ಅರೆಭಾಷೆ ಮಾತಾಡುವವೆಲ್ಲಾ ಗೌಡುಗಳಾ ? ಭಾಗಮಂಡಲ ಮತ್ತೆ ಸುತ್ತಮುತ್ತಲ ಗ್ರಾಮಗಳಿಗೊಮ್ಮೆ ಹೋಗಿ ನೋಡಿ, ಇಲ್ಲಿ ಎಲ್ಲವೂ ಮಾತಾಡ್ದು ಅರೆಭಾಷೆ. ಸುಳ್ಯ ತಾಲೂಕಿನಲ್ಲೂ ಇಂಥದ್ದೇ ವಾತಾವರಣ ಉಟ್ಟು. ಮೀನು ಮಾರ್ವಾ ಉಸ್ಮಾನ್, ಚಪ್ಪಲಿ ಅಂಗಡಿ ಉಮ್ಮರ್, ಚಿನ್ನದ ಕೆಲ್ಸ ಮಾಡ್ವ ನವೀನ್ ಆಚಾರಿ, ಮಂಗ್ಳೂರಿಂದ ಬಂದಿರ್ವ ಪೊಕ್ಕಳ ಶೆಟ್ಟಿ, ದುಗರ್ಾಭವನದ ಅಶ್ವತ್ಥ್ ರೈ, ಚೇರಂಗಾಲಲಿ ಪೂಜೆ ಮಾಡ್ವ ಭಟ್ಟ, ಐಬಿಲಿ ಇರ್ವ ಡಿಸೋಜ... ಹಿಂಗೆ ನೀವು ಯಾರ್ನ ಬೇಕಾರೂ ಮಾತಾಡ್ಸಿ, ಇವೂ ಗೌಡುಗಳೇನೋ ಅನ್ನೋ ಹಂಗೆ ತುಂಬಾ ಲಾಯ್ಕಲಿ ಅರೆಭಾಷೆ ಮಾತಾಡಿವೆ. ಈ ಸಾಲಿಗೆ ಸೇರಿದೆ ಜರ್ಮನಿಯ ಕ್ಯಾಥರಿನ್.
ಭಾಗಮಂಡಲಕ್ಕೆ ಆಗಾಗ್ಗ ಫಾರೀನ್ನವು ಟೂರ್ ಬರ್ತಿದ್ದವೆ. ಒಂದ್ಸಲ ಹಿಂಗೆ ಜರ್ಮನೀಂದ ಒಂದ್ ಅಮ್ಮ, ಮಗಳ ಜೋಡಿ ಬಂದಿತ್ತ್. ಅಮ್ಮಂಗೆ ಮೂವತ್ತು ವರ್ಷ ಆಗಿದ್ದಿರ್ದೇನೋ... ಮಗ್ಳು ಸುಮಾರ್ ಒಂಬತ್ತೋ 10 ವರ್ಷದ ಗೂಡೆ. ನಾವೂ ಆಗ ಚಡ್ಡಿ ಹಾಕ್ಕಂಡ್ ಮೂರ್ನೇ ಕ್ಲಾಸ್ಗೆ ಹೋಗ್ತಿದ್ದ ಕಾಲ. ವಾಸುಮಾಸ್ಟರ್ನ ಕಾವೇರಿ ಲಾಡ್ಜ್ಲಿ ಆ ಅಮ್ಮ ಮತ್ತೆ ಮಗಳು ಸುಮಾರ್ 3 ತಿಂಗ ಇದ್ದೊ. ನಾವು ಅಲ್ಲೇ ಬಾಣೇಲಿ ಆಟಾಡಿಕಂಡ್ ಇರ್ಕಾಕನ ಆ ಜರ್ಮನ್ ಗೂಡೆ ಕಿಟಕಿ ಕಂಬಿನ ಹಿಡ್ಕಂಡ್ ನಮ್ಮನ್ನೇ ನೋಡ್ತಿತ್... ಅವ್ಳಿಗೂ ನಂ ಜೊತೆ ಆಟ ಆಡಿಕೆ ಮನಸ್ಸು ಆಗಿತ್ತೋ ಏನೋ... ಆದ್ರೆ ಏನು ಮಾಡ್ದು? ಅವ್ಳಿಗೆ ಕನ್ನಡ ಗೊತ್ಲೆ, ನಮ್ಮ ಇಂಗ್ಲಿಷ್ ಬರೀ ಎಬಿಸಿಡಿ, ಸಂಡೆ.. ಮಂಡೇ ಅಷ್ಟೇ...ಹಿಂಗಿರ್ಕನ ಒಂದು ದಿನ ಏನಾತ್ ಗೊತ್ತಾ ?
