್ ಹೆಣವಾಗಿ ! ಸೀಗೆಹೊಸೂರ್ಲಿ ಆನೆಗಳಿಗೆ ಬಲಿಯಾದವ್ರ ಪಟ್ಟಿಗೆ ಗೀತಾ ಹೆಸ್ರೂ ಸೇರ್ಕಂಡಿತ್ತ್.

- `ಸುಮಾ'
arebhase@gmail.com

Friday, 16 December 2011

ಪಾಕ ಹಬ್ಬ...


ಮಡಿಕೇರಿಯ ಚೇರಂಬಾಣೆ ಹತ್ತಿರದ ಸುಂದರ ಗ್ರಾಮ ಪಾಕ. ಇಲ್ಲಿ ಪಾಕತಮ್ಮೆ ಹಬ್ಬ ನಡ್ತ್. ಇಲ್ಲಿನ ದುಗರ್ಾಪರಮೇಶ್ವರಿ ಪಾಕತಮ್ಮೆತೇಳಿಯೇ ಪ್ರಸಿದ್ಧಿ ಪಡ್ದುಟ್ಟು. ತಂಬಾ ಜನ ಈ ಕ್ಷೇತ್ರಕ್ಕೆ ಭಕ್ತಿಯಿಂದ ನಡ್ಕಂಡವೆ. ಕೊಡಗಿನ ಎಲ್ಲಾ ಕಡೆಗಳಿಂದ ಅಲ್ಲದೆ, ರಾಜ್ಯದ ಬೇರೆ ಬೇರೆ ಭಾಗಗಳಿಂದಲೂ ಭಕ್ತರು ಬಂದಿದ್ದೊ. ದೇವಿಯ ಸನ್ನಿಧಿಲಿ ತಮ್ಮ ಹರಕೆ ತೀರಿಸಿದೊ. ಇಲ್ಲಿಯ ಹೊಳೇಲಿರ್ವು ಮೀನುಗಳಿಗೂ ದೈವೀ ಶಕ್ತಿ ಉಟ್ಟುತೇಳ್ದು ಭಕ್ತರ ನಂಬಿಕೆ. ಅಲ್ಲದೆ ದೇವಸ್ಥಾನ ಹತ್ರ ಇರ್ವ ಈರುಳ್ಳಿ ಬನಕ್ಕೂ ಪಾಕತಮ್ಮೆಗೂ ಸಂಬಂಧ ಉಟ್ಟುತೇಳ್ವ ನಂಬಿಕೆನೂ ಉಟ್ಟು. ಪಾಕಲಿ ಪ್ರತೀ ವರ್ಷ ಡಿಸೆಂಬರ್ ತಿಂಗಳ 15 ಅಥ್ವಾ 16ಕ್ಕೆ ಹಬ್ಬ ನಡ್ದದೆ. ಈವರ್ಷ 16ಕ್ಕೆ ಅಂದ್ರೆ ನಿನ್ನೆ ಹಬ್ಬ ನಡ್ತ್.



- `ಅರೆಭಾಷೆ ವಾರ್ತೆ' 
arebhase@gmail.com

Thursday, 15 December 2011

`ಓ ಡಾಗ್ ಸೇವ್ ಮಿ !'


