Thursday 1 December 2011

ಕೆಂದಾವರೆಯ ಕಂದ !


ಪುಟ್ಟ ಪುಟ್ಟ ಹೆಜ್ಜೆ...
ಬೆಣ್ಣೆಯಷ್ಟೇ ಮೆತ್ತನೆ ಕಾಲು
ತಾವರೆಯಗಲ ಕಣ್ಣ್
ಎಲ್ಲಿದ್ದೆ ಕಂದ ನೀ ಇಷ್ಟ್ ದಿನ ?
ನಿದ್ದೆಲೂ ಅದೆಂಥ ನಗು !
ಯಾರೊಳಪ್ಪಾ ನಿನ್ನ ಕನಸ್ಲಿ ?
ಎಳೆಕೂದಲು, ಚೋಟು ಕೈ
   ಸಾಕಾಕಿಲ್ಲೆ ನಿಂಗೆ ಈ ತೊಟ್ಲು
ನಿನ್ನ ನೋಡ್ತಿದ್ರೆ ನೆನಪಾದೆ ನಂಗೆ
ನನ್ನ ಬಾಲ್ಯ...
ಆ ದಿನಗಳೇ ಎಷ್ಟು ಲಾಯ್ಕ !
ನಿನ್ನಲ್ಲೆ ಅದನ್ನ ಕಾಣುದಷ್ಟೇ ಈಗ ಸುಖ
ಏ ಕೂಸು..
ಅಳ್ಬೇಡಪ್ಪಾ, ಇಲ್ನೋಡು ಮಿಠಾಯಿ
ಅಮ್ಮಾ ಬೇಕಾ ಅಮ್ಮಾ ?
ಬಂದದೆ ಬಿಡು, ಇಲ್ಲೇ ಎಲ್ಲೋ ಇರೋಕು !
ಅಮ್ಮನ ಲಾಲಿ ಹಾಡು..
ಹೊತ್ತು ಹೊತ್ತಿಗೆ ಊಟ
ಕಣ್ತುಂಬಾ ನಿದ್ದೆ....
ನೀನೇ ಅದೃಷ್ಟವಂತ ಕಂದ !

- `ಸುಮಾ'

ನೀವೂ ಬರೆಯನಿ... 
arebhase@gmail.com

No comments:

Post a Comment