Tuesday 13 December 2011

ಸೀಟ್ ನಂಬರ್ `27,28'


ಬೆಳಗ್ಗೆ 6 ಗಂಟೆ 50 ನಿಮಿಷ. ಟುಟಿಕೋರಿನ್ನಿಂದ ಮೈಸೂರಿಗೆ ಹೋಗ್ವ ರೈಲು ಬೆಂಗಳೂರು ಸ್ಟೇಷನ್ ಲಿ  ಬಂದ್ ನಿಂತತ್. ಅಂದ್ ಶುಕ್ರವಾರ. ಹೇಳಿಕೊಳ್ವಂಥ ರಷ್ ಏನೂ ಇತ್ಲೆ. ಆದರೂ ಸೀಟಿಗಾಗಿ ತಳ್ಳಾಟ ಇತ್ತ್. ಇಳಿಯವು ಎಲ್ಲಾ ಇಳೀಲಿತಾ ನಾನು ಸುಮ್ನೆ ಬಾಗ್ಲ್ ಹತ್ರ ನಿಂತಿದ್ದೆ. ಟೂರ್ ಹೋಗಿದ್ದ ಅದ್ಯಾವುದೋ ಶಾಲೆ ಮಕ್ಕ ನನ್ನ ಎದುರುನ ಬೋಗಿಂದ ಇಳೀತಿದ್ದೊ. ಆ ಮಕ್ಕ ಎಲ್ಲಾ ಪೂತರ್ಿ ಇಳ್ದಿತ್ಲೆ, ಆಗ್ಲೇ ಹಿಂದಿದ್ದವು ದೂಡಿದ ರಭಸಕ್ಕೆ ನಾ ಬೋಗಿ ಒಳಗೆ ಹೋಗಿಬಿಟ್ಟಿದ್ದೆ. ಬೇಗ ಒಳಗೆ ನುಗ್ಗಿದ್ದ್ರಿಂದ ಕಿಟಕಿ ಹತ್ರನೇ ಜಾಗ ಸಿಕ್ತ್...ಸ್ವಲ್ಪ ಹೊತ್ಲೇ ನನ್ನ ಅಕ್ಕ ಪಕ್ಕ, ಎದ್ರು ಎಲ್ಲಾ ಕಡೆ ಜನ ಕುದ್ದುಕೊಂಡೊ.
ರೈಲು ಬೆಂಗಳೂರಿಂದ ಹೊರಡಿಕೆ ಇನ್ನ್ 5 ನಿಮಿಷ ಇತ್ತಷ್ಟೆ. ಅಷ್ಟೊತ್ತಿಗೆ ಟಿಪ್ ಟಾಪಾಗಿದ್ದ ಗಂಡ ಹೆಣ್ಣ್ನ ಒಂದು ಜೋಡಿ `27,28' `27,28' ತಾ ಹೇಳಿಕಂಡ್ ಬರ್ತಿದ್ದೋ...ಗಂಡಂಗೆ ಅಂದಾಜ್ 65 ವರ್ಷ ಆಗಿರ್ದೆನೋ. ಅವ್ರ ಹೆಣ್ಗೆ ಗಂಡನಿಕ್ಕಿಂತ ಒಂದ್ಹತ್ತು ವರ್ಷ ಕಡಿಮೆ ಇದ್ದಂಗೆ ಇತ್. ಆ ಆಂಟಿ ಆ ವಯಸ್ಸಲ್ಲೂ ಲಿಫ್ಸ್ಟಿಕ್ ಹಾಕಿತ್ತ್. ಕಣ್ಣಿಗೆ ಕೂಲಿಂಗ್ ಗ್ಲಾಸ್, ಕೈ, ಕಾಲು ಉಗುರು ನೀಟಾಗಿ ಕಟ್ ಮಾಡಿ ಕೆಂಪು ಕಲರ್ನ ನೈಲ್ ಪಾಲಿಶ್ ಮೆತ್ತಿಕಂಡಿತ್. ಚಳಿ ಇದ್ರೂ ಹಾಕಿಕಂಡಿದ್ದದ್ ಸ್ಲೀವ್ಲೆಸ್ ಬ್ಲೌಸ್... ಈ ಆಂಟಿಗೆ ಹೋಲಿಸಿರೆ ಅಂಕಲ್ ಸ್ವಲ್ಪ ಪೆಕ್ರನಂಗೆ ಕಾಣ್ತಿತ್ತ್. ಆ ಜೋಡಿ ಮೈಸೂರಿಗೆ ಹೋಕೆ ನಾನಿದ್ದ ರೈಲ್ಲೇ ರಿಸರ್ವೇಶನ್ ಮಾಡ್ಸಿದ್ದೊಗಡ. ಅವ್ರ ಸಿಟ್ ನಂಬರ್ `27,28' ನಾನ್ ಕುದ್ದಿದ್ದದ್ 27ನೇ ನಂಬರ್ ಸೀಟ್ಲಿ. ನನ್ನ ಎದ್ರು ಇದ್ದದ್ ಸೀಟ್ ನಂಬರ್ 28 !
