Sunday 18 December 2011

ಭಾಗಮಂಡಲದ `ಲಕ್ಕಡಿಕೋಟೆ' !


          ಅಂದ್ ಭಾನುವಾರ... ಕ್ರಿಕೆಟ್ ಆಡ್ನೋತೇಳಿ ಬೆಳಿಗ್ಗೆ ಬೆಳಿಗ್ಗೆನೇ ನಾವು ಫ್ರೆಂಡ್ಸೆಲ್ಲಾ ಸ್ಕೂಲ್ ಗ್ರೌಂಡ್ಲಿ ಸೇರ್ದೋ. ಯಾಕೋ ಏನೋ ಐದೈದ್ ಓವರ್ನ ಒಂದ್ ಆಟ ಆಡಿಕಾಕನ ಬೇಜಾರ್ ಆಗಿಬಿಡ್ತ್. ಎಂಥ ಮಾಡ್ದು? ಹೆಂಗಾರು ಮಾಡಿ ದಿನಕಳೆಯೋಕಲ್ಲಾ... ರಜೆ ಇರ್ಕಾಕನ ನಾವು ಎಂದ್ ಕೂಡ ಮನೆಲಿ ಕುದ್ದವು ಅಲ್ಲ. ಭಾಗಮಂಡಲ ಸುತ್ತಮುತ್ತ ಇದ್ದ ಬೆಟ್ಟಗುಡ್ಡ, ಯಾರ್ಯಾರ್ದೋ ತೋಟ ಎಲ್ಲಾ ಸುತ್ತಾಡಿ ಬಿಡ್ತಿದ್ದೊ. ತಲಕಾವೇರಿಯ ಬ್ರಹ್ಮಗಿರೀಂದ ಅಲ್ಲಿರ್ವ ವಿಂಡ್ಮಿಲ್ವರೆಗೆ ಬೆಟ್ಟದ ಇಂಚು ಇಂಚು ಹತ್ತಿ ಇಳ್ದುಬಿಟ್ಟ ವಾನರ ಪಡೆ ನಮ್ಮದ್. ಇನ್ನ್ ತಾವೂರು ಬೆಟ್ಟ, ನಿಶಾನೆ ಮೊಟ್ಟೆ, ಕೋಪಟ್ಟಿ ಬೆಟ್ಟ ಹಿಂಗೆ ಸಿಕ್ಕ ಸಿಕ್ಕ ಬೆಟ್ಟಗಳ್ನೆಲ್ಲಾ ಹತ್ತಿ ತೇನ್ಸಿಂಗ್ನಂಗೆ ಧ್ವಜ ಹಾರಿಸಿದ್ದೊ! ಇಷ್ಟೆಲ್ಲಾ `ಉರಿಬಂದ್ರೂ' ನಮ್ಮ ಕೈಂದ ಒಂದ್ ಸ್ಥಳ ತಪ್ಪಿಸಿಕೊಂಡ್ಬಿಟ್ಟಿತ್. ಅದು `ಲಕ್ಕಡಿಕೋಟೆ' !