ನಮ್ಮ ಲಾಯರ್ ಸಾಹೇಬ ಆಗ ಪಿಯುಸಿ ಓದ್ತಿತ್... ಅದ್ ಮುಖದ್ಮೇಲೆ ಚಿಗುರು ಮೀಸೆ ಕಾಣಿಸಿಕೊಳ್ವ ಟೈಂ. ಹರೆಯದ ಕತ್ತೆ ಎದ್ರಿಗೆ ಬಂದ್ರುನೂ `ಆಹಾ ಎಷ್ಟ್ ಪೊರ್ಲು' ತಾ ಅನ್ಸೋ ಕಾಲ ! ಹಂಗಿರ್ಕನ ನಮ್ಮ ಈ ಚೋಮುಣಿ ಲಾಯರ್ ಲವ್ವ್ಲಿ ಬಿದ್ದ್ಬಿಡ್ತ್. ಇವನೋ ಇದ್ದದ್ ಬರೀ ಮೂರೂವರೆ ಅಡಿ. ಒನ್ವೇ ಲವ್ನ ಆ ಹೀರೋಯಿನ್ದ್ ಐದೂವರೆ ಅಡಿ ಎತ್ತರ. ಮಿಲಿಟ್ರಿಂದ ರಿಟೈರ್ಡ್ ಆಗಿದ್ದ ಅಪ್ಪನ ದಪ್ಪ ಸೋಲ್ನ ಶೂ ಹಾಕ್ಕಂಡ್ ಬಂದ್ರೂ, ಚೋಮುಣಿ ಅವ್ಳ ಹೆಗ್ಲಿಗೂ ಬಾತಿತ್ಲೆ ! ಆದ್ರೂ `ಪ್ರೀತಿ ಕುರುಡು' ತಾನೆ... ನಮ್ಮ ಹೀರೋ ಗೂಡೆಗೆ ಕಾಳ್ ಹಾಕಿಕೆ ಶುರು ಮಾಡ್ತ್... ಅವ್ಳೋ ಬಿಂಕದ ಸಿಂಗಾರಿ ! ಚೋಮುಣಿ ತಂದ್ ಕೊಟ್ಟ ಕಿತ್ತಳೆಂದ ಕ್ಯಾಡ್ಬರೀಸ್ ವರೆಗೆ ಎಲ್ಲನೂ ಖುಷೀಲೇ ತಕ್ಕಣ್ತಿತ್. 
ದಾಯನ ರಾಮಕೃಷ್ಣ ಮಾಸ್ಟ್ರು ಇಂಗ್ಲೀಷ್ ಗ್ರ್ಯಾಮರ್ ಹೇಳಿಕೊಡ್ತಿದ್ರೆ, ಚೋಮುಣಿ ಅವ್ನ ಗೂಡೆನ ಗ್ಲ್ಯಾಮರ್ ಲೆಕ್ಕಹಾಕ್ತಿತ್ತ್. ಇಂಥ ಚೋಮುಣಿ ಒಂದ್ ದಿನ ಧೈರ್ಯ ಮಾಡಿ ಲವ್ಲೆಟರ್ ಬರ್ದೇ ಬಿಡ್ತ್ ! ಗೂಡೆನ ಇಂಪ್ರೆಸ್ ಮಾಡಕಾಗಿದ್ದ ಮೊದಲ ಸಾಲ್ಲೇ ತಪ್ಪು ! `ಓ ಗಾಡ್ ಸೇವ್ ಮಿ' ತಾ ಬರೆಯೋಕೆ ಹೋಗಿ ಸ್ಪೆಲ್ಲಿಂಗ್ ಆಚೀಚೆ ಆಗಿಬುಟ್ಟ್, `ಓ ಡಾಗ್ ಸೇವ್ ಮಿ'ತಾ ಆಗಿಬಿಡೋಕ. ಹೇಳಿ ಕೇಳಿ ಚೋಮುಣಿ ಲವ್ ಮಾಡ್ತಿದ್ದ ಗೂಡೆ ಇಂಗ್ಲಿಷ್ಲಿ 50 ಮಾಕ್ಸರ್್ ತೆಗೀತ್ತಿದ್ದವ್ಳು. (ಅವ್ಳೇ ಫಸ್ಟ್, ಉಳ್ದವ್ರ ಮಾಕ್ಸರ್್ ಹೇಳುದು ಸ್ವಲ್ಪ ಕಷ್ಟ ಆದೆ) ಇಂಥದ್ರಲಿ ಅವ್ಳಿಗೆನೇ ತಪ್ಪು ತಪ್ಪು ಇಂಗ್ಲಿಷ್ಲಿ ಲವ್ ಲೆಟರ್ ಬರ್ದ್ರೆ ಹೆಂಗಾದುಲ್ಲೇ ಹೇಳಿ...