ನಾನ್ ಮತ್ತೆ ನನ್ನ ಎದುರು ಕೂತಿದ್ದಂವ ಈ ರಿಸರ್ವ್  ಮಾಡ್ಸಿದ್ದ ಜೋಡಿಗೆ ಸೀಟ್ ಬಿಟ್ಟುಕೊಟ್ಟ್, ಇನ್ನೊಂದು ಕಡೆ ಕುದ್ದುಕೊಂಡೊ. ಆ ಆಂಟಿ ಅಂಕಲ್ ಅವವೇ ಮುಖ ನೋಡಿಕಂಡ್ ನಗಾಡಿ ನಮ್ಮ ಕಡೆ ಒಮ್ಮೆ ನೋಡ್ದೊ.. ಆ ದೃಷ್ಟಿ ಒಂಥರ ಕುರಿಗಳ್ನ ನೋಡಿದಂಗೆ ಇತ್ತ್ ! ಇಷ್ಟೆಲ್ಲಾ ಆಕಾಕನ ರೈಲ್ ಕೆಂಗೇರಿ ಬಿಟ್ಟಾಗಿತ್ತ್. ರಾತ್ರಿ ಲೇಟಾಗಿ ಮಲಗಿ, ಬೆಳಗ್ಗೆ ಬೇಗ ಎದ್ದಿದ್ದ್ರಿಂದ ಹಂಗೇ ನಿದ್ರೆ ತೂಗ್ತಿತ್ತ್.. ಕಣ್ಣ್ ಮುಚ್ಚಿದ ಕೂಡ್ಲೇ ಒಳ್ಳೇ ನಿದ್ದೆ ಬಾತ್.
ನಿದ್ರೆ ಮಂಕ್ಲಿ ಇರ್ಕಾಕಕನೇ ಏನೋ ಬೊಬ್ಬೆ ಕೇಳ್ದಂಗೆ ಆತ್. ಕಣ್ಣ್ ಬಿಟ್ಟ್ ನೋಡಿರೆ ರೈಲ್ ಮದ್ದೂರು ಸ್ಟೇಷನ್ಲಿ ನಿಂತಿತ್ತ್. ಆ ಲಿಫ್ಟಿಕ್ ಆಂಟಿ ಮತ್ತೆ ಪೆಕ್ರ ಅಂಕಲ್ ಯಾರ ಜೊತೆನೋ ಜಗಳ ಮಾಡ್ತಿದ್ದೊ... ಅದ್ ಟಿಸಿ. ವಿಷಯ ಏನ್ ತೇಳಿರೆ, ಆ ಜೋಡಿ ರಿಸರ್ವ್ ಮಾಡ್ಸುದಿರ್ಲಿ, ಮೈಸೂರಿಗೆ ಹೋಕೆ ಟಿಕೆಟ್ ಕೂಡ ತಕ್ಕಂಡಿತ್ಲೇ... ಅವು  `27,28' `27,28' ತಾ ಹೇಳಿಕಂಡ್ ಬಾಕಾಕನ ನಾವು ಬಾಯಿ ಮುಚ್ಚಿಕಂಡ್ ಸೀಟ್ ಬಿಟ್ಟ್ ಕೊಟ್ಟಿದ್ದೊ. ನಾವು `ಟಿಕೆಟ್ ತೋರ್ಸಿ, ಸೀಟು ಕೊಟ್ಟವೆ' ತಾ ಹೇಳಿದ್ದ್ರೆ, ನಮ್ಮ ಕಿಟಕಿ ಸೈಡ್ನ ಸೀಟ್ ನಮ್ಗೆನೇ ಸಿಗ್ತಿತ್... ಇದ್ನೆಲ್ಲಾ ಯೋಚ್ನೆ ಮಾಡ್ಕಾಕನ ಆ ಜೋಡಿ ನಮ್ಮನ ಕುರಿಗಳಂಗೆ ನೋಡಿ ನಗಾಡ್ದ್, ಬೇಡ ಬೇಡತಾ ಹೇಳಿರೂ ಮೈಸೂರು ತಲುಪೋ ತನಕ ನೆನಪಾಗ್ತಿತ್ತ್.
- `ಸುಮಾ'
ನೀವೂ ಬರೆಯನಿ..
arebhase@gmail.com

No comments:

Post a Comment