Tuesday, 6 December 2011

ಸುಬ್ಬಯ್ಯನ ಬಿದಿರುಮುಂಡಲಿ ಬೆಂಕಿ !


        ಮಧ್ಯರಾತ್ರಿ ಸುಮಾರ್ 1 ಗಂಟೆ ಇರೋಕೇನೋ... ಹೋರಗೆ ನಾಯಿಗ ಜೋರಾಗಿ ಬೊಗಳ್ವ ಶಬ್ಧ. ಹಂದಿ ಗೈಪ್ ತಿಂದ್, ನೈಂಟಿ ಹೊಡ್ದ್, ಕಂಬಳಿ ಒಳಗೆ ತೊಡೆಸರೆಗೆ ಕೈ ಹಾಕ್ಕಂಡ್ ಮಲಗ್ಗಿದ್ದ ಪಳಂಗಪ್ಪಂಗೆ ಒಮ್ಮೆಲೇ ಎಚ್ಚರ ಆತ್. ಡಿಸೆಂಬರ್ ತಿಂಗ ಬೇರೆ. ಮೈ ಕೊರೆಯುವಂಗೆ ಚಳಿ. ತೆನೆಬಿಟ್ಟಿರೋ ಭತ್ತ ಹಾಳ್ ಮಾಡಿಕೆ ಆನೆಗ ಏನಾರ್ ಬಂದಿರ್ವೋ ಏನೋತಾ ಪಳಂಗಪ್ಪ ಸಣ್ಣಗೆ ಹೆದ್ರಿಕಣ್ತ್. ಮಲಗಿದ್ದಲ್ಲಿಂದನೇ ನಾಯಿಗಳಿಗೆ `ಚೂ ಚೂ.. ಕರಿಯಾ...' ತಾ ಚೂ ಕೂಡ್ಸಿತ್... ಆಗ ನಾಯಿಗ ಮತ್ತಷ್ಟ್ ಜೋರಾಗಿ ಬೊಗಳಿಕೆ ಶುರು ಮಾಡ್ದೊ. `ನಿಮ್ಮ ಬೆಂಕಿ ಹಾಕಿ ಸುಡಾ. ಒಮ್ಮೆ ಹೊರಗೆ ಹೋಗಿ ನೋಡಿಕೇನ್ ರೋಗ...?' ಇನ್ನೊಂದ್ ಕೋಂಬರೆಲಿ ಮಲಗಿದ್ದ ಪಳಂಗಪ್ಪನ ಹೆಣ್ಣ್ ಪಾರ್ವತಿ, ಹಾಸಿಗೆಂದನೇ ಗುಟುರ್ ಹಾಕಿತ್. ಎರಡ್ ತಿಂಗಳ ಹಿಂದೆ ಕುತ್ತಿಗೆ ವರೆಗೆ ಕುಡ್ದ್ ಬಂದಿದ್ದ ಪಳಂಗಪ್ಪ, ಮುಖದ ಮೇಲೆ ಐದು ಬೆರಳುಗ ಕಾಣುವಂಗೆ ಹೆಣ್ಣ್ಗೆ ಹೊಡ್ದಿತ್ತ್. ಅಲ್ಲಿಂದ ಈಚೆಗೆ ಪಾರ್ವತಿ ಪಳಂಗಪ್ಪನ ಜೊತೆ ಮಲಗದೆ, ಅವ್ಳ ಅತ್ತೆ ಉಪಯೋಗಿಸ್ತಿದ್ದ ಕೋಂಬರೆಲಿ ಮಲಗ್ತಿತ್. ಪಳಂಗಪ್ಪನ ಬೊಬ್ಬೆ, ನಾಯಿಗ ಬೊಗಳುದು ಕೇಳೊಕಾಕನ ಅವ್ಳಿಗೂ ಎಚ್ಚರಿಕೆ ಆಗಿಬಿಟ್ಟಿತ್.