ಚೋಮುಣಿ ಬರ್ದ ಲವ್ ಲೆಟರ್ನ, ಆ ಸಿಂಗಾರಿ ತಕ್ಕಂಡ್ ಹೋಗಿ ಸೀದಾ ಇಂಗ್ಲೀಷ್ ಲೆಕ್ಚರರ್ಗೆ ಕೊಟ್ಟತ್. ಪಿಯುಸಿ ಹೈದನೇ ಲವ್ ಲೆಟರ್ ಬರೆಯೋ ಲೆವೆಲ್ಗೆ ಬಾತಲ್ಲಾತ ಅವ್ಕೆ ಬೇಸರ ಆತ್ಲೆ. ಆ ಲೆಟರ್ಲಿ ಇದ್ದ `ಭಯಂಕರ ಇಂಗ್ಲಿಷ್' ನೋಡಿ ಸಿಟ್ಟ್ಬಾತ್. ಎರಡ್ ವರ್ಷಂದ ಬಾಯಿಬಡ್ಕಂಡ್ ಪಾಠ ಮಾಡಿರೂ ಮಕ್ಕ ಉದ್ಧಾರ ಆತ್ಲೆತೇಳಿರೆ, ಯಾವ ಮಾಸ್ಟ್ರಿಗೆ ಸಿಟ್ಟು ಬಾದುಲೆ ? ಒಂದ್ ಕೈಲಿ ಚೋಮುಣಿನ ಲವ್ ಲೆಟರ್ ಮತ್ತೊಂದು ಕೈಲಿ ಕೋಪಟ್ಟಿ ಬೆಟ್ಟಂದ ಕಡ್ಕಂಡ್ ಬಂದಿದ್ದ ನಾಗರಬೆತ್ತ ಹಿಡ್ಕಂಡ್ ರಾಮಕೃಷ್ಣ ಮಾಸ್ಟ್ರ್ ಕ್ಲಾಸ್ ರೂಂ ಕಡೆ ಬಿರುಗಾಳಿ ಹಂಗೆ ಹೊರಟೊ.
ಪಾಪ ಚೋಮುಣಿ, ಅವಂಗೆ ಇದ್ಯಾವುದೂ ಗೊತ್ತಿತ್ಲೆ. ಒಂದ್ ಲವ್ ಲೆಟರ್ ಕೊಟ್ಟಾದ್ಮೇಲೆ, ಸ್ವಲ್ಪ ಧೈರ್ಯ ಬಂದಿತ್ತಲ್ಲಾ... ಇನ್ನೊಂದ್ನ `ಕೆತ್ತ್'ಕಂಡ್ ಕೂತಿತ್ತ್. ಇಲ್ಲೂ ಅದೇ ಮೊದ್ಲ ಲೈನ್ `ಓ ಗಾಡ್ ಸೇವ್ ಮಿ...' ಈಗ ಸ್ಪೆಲ್ಲಿಂಗ್ ಸರಿಯಾಗಿತ್. ಹೌದು, ಇಂಗ್ಲೀಷ್ ಮಾಸ್ಟ್ರ ರೌದ್ರಾವತಾರಂದ ದೇವ್ರೇ ಕಾಪಾಡಕಾಗಿತ್ತ್. ಕ್ಲಾಸ್ರೂಂನೊಳಗೆ ಮೊದ್ಲು ಬೆತ್ತ ಕಾಣ್ಸಿಕಂಡ್, ಮತ್ತೆ ಮಾಸ್ಟರ್ ಕಾಲಿಟ್ಟೊ... ಒಳಗೆ ಬಂದ ಕೂಡ್ಲೇ, ಬಗ್ಗಿಕಂಡ್ ಇನ್ನೊಂದು ಲವ್ಲೆಟರ್ ಬರೀತಿದ್ದ ಚೋಮುಣಿನ ಇನ್ನಷ್ಟ್ ಬಗ್ಗಿಸಿ ಬೆನ್ನು ಮೇಲೆ ರಪ...ರಪ..ತಾ ಹೊಡೆಯಕೆ ಶುರು ಮಾಡ್ದೋ. ಚೋಮುಣಿ ಎದ್ದ್ ಓಡದೇ ಇದ್ದಿದ್ದ್ರೆ, ಅವ್ನ ಬೆನ್ನು ಮುರೀತಿತ್ತಾ ಇಲ್ಲ ಕೋಲು ಮುರೀತಿತ್ತಾತ ಗೊತ್ಲೆ. ಅಷ್ಟು ಹೊತ್ತಿಗೆ ಮಾಸ್ಟ್ರ ಸಿಟ್ಟ್ ಇಳ್ದಿತ್ತ್..`ಲವ್ ಲೆಟರ್ ಬರೀತಾನಂತೆ ಲವ್ ಲೆಟರ್... ಅದೂ ಇಂಗ್ಲೀಷ್ಲಿ... ಮೊದ್ಲು ಅವ್ನಿಗೆ ಎ ಬಿ ಸಿ ಡಿ ಸರಿಯಾಗಿ ಕಲಿಯೋಕೆ ಹೇಳಿ' ತಾ ಹೇಳಿ ಬಂದ ಸ್ಪೀಡ್ಲೇ ಮಾಸ್ಟ್ರ್ ಸ್ಟಾಪ್ ರೂಂಗೆ ವಾಪಸ್ ಹೋದೊ.
  ಚೋಮುಣಿ ಈಗ ಲಾಯರ್ ! ಕೋಟರ್್ಲಿ ಅಂವನ ಆಗ್ಯರ್ೂಮೆಂಟ್ ನಡೆಯೋದೆಲ್ಲಾ ಇಂಗ್ಲಿಷ್ಲೇ... ಈಗ ಹೇಳಿ, ಓದ್ತಿರ್ಕಾಕಕನ ಲವ್ಲೆಟರ್ ಬರೆಯೋದು ತಪ್ಪಾ? ಸರೀನಾ?