ನಮ್ಮಲ್ಲೊಬ್ಬ ಧೈರ್ಯ ಮಾಡಿ `ಏ ಗೂಡೆ ಆಟ ಆಡಿಕೆ ಬಂದಿಯನೇ ?' ಅಂತ ಕೇಳ್ತ್. ಆ ಗೂಡೆ ಪಿಳ ಪಿಳ ಕಣ್ಣ್ ಬಿಟ್ಕಂಡ್ ಸಣ್ಣದಾಗಿ ಸ್ಮೈಲ್ ಕೊಡ್ತ್. ಅಷ್ಟ್ರಲಿ ಇನ್ನೊಬ್ಬ ಕೈ ಭಾಷೆಲಿ ಆ್ಯಕ್ಟ್ ಮಾಡಿ ತೋರ್ಸಿ ಅವ್ಳನ್ ಕರೆಯೋಕೆ ಟ್ರೈ ಮಾಡ್ತ್... ಕೊನೆಗೆ ಫಲ ಕೊಟ್ಟದ್ ಈ ಕೈ ಭಾಷೆ... ಅವ್ಳಿಗೆ ಅರ್ಥ ಆಗಿ ಅಮ್ಮನ ಹತ್ರ ಪರ್ಮಿಷನ್ ತಕ್ಕಂಡ್ ನಂ ಜೊತೆ ಆಟ ಆಡಿಕೆ ಬಾತ್... ಆಗ್ಲೂ ನಮ್ಮ ಮಧ್ಯೆ ಇದ್ದದ್ ಬರೀ ಕೈ ಭಾಷೆ... ಒಬ್ಬ ಮೆಲ್ಲೆ `ಯುವರ್ ನೇಮ್ ವಾಟ್' ತಾ ತನ್ನ ಇಂಗ್ಲಿಷ್ ಪಾಂಡಿತ್ಯ ತೋರ್ಸಿತ್.. ಅದ್ಕೆ ಅವ್ಳು `ಕ್ಯಾಥರಿನ್' ತಾ ಹೀಳ್ತ್... ನೋಡಿರೆ ಅವ್ಳಿಗೆ ನಮ್ಮಷ್ಟೂ ಇಂಗ್ಲಿಷ್ ಗೊತ್ತಿತ್ಲೆ. ಏಕೆಂತೇಳಿರೆ ಅವ್ಳ್ ಮಾತಾಡ್ದಿದ್ದದ್ ಜರ್ಮನಿ. ಕ್ಯಾಥರಿನ್ ಜರ್ಮನಿ ಮಿಕ್ಸ್ ಮಾಡಿ ಇಂಗ್ಲಿಷ್ ಮಾತಾಡಿರೆ, ನಾವು ಮುಖ ಮುಖ ನೋಡಿಕೊಳ್ಳವ ಹಂಗೆ ಆಗ್ತಿತ್ತ್... ಇನ್ ನಮ್ಮ ಇಂಗ್ಲಿಷ್ ಕೇಳಿ ಅವ್ಳಿಗೆ ಹುಚ್ಚು ಹಿಡಿಯುದು ಮಾತ್ರ ಬಾಕಿ...