ಭಾಗಮಂಡಲತೇಳಿರೆ ಹೆಚ್ಚು ಜನಕ್ಕೆ ಗೊತ್ತಿರ್ದು ಭಗಂಡೇಶ್ವರ ದೇವಸ್ಥಾನ, ತ್ರಿವೇಣಿ ಸಂಗಮ ಮತ್ತೆ ಹನಿಸೊಸೈಟಿ. ಇಂಥ ಊರಿಗೆ ಹಿಂದೆಯೊಮ್ಮೆ ಟಿಪ್ಪು ಸುಲ್ತಾನ್ ಬಂದಿತ್ತ್. ಅವ್ನ ಬಗ್ಗೆ ಇತಿಹಾಸ ಏನೇ ಹೇಳಿರೂ, ಜನರ ದೃಷ್ಟಿಲಿ ಅಂವ ಒಬ್ಬ ಮತಾಂಧ. ಕೊಡಗುಲಿ ತುಂಬಾ ಜನ ಕೊಡಗ್ರ್ನ ಹೆದ್ರಿಸಿ, ಅವರನ್ನೆಲ್ಲಾ ಮುಸ್ಲಿಮರನ್ನಾಗಿ ಮಾಡಿತ್ತ್. ಈಗ್ಲೂ ಕೊಡಗಿನ ಕೆಲವು ಮುಸ್ಲಿಮರಿಗೆ ಮನೆ ಹೆಸ್ರುಗ ಇರುದೇ ಇದಕ್ಕೆ ಸಾಕ್ಷಿ. ಈ ಟಿಪ್ಪು ಸುಲ್ತಾನ್ ಭಾಗಮಂಡಲಲ್ಲೂ ತನ್ನ ಬುದ್ಧಿ ತೋರ್ಸಿತ್ತ್. ಇಲ್ಲಿನ ಭಗಂಡೇಶ್ವರ ದೇವಸ್ಥಾನಲಿ ನುಗ್ಗಿದ ಕೂಡಲೇ ಎಡಗಡೆಲಿ ಸೊಂಡಿಲು ಇಲ್ಲದೆ ಇರ್ವ ಎರಡು ಕಲ್ಲಿನ ಆನೆಗ ಕಂಡವೆ. ಈ ಆನೆಗಳ ಸೊಂಡಿಲ್ನ ಕತ್ತರಿಸಿದ್ದ್ ಇದೇ ಟಿಪ್ಪು ಸುಲ್ತಾನ್ ! ಇನ್ ಭಗಂಡೇಶ್ವರ ಗುಡಿಯ ಮಾಡ್ಲಿ ಬೆಳ್ಳಿಯ ಒಂದ್ ಚಿಕ್ಕ ಶೀಟ್ ನೋಡಕ್. ದೇವರ ಶಾಪಂದ ತಪ್ಪಿಸಿಕಣಿಕೆ ಟಿಪ್ಪು ಈ ಶೀಟ್ ಹಾಕಿಸಿತ್ಗಡ. ಹಿಂಗೆ ಭಾಗಮಂಡಲಲಿ ಇದ್ದ ಟಿಪ್ಪುಗೆ ಉಳ್ಕಣಿಕೆ ಒಂದ್ ಜಾಗ ಬೇಕಿತ್ತಲ್ಲಾ... ಅದ್ಕೆತೇಳಿ ಕಟ್ಟಿಸಿದ್ದೇ `ಲಕ್ಕಡಿಕೋಟೆ'
ಆ ಭಾನುವಾರ ನಾವು ಲಕ್ಕಡಿಕೋಟೆಗೆ ಹೋದುತೇಳಿ ತೀಮರ್ಾನ ಮಾಡ್ದೊ. ಈ ಕೋಟೆ ಬಗ್ಗೆ ನಮ್ಗೆ ಕಥೆಗಳ್ಲಿ ಕೇಳಿ ಮಾತ್ರ ಗೊತ್ತಿತ್. ಆದ್ರೆ ಅಲ್ಲಿಗೆ ಹೆಂಗೆ ಹೋದು? ಎಷ್ಟು ದೂರ ಆದೆ? ಇದ್ಯಾವುದೂ ಗೊತ್ತಿತ್ಲೆ. ಆಗ ನಮ್ಮ ಸಹಾಯಕ್ಕೆ ಬಂದದ್ದ್ ಮುನ್ನ. ಅವ್ರ ತೋಟಕ್ಕಾಗಿ ಲಕ್ಕಡಿಕೋಟೆಗೆ ಹೋಕೆ ದಾರಿ ಇತ್ತ್. ಅವ್ನ ತಾತನ ಜೊತೆ ಸುಮಾರು ಸಲ ಅಂವ ಅಲ್ಲಿಗೆ ಹೋಗಿ ಬಂದಿತ್. ಹಂಗಾಗಿ ಅವ್ನೇ ನಮ್ಗೆ ಗೈಡ್ ಆಕೆ ಒಪ್ಪಿಕಣ್ತ್. ಒಂದು ವಿಷಯ ಹೇಳ್ನೆ, ನಾವೆಲ್ಲಾ ಆಗ 8, 9 ನೇ ಕ್ಲಾಸ್ನ ಹೈದಂಗ !