- `ಸುಮಾ' 
arebhase@gmail.com                                                                                                                                   

ನನ್ನ ದಾರಿ ನಂದ್


ನನ್ನ ಕಾಲ ಮೇಲೆ ನಾ
ನಿಂತುಕಣಕು..
ಗಟ್ಟಿಯಾಗಿ !
ಅಕ್ಕಪಕ್ಕದವ್ಕೆ
ಎದ್ದು ಕಾಣುವಂಗೆ
ಯಾರು ಎತ್ತ ಎಳೆದರೂ
ಅಲುಗಾಡದಂಗೆ
ನಡೆಯೋಕು ನಾ
ದಿಟ್ಟ ಹೆಜ್ಜೆ ಇಟ್ಟ್
ಅತ್ತ- ಇತ್ತ ಹೊರಳದಂಗೆ
ಎಲ್ಲವೂ ಗುರುತಿಸೋಕು
ನಾ...ಎಲ್ಲರ ಕಣ್ಣು ಕುಕ್ಕೋಕು..

- ತಳೂರು ಡಿಂಪಿತಾ,
ನೀವೂ ಬರೆಯನಿ...
arebhase@gmail.com

Wednesday, 14 December 2011

ಅರೆಭಾಷೆಗೊಂದು ಅಕಾಡೆಮಿ ಬೇಕು


          ದಕ್ಷಿಣಕನ್ನಡ ಮತ್ತೆ ಕೊಡಗುಲಿ ಇರ್ವ ಗೌಡುಗಳದ್ದ್ ದೊಡ್ಡಸಮುದಾಯ. ನಮ್ಗೆ ನಮ್ಮದೇ ಆದ `ಅರೆಭಾಷೆ' ಉಟ್ಟು. ನಮ್ಮ ಸಂಸ್ಕೃತಿ ಆಚಾರ-ವಿಚಾರ ಕೂಡ ಬೇರೆಯವ್ಕಿಂತ ತುಂಬಾ ಬೇರೆನೇ. ಹುಟ್ಟುನಿಂದ ಸಾವಿನ ತನಕ ನಾವು ನಮ್ಮದೇ ವಿಶಿಷ್ಟ ಸಂಪ್ರದಾಯನ ಪಾಲಿಸಿವೆ. ಆದ್ರೆ ಆಧುನಿಕತೆ ಬೆಳೆದಂಗೆ ಸಂಪ್ರದಾಯ ಎಲ್ಲೋ ಒಂದು ಕಡೆ ಮರ್ತು ಹೋಗ್ತುಟ್ಟು. ಇದನ್ನೆಲ್ಲಾ ಉಳ್ಸಿ ಬೆಳ್ಸಿಕೆ ಒಂದ್ ಸಂಸ್ಥೆ ಬೇಕಾದೆ. ಅದ್ ಸಕರ್ಾದ ಸಹಾಯಲೇ ಇದ್ದರೆ ಒಳ್ಳೆದ್ತೇಳಿ ಯೋಚನೆ ಮಾಡುದಾದರೆ `ಅರೆಭಾಷೆ ಅಕಾಡೆಮಿ' ಶುರು ಮಾಡ್ದು ಹೆಚ್ಚು ಸೂಕ್ತತ ಕಂಡದೆ. 