ಹಿಂಗೆ ಶುರುವಾದ ನಂ ಫ್ರೆಂಡ್ಶಿಪ್ ಅವ್ಳಿಗೆ ಅರೆಭಾಷೆ ಕಲ್ಸೋ ವರೆಗೆ ಬಾತ್. ಕ್ಯಾಥರಿನ್ಗೆ ನಾವು ಕೈ ಭಾಷೆಲೇ ಅರೆಭಾಷೆ ಮಾತಾಡಿಕೆ ಕಲ್ಸಿದೊ... ಕೈನ ಬಾಯಿ ಹತ್ರ ತಂದ್ `ಊಟ ಆತಾ' ಕ್ರಿಕೆಟ್ ಬ್ಯಾಟ್ ಬೀಸುವಂಗೆ ಮಾಡಿ `ಆಟ ಆಡಿಕೆ ಬಂದಿಯಾ' ಹಿಂಗೆ ಕ್ಯಾಥರಿನಾಗೆ ಒಂದೊಂದೇ ಶಬ್ಧ ಕಲ್ಸಿದೋ... ಮೂರು ತಿಂಗ ಆಕಾಕನ ಅವ್ಳೂ ತಕ್ಕ ಮಟ್ಟಿಗೆ ಅರೆಭಾಷೆ ಮಾತಾಡಿಕೆ ಕಲ್ತ್ಬಿಟ್ಟಿತ್ ! ಆದರೆ ಅವ್ಳ ಉಚ್ಛಾರಣೆಗೆ ಕೇಳಿರೆ ಮಾತ್ರ ನಾವು ನಗಾಡಿ ನಗಾಡಿ ಸುಸ್ತಾಗಿ ಬಿಡ್ತಿದ್ದೋ.. ಏನು ಮಾಡಿರೂ ಕ್ಯಾಥರಿನ್ ಬಾಯ್ಲಿ `ಳ' ಹೇಳಿಕೆ ಆಕ್ತಿತ್ಲೆ.. `ಳ' ಕ್ಕೆ ಅವ್ಳು `ಲ' ತನೇ ಹೇಳ್ತಿತ್... ಹಂಗೆ `ಹೇಳು' ತೇಳಿಕೆ ಅವ್ಳು `ಹೇಲು' ತಾ ಹೇಳ್ತಿತ್. ಅದ್ರ ಅರ್ಥ ಹೇಳ್ದ ಮೇಲೆ ಅವ್ಳೂ ನಂಜೊತೆ ಸೇರ್ಕಂಡ್ ಜೋರಾಗಿ ನಗಾಡ್ತಿತ್... ಹಿಂಗೆ ಅರೆಭಾಷೆ ಕಲ್ತ ಕ್ಯಾಥರಿನ್ ಒಂದು ದಿನ ಜರ್ಮನ್ಗೆ ವಾಪಸ್ ಹೋಗಿಬಿಟ್ಟಿತ್.