ಭಾಗಮಂಡಲ ತ್ರಿವೇಣಿ ಸಂಗಮ ಉಟ್ಟಲ್ಲಾ... ಅದ್ರ ಎದುರುಗಡೆ ಇರುದೇ `ಸಂಗಮಕಾಡು' ಈ `ಸಂಗಮಕಾಡು'ನ ತುತ್ತ ತುದೀಲಿ `ಲಕ್ಕಡಿಕೋಟೆ' ಉಟ್ಟು. ಸಂಗಮಕಾಡುಗೆ ಒತ್ತಿಕಂಡೆ, ನಮ್ಮ ಮುನ್ನನ ಕಾಫಿತೋಟ ಇರ್ದು. ಹಂಗಾಗಿ ಅವ್ನ ಮನೆಕಡೇಂದನೇ ನಮ್ಮ ಯಾತ್ರೆ ಶುರುವಾತ್. ಎಲ್ಲರಲ್ಲೂ ಹಿಮಾಲಯ ಹತ್ತಿಕೆ ಇದ್ದಂಗೆ ಉತ್ಸಾಹ. ಒಬ್ಬೊಬ್ಬರ ಹತ್ರನೂ ಒಂದೊಂದು ಬ್ಯಾಗ್. ಅದ್ರೊಳಗೆ ಜ್ಯೂಸ್, ಬಿಸ್ಕೆಟ್, ಚಕ್ಕುಲಿ, ಚಿಪ್ಸ್, ಪಪ್ಸ್... ಹನ್ನೊಂದು ಗಂಟೆ ಹೊತ್ತಿಗೆ ಮುನ್ನನ ಮನೆ ಹತ್ರಂದ ಹೊರಟೊ. ಮುನ್ನ ಸೇರಿ ನಾವು 6 ಜನ.. `ಹಾವುಗ ಇದ್ದವೆ ನೋಡ್ಕಂಡ್ ಹೋಗಿ...' ಮುನ್ನನ ತಾತ ಎಚ್ಚರಿಕೆ ಕೊಡ್ತ್. ಅವ್ರಮ್ಮ ಒಂದೆರಡು ಪ್ಯಾಕ್ ಬಿಸ್ಕೆಟ್ ತಂದ್ ಗುರುನ ಬ್ಯಾಗ್ಗೆ ಹಾಕಿದೊ. ಈಗ ಮುನ್ನ ಮುಂದೆ ಮುಂದೆ... ನಾವು ಅವನ ಹಿಂದೆ ಹಿಂದೆ...
ಎರಡು ಗಂಟೆ ಕಾಫಿತೋಟದೊಳಗೆನೇ ನಡ್ದ ಮೇಲೆ ನಿಧಾನಕ್ಕೆ ಕಾಡ್ ಶುರುವಾತ್. ಅಲ್ಲಿವರೆಗೆ ಸ್ವಲ್ಪ, ಸ್ವಲ್ಪ ದಾರಿ ಇತ್. ಅಲ್ಲಿಂದಾಚೆ ನಾವು ಹೋದ್ದೇ ದಾರಿ ! ಕೋತಿಗಳ್ನ ಬಿಟ್ರೆ ಮತ್ತೆಂಥ ಪ್ರಾಣಿಗ ಅಲ್ಲಿ ನಮ್ಗೆ ನೋಡಿಕೆ ಸಿಕ್ತ್ಲೆ. ಸುಸ್ತಾತ್ತೇಳೆ ನಾವೆಲ್ಲಾ ಒಂದು ಮರದ ಕೆಳಗೆ ಕಲ್ಲ್ ಮೇಲೆ ಕೂತ್ರೆ, ನಮ್ಮ ತಲೆ ಮೇಲೆ ಕೊಂಬೆಗಳಲ್ಲಿ ಕೋತಿಗ ಕುದ್ದಕಂಡ್ ನಮ್ಮನೇ ನೋಡ್ತಿದ್ದೊ. ರವಿ ಒಂದ್ ಪ್ಯಾಕ್ ಬಿಸ್ಕೆಟ್ನ ಮೇಲಕ್ಕೆ ಬಿಸಾಡ್ತ್...ಒಂದು ದೊಡ್ಡ ಮಂಗ ಅದ್ನ ಕ್ಯಾಚ್ ಮಾಡಿ, ಮೂಸಿ ನೋಡಿ ಹೊತ್ಕಂಡ್ ಇನ್ನೊಂದು  ಮರಕ್ಕೆ ಹಾರ್ತ್. ಜೊತೇಲಿದ್ದ ಕೋತಿಗನೂ ಅದ್ರ ಹಿಂದೆನೇ ಹಾರ್ದೊ...
ಅಲ್ಲಿ ಸ್ವಲ್ಪ ಹೊತ್ತ್ ರೆಸ್ಟ್ ತಕ್ಕಂಡ್ ಮತ್ತೆ `ಲಕ್ಕಡಿಕೋಟೆ' ಹುಡ್ಕಂಡ್ ಹೊರ್ಟೊ. ಸ್ವಲ್ಪ ದೂರ ಹೋಕಾಕನ ಅಲ್ಲಿ ದೊಡ್ಡ ಚರಂಡಿ ಹಂಗೆ ಮಾಡಿರ್ದು ಕಂಡತ್ `ಇದ್ ಕಡಂಗ... ಟಿಪ್ಪು ಇರ್ಕಾಕಕನ ಇದ್ರೊಳಗೆ ನೀರಿತ್ತ್.. ಮೊಸಳೆಗಳ್ನ ಕೂಡ ಸಾಕಿಕಂಡಿತ್ತ್. ಅವಂಗೆ ಗೊತ್ತಿಲ್ದೆ ಯಾರರ್ ಕೋಟೆಗೆ ಬಂದ್ರೆ ಅವ್ರನ್ನ ಇದ್ರೊಳಗೆ ದೂಡಿ ಬಿಡ್ತಿತ್..' ಮುನ್ನ ಎಲ್ಲಾ ನೋಡಿದ್ದಂಗೆ ಆ ಕಡಂಗದ ಕಥೆ ಹೇಳ್ತ್. ಅದ್ನ ಕೇಳ್ಕಂಡ್ ನಾವ್ ಕಡಂಗ ದಾಟಿ ಮುಂದೆ ಹೋದೊ... ಅಲ್ಲಿಂದ ಸ್ವಲ್ಪ ದೂರ ಹೋಕಾಕನ, ಅಲ್ಲಿ ಅರ್ಧ ಬಿದ್ದ ಗೋಡೆ, ದೊಡ್ಡ ದೊಡ್ಡ ಕಲ್ಲ್ಗ ಬಿದ್ದಿದ್ದದ್ ಕಾಣ್ತ್... ಅಷ್ಟೊತ್ತಿಗೆ ಅರುಣ, `ಇಲ್ಲಿ ಯಾರ್ರ ಮನೆ ಕಟ್ಟಿಕಂಡ್ ಇದ್ದದ್ದ್? ಪಾಪ ಮಳೆಗೆ ಬಿದ್ದುಹೋಗಿರೋಕು ಕಂಡದೆ..' ತಾ ಹೇಳಿ, ಇನ್ನೇನೋ ಮುಂದಕ್ಕೆ ಹೇಳಿಕೆ ಹೊರ್ಟತ್.. ಆಗ ಮುನ್ನ, `ಅಯ್ಯೋ ಇದ್ ಬಿದ್ದ ಮನೆ ಅಲ್ಲ ಮಾರಾಯ, ಲಕ್ಕಡಿಕೋಟೆ !'ತಾ ಹೇಳ್ತ್.
ಕೋಟೆತೇಳಿರಿ ಮಡಿಕೇರಿ ಕೋಟೆ ಹಂಗೆ ಇರ್ದೇನೋತೇಳಿ ಯೋಚ್ನೆ ಮಾಡಿಕಂಡ್ ಬಂದಿದ್ದ ನಮ್ಗೆ, ಈ `ಲಕ್ಕಡಿಕೋಟೆ' ನೋಡಿ ತುಂಬಾ ನಿರಾಸೆ ಆತ್. ಆದ್ರೂ ಟಿಪ್ಪು ಇದ್ದ ಜಾಗತೇಳಿಕಂಡ್, ನಾವು ತಂದಿದ್ದ ದೊಣ್ಣೆನ ಟಿಪ್ಪು ಖಡ್ಗ ಹಿಡ್ದಂಗೆ ಆ್ಯಕ್ಟ್ ಮಾಡಿ ತುಂಬಾ ಖುಷಿಪಟ್ಟೊ. (ಆಗ ದೂರದರ್ಶನಲಿ ಟಿಪ್ಪುಸುಲ್ತಾನ್ ಧಾರಾವಾಹಿ ಬರ್ತಿತ್) ತಂದಿದ್ದ ಎಲ್ಲಾ ತಿಂಡಿಗಳ್ನ ಖಾಲಿ ಮಾಡಿ ಮತ್ತೆ ಬೆಟ್ಟ ಇಳಿಯಕೆ ಶುರು ಮಾಡ್ದೊ... ಮುನ್ನನ ಕಾಫಿ ತೋಟ ಹತ್ರ ಬಾಕಾಕನ, ಭಾಗಮಂಡಲ ದೇವಸ್ಥಾನಲಿ ಸಾಯಂಕಾಲ ಹೊತ್ತು ಹಾಕ್ತಿದ್ದ ಭಕ್ತಿಗೀತೆ ಕೇಳ್ತಿತ್....

- `ಸುಮಾ'
 arebhase@gmail.com
(ಕೋಟೆಯ ಚಿತ್ರ ಕೇವಲ ಸಾಂದರ್ಭಿಕ  )

1 comment:

  1. ಲಕ್ಕಡಿ ಕೋಟೆ ಬಗ್ಗೆ ಮಾಹಿತಿ ಕೊಟ್ಟದಕ್ಕೆ ಥ್ಯಾಂಕ್ಸ್,ಈಗ ಲಕ್ಕಡಿ ಕೋಟೆ ನೋಡಿಕೆ ಬಿಟ್ಟವೆಯಾ??

    ReplyDelete