ನಮ್ಮ ರಾಜ್ಯಲಿ ಈಗ ಕೊಡವ ಅಕಾಡೆಮಿ, ತುಳು ಅಕಾಡೆಮಿ, ಕೊಂಕಣಿ ಅಕಾಡೆಮಿ, ಬ್ಯಾರಿ ಅಕಾಡೆಮಿಗ ಒಳೊ. ಆಯಾಯ ಭಾಷೆಲಿ ಇರ್ವು ಅಕಾಡೆಮಿಗ ಆಯಾಯ ಭಾಷೆ, ಸಂಸ್ಕೃತಿಗೆ ಸಂಬಂಧಿಸಿದಂಗೆ ಒಳ್ಳೇ ಕೆಲ್ಸಗಳನ್ನೇ ಮಾಡ್ತುಟ್ಟು. ಉದಾಹರಣೆಗೆ ಕೊಡವ ಅಕಾಡೆಮಿ ನೋಡುದಾದ್ರೆ, ವರ್ಷಪೂತರ್ಿ ಒಂದಲ್ಲ ಒಂದು ಕಾರ್ಯಕ್ರಮಗಳಲ್ಲಿ ಬ್ಯುಸಿ ಆಗಿದ್ದದೆ. ಕೊಡವ ಭಾಷೆಯ ಹಾಡು, ನೃತ್ಯಗಳ್ನ ಕಲ್ಸಿಕೊಡ್ವ `ಆಟ್ಪಾಟ್ ಪಡಿಪು' ಅಂತೂ ತುಂಬಾ ಒಳ್ಳೆ ಕಾರ್ಯಕ್ರಮ ಆಗ್ಯುಟ್ಟು. ಅದ್ರ ಮೂಲಕ ಇಂದಿನ ಜನಾಂಗಕ್ಕೆ ಕೊಡವರ ಸಾಂಸ್ಕೃತಿಕ ಪ್ರಪಂಚನ ಪರಿಚಯ ಮಾಡಿಕೊಡ್ತೊಳೊ. ವರ್ಷಕ್ಕೆ ಒಂದ್ಸಲ ನಡಿವ ಕೊಡವ ಸಾಂಸ್ಕೃತಿಕ ಮೇಳ ಕೂಡ ಕೊಡವ ಅಕಾಡೆಮಿ ಮೂಲಕನೇ ವ್ಯವಸ್ಥೆ ಮಾಡಿವೆ. ಹಂಗಾಗಿ ಎಲ್ಲೋ ಒಂದು ಕಡೆ ಕೊಡವರು ತಮ್ಮ ಸಂಸ್ಕೃತಿನ ಮರೀತಿದ್ದ್ರೂ, ಕೊಡವ ಅಕಾಡೆಮಿ ಮತ್ತೆ ಆ ಸಂಸ್ಕೃತಿಗೆ ಜೀವ ಕೊಡುವ ಕೆಲ್ಸ ಮಾಡ್ತುಟ್ಟು.
ಅರೆಭಾಷೆ ಅಕಾಡೆಮಿ ಶುರುವಾದ್ರೆ ನಮ್ಮ ಸಮುದಾಯಕ್ಕೂ ಇಂಥ ತುಂಬಾ ಪ್ರಯೋಜನ ಆದೆ. ಇದ್ಕಾಗಿ ಈಗಾಗ್ಲೇ ನಮ್ಮವು ಪ್ರಯತ್ನ ನಡೆಸ್ತೊಳೊ. ಮುಖ್ಯಮಂತ್ರಿ ದೇವರಗುಂಡ ಸದಾನಂದ ಗೌಡ ಅವ್ಕೆ ಮನವಿ ಕೊಟ್ಟೊಳೊ. ಸದಾನಂದ ಗೌಡರ ಕಡೆಯಿಂದಲೂ ಒಳ್ಳೇ ಪ್ರತಿಕ್ರಿಯೆ ಸಿಕ್ಕುಟ್ಟು. ರಾಜಕೀಯ ದೃಷ್ಟಿಯಿಂದ ನೋಡುದಾದ್ರೆ `ಅರೆಭಾಷೆ ಅಕಾಡೆಮಿ' ಬಗ್ಗೆ ಸಕರ್ಾರದ ಮೇಲೆ ಒತ್ತಡ ಹಾಕಿಕೆ ಇದೊಳ್ಳೆ ಸಮಯ. ಯಾಕಂದ್ರೆ, ಮುಖ್ಯಮಂತ್ರಿ ಕುಚರ್ೀಲಿ ನಮ್ಮವೇ ಒಳೋ. ಶೋಭಾ ಕರಂದ್ಲಾಜೆ ಅವು ತುಂಬಾ ಪ್ರಭಾವಿ ಮಂತ್ರಿಯಾಗಿ ಗುರುತಿಸಿಕೊಂಡೊಳೊ. ಜೊತೇಲಿ ಸ್ಪೀಕರ್ ಆಗಿರುವವು ನಮ್ಮವೇ ಆಗಿರ್ವ ಕೊಂಬಾರನ ಬೋಪಯ್ಯ. ಹಂಗಾಗಿ ಈಗ ಸರಿಯಾದ ದಿಕ್ಕ್ಲಿ ಒತ್ತಡ ಹಾಕಿರೆ `ಅರೆಭಾಷೆ ಅಕಾಡೆಮಿ' ಶುರುವಾದು ಕಷ್ಟವೇನೂ ಅಲ್ಲ... ಆ ದಿನ ಬೇಗ ಬರ್ಲಿ....