ಸಾಧುಬೀಡಿನ ತುಟಿಗೆ ಸಿಕ್ಕಿಸಿಕಂಡ್, ಅದಕ್ಕೆ ಬೆಂಕಿಗೀರಿ ಪುಸ ಪುಸತ ಎರಡು ಸಲ ಧಂ ಎಳ್ದ್ ಸ್ವಲ್ಪ ಮೈ ಬಿಸಿ ಆದಂಗೆ ಆದ್ಮೇಲೆ, ಪಳಂಗಪ್ಪ ಮನೇಂದ ಹೊರಗೆ ಕಾಲಿಟ್ಟತ್. ಪುನ: ಒಂದ್ಸಲ ನಾಯಿಗಳ್ನ ಚೂ ಕೂಡ್ಸಿತ್. ದೂರಲಿ ಸುಬ್ಬಯ್ಯನ ತೋಟ ಹತ್ರ ಎಂಥದ್ದೋ ಜೋರು ಮಾತು ಕೇಳ್ದಂಗೆ ಆಗ್ತಿತ್... ಇಂದ್ ಸೋಮವಾರ ಯಾರೋ ಸಂತೆಗೆ ಹೋಗಿ ಕುಡ್ಡು ಬಂದ್ ಜಗಳ ಮಾಡ್ತಿರ್ವೇನೋತಾ ಪಳಂಗಪ್ಪ ಯೋಚ್ನೆ ಮಾಡ್ಕಂಡ್ ಮನೆ ಒಳಗೆ ಕಾಲಿಟ್ಟದ್ ಅಷ್ಟೇ... ಅದೇ ಸುಬ್ಬಯ್ಯನ ತೋಟ ಕಡೇಂದ `ಢಂ'... ಗುಂಡು ಹೊಡ್ದ ಶಬ್ಧ ಕೇಳ್ತ್. `ಸುಬ್ಬಯ್ಯನ ಮನೇಲಿ ನಾಳೆ ಗ್ಯಾರಂಟಿ ಕ್ಯಾಮದ ಗೈಪು' ತಾ ಪಳಂಗಪ್ಪ ಬಾಯಿಲಿ ನೀರು ಸುರ್ಸ್ತಾ ಮತ್ತೆ ಕಂಬಳಿ ಒಳಗೆ ಸೇರ್ಕಂಡತ್. ಆದ್ರೆ ಪಾರ್ವತಿ ಸುಮ್ಮನೆ ಮಲಗಿತ್ಲೆ. ಕಿಟಕಿ ಬಾಗ್ಲ್ನ ಮೆಲ್ಲೆ ತೆಗ್ದ್ ನೋಡ್ತ್.... ನಾಯಿಗ ಇನ್ನೂ ಬೊಗಳ್ತನೆ ಇದ್ದೊ...ಮನುಷ್ಯರ ಮಾತು ಮಾತ್ರ ಕೇಳ್ತಿತ್ಲೇ... ಸುಬ್ಬಯ್ಯನ ಬೇಲಿ ಮೂಲೆಲಿ ಇದ್ದ ಬಿದ್ರ್ಮುಂಡ ಧಗಧಗತಾ ಹೊತ್ತಿ ಉರೀತಿತ್ತ್ !
ಬೆಳಗ್ಗೆ 8 ಗಂಟೆ ಆದ್ರೂ ಪಳಂಗಪ್ಪ ಎದ್ದಿತ್ಲೆ.. ಮನೆ ಹೊರಗೆ ಯಾರ್ದೋ ಮಾತ್ ಕೇಳ್ತಿತ್... ಹಂಗೆನೇ ಬಲಬದಿಲಿ ಎದ್ದ್ ದೇವ್ರಿಗೆ ಕೈಮುಗ್ದ್ ಹೊರಗೆ ಬಂದ್ ನೋಡಿರೆ ಕೆಂಚನ ಮಂಙ ತಿಮ್ಮ ಮರಡುವಂಗೆ ಮುಖ ಮಾಡಿಕಂಡ್ ನಿಂತಿತ್ತ್. ನಿನ್ನೆ ಸಂತೆಗೆ ಹೋಗಿದ್ದ ಅವ್ನ ಅಪ್ಪ ವಾಪಸ್ ಮನೆಗೆ ಬಂದಿತ್ಲೆ. ಹಂಗೆ ಅಂವ ಹುಡ್ಕಂಡ್ ಪಳಂಗಪ್ಪನ ಮನೆ ಕಡೆ ಬಂದಿತ್ತ್. ಕೆಂಚನ ಬಗ್ಗೆ ಯಾರಿಗೂ ಒಳ್ಳೆ ಅಭಿಪ್ರಾಯ ಇತ್ಲೆ. ಏಲಕ್ಕಿ ಸೀಸನ್ಲಿ ಏಲಕ್ಕಿ ಕಳ್ಳತನ. ಕಾಫಿ ಒಣಗಿಸಿಕಾಕನ ಕಣಂದನೇ ಕಾಫಿ ಕದ್ಕಂಡ್ ಹೋದು... ಹಿಂಗೆ ಬರೀ ಕಳ್ಳತನಲೇ ಬದಕುತ್ತಿದಂವ ಕೆಂಚ. ಯಾರಾರ ಮನೇಲಿ ಕೋಳಿ ನಾಪತ್ತೆ ಆದ್ರೆ, ಮೊದ್ಲು ಮೊದ್ಲು ಹೋಗಿ ಕೆಂಚನ ಮನೆ ಮಣ್ಣ್ನ ಚೆಟ್ಟಿದ್ ಮುಚ್ಚಳ ತೆಗ್ದ್ ನೋಡ್ತಿದ್ದೊ.. ಅಲ್ಲಿ ಮಾಂಸ ಸಾರ್ ಇಲ್ಲೆತೇಳಿರೆ `ಓ ಕೋಳಿನ ಕುದ್ಕ ಹೊತ್ತಿರೋಕೇನೋ' ತಾ ಕೋಳಿ ಕಳ್ಕಂಡವ್ ಸುಮ್ನೆ ಆಗ್ತಿದ್ದೊ.. ಅಷ್ಟರ ಮಟ್ಟಿಗೆ ಕೆಂಚ ಊರವ್ರ ನಂಬಿಕೆ ಕಳ್ಕಂಡಿತ್ ! ಇಂಥ ಕೆಂಚನೇ ನಿನ್ನೆಂದ ಮನೆಗೆ ಬಾತ್ಲೆತಾ ತಿಮ್ಮ ಹುಡ್ಕಂಡ್ ಬಂದಿತ್.
ಕೆಂಚ ಕಾಣೆಯಾಗಿ ಈಗ ಒಂದ್ ತಿಂಗ. ಸುಬ್ಬಯ್ಯನ ತೋಟಲಿ ಹೊತ್ತಿ ಉರ್ದ ಬಿದರು ಮುಂಡ ಹತ್ರ ಕೆಲ್ಸದವು ಬೇಲಿ ಸರಿ ಮಾಡ್ತಿದ್ದೋ. ಎಂಥದ್ದೋ ಮೂಳೆ ಕಂಡಂಗೆ ಆತ್. ಹತ್ತಿರ ಹೋಗಿ ನೋಡಿರೆ ಅದ್ ಮನುಷ್ಯನ ಮೂಳೆಗ ! ದೂರಲಿ ನಿಂತಿದ್ದ ಸುಬ್ಬಯ್ಯ ಮೀಸೆ ಕೆಳಗೆನೇ ನಗಾಡ್ತಿತ್. ಅದ್ ರಾಕ್ಷಸ ನಗೆ. `ಬಡ್ಡೀ ಮಕ್ಕ... ನನ್ನ ತೋಟಕೆನೇ ಕಾಫೀ ಕದಿಯಕ್ಕೆ ಬಂದವೆ...ಇನ್ನು ಯಾರಾರೂ ಬರ್ಲಿ ನೋಡನಾ...' ಕೆಲ್ಸದವ್ಕೆ ಕೇಳುವಂಗೆ ಸುಬ್ಬಯ್ಯ ಜೋರಾಗಿ ಹೇಳ್ತ್.... ನಾಪತ್ತೆಯಾದ ಕೆಂಚನ ಮನೇಲಿ ಅವ್ನ ಹೆಣ್ ಮರ್ಡುದು ಇನ್ನೂ ನಿಂತೇ ಇತ್ತ್ಲೇ...

- 'ಸುಮಾ'

ನೀವೂ ಬರೆಯನಿ..
arebhase@gmail.com

No comments:

Post a Comment