ಕಳ್ದ ವರ್ಷ ಫೇಸ್ಬುಕ್ಲಿ `ಭಾಗಮಂಡಲ' ತಾ ಕೊಟ್ಟು ಹುಡುಕಿಕಾಕನ ಅಲ್ಲಿ ಕ್ಯಾಥರಿನ್ ಹೆಸ್ರ್ ! ನಂಗೇ ಕ್ಯಾಥರಿನ್ ಮರ್ತ್ ಹೋಗಿಬಿಟ್ಟಿತ್. ಹೋಮ್ ಪೇಜ್ ನೋಡಿಕಾಕನ ಅಲ್ಲೊಂದು ಕಡೆ ಭಾಗಮಂಡಲಲಿ `ಅರೆಭಾಷೆ' ಕಲ್ತದ್ನ ಹೇಳ್ಕಂಡಿತ್ತ್... ಆಗ ನಂಗೆ ಹಳೇದೆಲ್ಲಾ ಯೋಚ್ನೆ ಆತ್... ಫ್ರೆಂಡ್ರಿಕ್ವೆಸ್ಟ್ ಕಳ್ಸಿದ್ದೆ. ಆನ್ಲೈನ್ಲಿ ಇದ್ದ ಅವ್ಳು ಕೂಡ್ಲೇ ರೆಸ್ಪಾನ್ಸ್ ಮಾಡ್ತ್... ಚಾಟಿಂಗ್ಲಿ ಅವ್ಳು ಮೊದ್ಲು ಕೇಳ್ದ್ `ಹೆಂಗೊಳ ಮಾರಾಯ?' ಜರ್ಮನಿಗೆ ಹೋದ್ರೂ ಅವ್ಳು ಅರೆಭಾಷೆ ಮತರ್ಿತ್ಲೆ... ಅವ್ಳಿಗೆ ಆಗ್ಲೇ ಮೂರು ಮದುವೆ ಆಗಿ, ಮೂರನೆಯವಂಗೂ ಡೈವೋಸರ್್ ಕೊಡೋ ಯೋಚ್ನೇಲಿ ಇತ್ತ್... `ಹಿಂಗಾದ್ರೆ ಹೆಂಗೆ ಮಾರಾಯ್ತಿ ? ಲೈಫ್ಲಿ ಇನ್ನು ಎಷ್ಟು ಮದುವೆ ಆಕುತೊಳಾ' ತಾ ನಾ ಕೇಳ್ದೆ. `ಅದೆಲ್ಲಾ ಇಲ್ಲಿ ಕಾಮನ್ ಒಬ್ಬ ಇಷ್ಟ ಆತ್ಲೆತೇಲಿಳೆ ಇನ್ನೊಬ್ಬ...' ಅವ್ಳ ಉತ್ತರ. ಪುಣ್ಯಾತ್ಮಗಿತ್ತಿ ಕ್ಯಾಥರಿನ್ ಗಂಡಂದಿರ್ನ ಚೇಂಜ್ ಮಾಡಿ ಅವ್ರನ್ನ ಮರ್ತಿದ್ದ್ರೂ ಅರೆಭಾಷೆ ಮರ್ತಿತ್ಲೆ...
ಈಗ್ಲೂ ಒಮ್ಮೊಮ್ಮೆ ಕ್ಯಾಥರಿನ್ ಚಾಟಿಂಗ್ಗೆ ಬಂದದೆ. ಮೊನ್ನೆ ಮೊನ್ನೆ ಅವ್ಲಿಗೆ ನಾಲ್ಕನೆ ಮದುವೆ ಆಗ್ಯಟ್ಟು.. ಚಾಟ್ ಮಾಡಿಕಾಕನ ಹಳೆ ನೆನಪುಗ `ಹೇಳು' `ಹೇಲು' ಎಲ್ಲಾ ನೆನಪಾದೆ... ನಾವು ನಾವೇ ನಗಾಡಿಕೊಂಡವೆ... ಮಾತಿಗೆ ಸಿಕ್ಕಿದಗೆಲ್ಲಾ ಅವ್ಳಿಗೆ, `ನಾಲ್ಕನೇ ಗಂಡನನ್ನಾದ್ರೂ ಪರ್ಮನೆಂಟ್ ಇಟ್ಕ ಮಾರಾಯಿತಿ' ತಾ ಹೇಳ್ತಿದ್ದನೆ.... ನೋಡೋಕು, ಜರ್ಮನಿಂದ ಭಾಗಮಂಡಲಕ್ಕೆ ಬಂದ್ ನಮ್ಮಿಂದ ಅರೆಭಾಷೆ ಕಲ್ತ ಕ್ಯಾಥರಿನ್ ಮುಂದೆ ಏನು ಮಾಡ್ದೆತಾ...
- 'ಸುಮಾ'
ನೀವೂ ಬರೆಯನಿ...
arebhase@gmail.com
No comments:
Post a Comment