- `ಸುಮಾ'
arebhase@gmail.com

ಮಾತು ಹೊಳೆ.. ನಾ ಕಲ್ಲು !


ಅತ್ತೆಯ ಮಾತ್
ರೈತನ ಚಾಟಿ ಏಟಿನಂಗೆ
ಮಾವನ ಮಾತ್ 
ಮಳೆ ಬಿಟ್ಟರೂ ಹನಿ ಬಿಡದಂಗೆ
ಗಂಡನ ಮಾತು
ಬೆಲ್ಲದ ಪಾಕ ಇದ್ದಂಗೆ
ನಾದಿನಿಯರ ಮಾತ್
ಬೆಂಕಿಕೊಳ್ಳಿಯೇ ಮುಖಕ್ಕಿಟ್ಟಂಗೆ
ಮೈದುನರ ಮಾತ್
ಉರಿ ಬಿಸಿಲಲ್ಲಿ ಚೇಳು ಕಚ್ಚಿದಂಗೆ
ನೆರೆಹೊರೆಯವರ ಮಾತ್
ನಡೆಯಕಾಕನ
ಕಲ್ಲೆಡಗಿ ಬಿದ್ದಂಗೆ
ಎಲ್ಲರ ಮಧ್ಯೆ ನನ್ನ ಮಾತ್..
ಇಲ್ಲೆ....
ಬರೀ ಮೌನ !


- ತಳೂರು ಡಿಂಪಿತಾ
ನೀವೂ ಬರೆಯನಿ...
arebhase@gmail.com

Tuesday, 13 December 2011

ಸೀಟ್ ನಂಬರ್ `27,28'


ಬೆಳಗ್ಗೆ 6 ಗಂಟೆ 50 ನಿಮಿಷ. ಟುಟಿಕೋರಿನ್ನಿಂದ ಮೈಸೂರಿಗೆ ಹೋಗ್ವ ರೈಲು ಬೆಂಗಳೂರು ಸ್ಟೇಷನ್ ಲಿ  ಬಂದ್ ನಿಂತತ್. ಅಂದ್ ಶುಕ್ರವಾರ. ಹೇಳಿಕೊಳ್ವಂಥ ರಷ್ ಏನೂ ಇತ್ಲೆ. ಆದರೂ ಸೀಟಿಗಾಗಿ ತಳ್ಳಾಟ ಇತ್ತ್. ಇಳಿಯವು ಎಲ್ಲಾ ಇಳೀಲಿತಾ ನಾನು ಸುಮ್ನೆ ಬಾಗ್ಲ್ ಹತ್ರ ನಿಂತಿದ್ದೆ. ಟೂರ್ ಹೋಗಿದ್ದ ಅದ್ಯಾವುದೋ ಶಾಲೆ ಮಕ್ಕ ನನ್ನ ಎದುರುನ ಬೋಗಿಂದ ಇಳೀತಿದ್ದೊ. ಆ ಮಕ್ಕ ಎಲ್ಲಾ ಪೂತರ್ಿ ಇಳ್ದಿತ್ಲೆ, ಆಗ್ಲೇ ಹಿಂದಿದ್ದವು ದೂಡಿದ ರಭಸಕ್ಕೆ ನಾ ಬೋಗಿ ಒಳಗೆ ಹೋಗಿಬಿಟ್ಟಿದ್ದೆ. ಬೇಗ ಒಳಗೆ ನುಗ್ಗಿದ್ದ್ರಿಂದ ಕಿಟಕಿ ಹತ್ರನೇ ಜಾಗ ಸಿಕ್ತ್...ಸ್ವಲ್ಪ ಹೊತ್ಲೇ ನನ್ನ ಅಕ್ಕ ಪಕ್ಕ, ಎದ್ರು ಎಲ್ಲಾ ಕಡೆ ಜನ ಕುದ್ದುಕೊಂಡೊ.
ರೈಲು ಬೆಂಗಳೂರಿಂದ ಹೊರಡಿಕೆ ಇನ್ನ್ 5 ನಿಮಿಷ ಇತ್ತಷ್ಟೆ. ಅಷ್ಟೊತ್ತಿಗೆ ಟಿಪ್ ಟಾಪಾಗಿದ್ದ ಗಂಡ ಹೆಣ್ಣ್ನ ಒಂದು ಜೋಡಿ `27,28' `27,28' ತಾ ಹೇಳಿಕಂಡ್ ಬರ್ತಿದ್ದೋ...ಗಂಡಂಗೆ ಅಂದಾಜ್ 65 ವರ್ಷ ಆಗಿರ್ದೆನೋ. ಅವ್ರ ಹೆಣ್ಗೆ ಗಂಡನಿಕ್ಕಿಂತ ಒಂದ್ಹತ್ತು ವರ್ಷ ಕಡಿಮೆ ಇದ್ದಂಗೆ ಇತ್. ಆ ಆಂಟಿ ಆ ವಯಸ್ಸಲ್ಲೂ ಲಿಫ್ಸ್ಟಿಕ್ ಹಾಕಿತ್ತ್. ಕಣ್ಣಿಗೆ ಕೂಲಿಂಗ್ ಗ್ಲಾಸ್, ಕೈ, ಕಾಲು ಉಗುರು ನೀಟಾಗಿ ಕಟ್ ಮಾಡಿ ಕೆಂಪು ಕಲರ್ನ ನೈಲ್ ಪಾಲಿಶ್ ಮೆತ್ತಿಕಂಡಿತ್. ಚಳಿ ಇದ್ರೂ ಹಾಕಿಕಂಡಿದ್ದದ್ ಸ್ಲೀವ್ಲೆಸ್ ಬ್ಲೌಸ್... ಈ ಆಂಟಿಗೆ ಹೋಲಿಸಿರೆ ಅಂಕಲ್ ಸ್ವಲ್ಪ ಪೆಕ್ರನಂಗೆ ಕಾಣ್ತಿತ್ತ್. ಆ ಜೋಡಿ ಮೈಸೂರಿಗೆ ಹೋಕೆ ನಾನಿದ್ದ ರೈಲ್ಲೇ ರಿಸರ್ವೇಶನ್ ಮಾಡ್ಸಿದ್ದೊಗಡ. ಅವ್ರ ಸಿಟ್ ನಂಬರ್ `27,28' ನಾನ್ ಕುದ್ದಿದ್ದದ್ 27ನೇ ನಂಬರ್ ಸೀಟ್ಲಿ. ನನ್ನ ಎದ್ರು ಇದ್ದದ್ ಸೀಟ್ ನಂಬರ್ 28 !
ನಾನ್ ಮತ್ತೆ ನನ್ನ ಎದುರು ಕೂತಿದ್ದಂವ ಈ ರಿಸರ್ವ್  ಮಾಡ್ಸಿದ್ದ ಜೋಡಿಗೆ ಸೀಟ್ ಬಿಟ್ಟುಕೊಟ್ಟ್, ಇನ್ನೊಂದು ಕಡೆ ಕುದ್ದುಕೊಂಡೊ. ಆ ಆಂಟಿ ಅಂಕಲ್ ಅವವೇ ಮುಖ ನೋಡಿಕಂಡ್ ನಗಾಡಿ ನಮ್ಮ ಕಡೆ ಒಮ್ಮೆ ನೋಡ್ದೊ.. ಆ ದೃಷ್ಟಿ ಒಂಥರ ಕುರಿಗಳ್ನ ನೋಡಿದಂಗೆ ಇತ್ತ್ ! ಇಷ್ಟೆಲ್ಲಾ ಆಕಾಕನ ರೈಲ್ ಕೆಂಗೇರಿ ಬಿಟ್ಟಾಗಿತ್ತ್. ರಾತ್ರಿ ಲೇಟಾಗಿ ಮಲಗಿ, ಬೆಳಗ್ಗೆ ಬೇಗ ಎದ್ದಿದ್ದ್ರಿಂದ ಹಂಗೇ ನಿದ್ರೆ ತೂಗ್ತಿತ್ತ್.. ಕಣ್ಣ್ ಮುಚ್ಚಿದ ಕೂಡ್ಲೇ ಒಳ್ಳೇ ನಿದ್ದೆ ಬಾತ್.
ನಿದ್ರೆ ಮಂಕ್ಲಿ ಇರ್ಕಾಕಕನೇ ಏನೋ ಬೊಬ್ಬೆ ಕೇಳ್ದಂಗೆ ಆತ್. ಕಣ್ಣ್ ಬಿಟ್ಟ್ ನೋಡಿರೆ ರೈಲ್ ಮದ್ದೂರು ಸ್ಟೇಷನ್ಲಿ ನಿಂತಿತ್ತ್. ಆ ಲಿಫ್ಟಿಕ್ ಆಂಟಿ ಮತ್ತೆ ಪೆಕ್ರ ಅಂಕಲ್ ಯಾರ ಜೊತೆನೋ ಜಗಳ ಮಾಡ್ತಿದ್ದೊ... ಅದ್ ಟಿಸಿ. ವಿಷಯ ಏನ್ ತೇಳಿರೆ, ಆ ಜೋಡಿ ರಿಸರ್ವ್ ಮಾಡ್ಸುದಿರ್ಲಿ, ಮೈಸೂರಿಗೆ ಹೋಕೆ ಟಿಕೆಟ್ ಕೂಡ ತಕ್ಕಂಡಿತ್ಲೇ... ಅವು  `27,28' `27,28' ತಾ ಹೇಳಿಕಂಡ್ ಬಾಕಾಕನ ನಾವು ಬಾಯಿ ಮುಚ್ಚಿಕಂಡ್ ಸೀಟ್ ಬಿಟ್ಟ್ ಕೊಟ್ಟಿದ್ದೊ. ನಾವು `ಟಿಕೆಟ್ ತೋರ್ಸಿ, ಸೀಟು ಕೊಟ್ಟವೆ' ತಾ ಹೇಳಿದ್ದ್ರೆ, ನಮ್ಮ ಕಿಟಕಿ ಸೈಡ್ನ ಸೀಟ್ ನಮ್ಗೆನೇ ಸಿಗ್ತಿತ್... ಇದ್ನೆಲ್ಲಾ ಯೋಚ್ನೆ ಮಾಡ್ಕಾಕನ ಆ ಜೋಡಿ ನಮ್ಮನ ಕುರಿಗಳಂಗೆ ನೋಡಿ ನಗಾಡ್ದ್, ಬೇಡ ಬೇಡತಾ ಹೇಳಿರೂ ಮೈಸೂರು ತಲುಪೋ ತನಕ ನೆನಪಾಗ್ತಿತ್ತ್.
- `ಸುಮಾ'
ನೀವೂ ಬರೆಯನಿ..
arebhase@gmail.com