Saturday 24 December 2011

ಹಳೇ ನೆನಪಿಗೆ ಜಾರಿಬಿದ್ದಾಗ...


ಕೊಡಗು ಅಂದ್ರೆ, ರುಚಿರುಚಿಯಾದ ಜೇನ್ ನೆನಪಿಗೆ ಬಂದ್ ಬಾಯಲ್ಲಿ ಹಂಗೆನೇ ನೀರು ಸುರ್ದದೆ. ಅದ್ರಲ್ಲೂ ಈ ಡಿಸೆಂಬರ್ ತಿಂಗಳ ಜೇನು ಉಟ್ಟಲ್ಲಾ ತುಂಬಾ ಟೇಸ್ಟ್. ಭತ್ತದ ಹೂನ ಮಕರಂದಲಿ ಈ ಜೇನು ತಯಾರಾದೆ. ಬಾಟಲೀಲಿ ಇಟ್ಟ ಜೇನ್ನ ತೆಗ್ದ್ ತಿಂದರೆ ಅದ್ರ ನಿಜವಾದ ರುಚಿ ಗೊತ್ತಾದುಲ್ಲೆ. ಪೆಟ್ಟಿಗೇಂದ ಎರಿಗಳ್ನ ತೆಗ್ದ್ ಅದ್ನ ಜೇನು ಮೆಷಿನ್ಗೆ ಹಾಕಿಕ್ಕೆ ಮೊದ್ಲು, ಆ ಎರಿಯ ಮೇಲು ಭಾಗ ಸಿಪ್ಪೆನ ಸಪೂರಕ್ಕೆ ತೆಗ್ದವೆ. ಆ ತೆಗ್ದ ಭಾಗ ಉಟ್ಟಲ್ಲಾ, ಅಲ್ಲಿ ಸ್ವಲ್ಪ ಸ್ವಲ್ಪ ಜೇನ್ ಇದ್ದದೆ. ಇದನ್ನ ಆ ಮೇಣದ ಜೊತೆಲೇ ತಿನ್ನೋಕು... ಆಹಾ ! ಆ ರುಚಿ ನೀವು ಯಾವತ್ತಿಗೂ ಮರೆಯಕ್ಕಿಲ್ಲೆ...  
ಮೊದ್ಲೆಲ್ಲಾ ಬೇಸಿಗೆ ರಜೆ ಸಿಕ್ಕಿತ್ತೇಳಿರೇ ಸಾಕ್, 2 ತಿಂಗ ಪೂತರ್ಿ ತಾತನ ಮನೇಲೇ ಬಿಡಾರ ! ನಮ್ಮಂಗೆ ಅಲ್ಲಿಗೆ ನಮ್ಮ ಆಂಟಿ ಮಕ್ಕ, ಮಾವನ ಮಕ್ಕತೇಳಿಕಂಡ್ ಸುಮಾರ್ ಎಂಟ್ಹತ್ತು ಮಕ್ಕ ಬರ್ತಿದ್ದೋ. ಶಾಲೇಗೆ ಹೋದ್ರೆ ಅಲ್ಲಿ ಪಾಠ ಮಾತ್ರ ಕಲಿಯಕ್. ಆದ್ರೆ ಇಂತ ಮಕ್ಕ, ಮಕ್ಕ ಸೇರ್ವ ಜಾಗಲಿ ಪಾಠಕ್ಕಿಂತ ಬೇರೆಯದ್ದೇ ಆಗಿರ್ವ ವಿಷಯಗ ಗೊತ್ತಾದೆ ! ಎರಡು ಬೆರಳು ನಾಲಿಗೆ ಕೆಳಗೆ ಇಟ್ಟ್, ವಿಷಲ್ ಹೊಡೆಯಕೆ ನಾ ಕಲ್ತದ್ದ್ ಹಿಂಗೆನೇ ! ಹೊಳೇಗೆ ಹೋಗಿ ದನಗಳ್ನ ಸ್ನಾನ ಮಾಡಿಸಿಕಾಕನ ಈಜುದು ಕೂಡ ಕಲ್ತ್ಬಿಟ್ಟಿದ್ದೊ ! ಹೆಂಗೆ ತಿಂದರೆ ಜೇನು ತುಂಬಾ ಟೇಸ್ಟ್ತೇಳ್ದು ಗೊತ್ತಾದೂ ಈ ಮಕ್ಕಳಾಟಂದನೇ !
ನನ್ನ ದೊಡ್ಡಮಾವ ದೊಡ್ಡ ಕೃಷಿಕ. ಎಲ್ಲವೂ ಕಾಫಿ ಬೆಳ್ದ್ ದುಡ್ಡ್ ಮಾಡ್ತಿದ್ರೆ, ಅದೆಲ್ಲಿಂದನೋ ಟೀ ಗಿಡ ತಂದ್ ಬೆಟ್ಟದ ಮೇಲೆ ನೆಟ್ಟ್ ದುಡ್ಡು ಕಳ್ಕಂಡವ್ ಇವು. ಇಂಥವ್ಕೆ ಜೇನು ನೊಣಗ ತುಂಬಾ ಲಾಯ್ಕ ಹೊಂದಿಕೊಂಡಿದ್ದೊ. ತೋಟಲಿ ತುಂಬಾ ಕಡೆ ಇಟ್ಟಿದ್ದ ಪೆಟ್ಟಿಗೆಗಳಲ್ಲಿ ಒಳ್ಳೇ ಜೇನ್ ಸಿಕ್ತಿತ್. (ಈಗ ಅವೂ ದುಡ್ಡುಕೊಟ್ಟೇ ಭಾಗಮಂಡಲಂದ ಜೇನು ತಾದು) ಒಂದೇ ಒಂದು ನೊಣದಿಂದ ಕಚ್ಚಿಸಿಕೊಳ್ಳದೇ ಪೆಟ್ಟಿಗೇಂದ ಜೇನು ತೆಗೀತ್ತಿದ್ದೊ. ನಮ್ಗೆಲ್ಲಾ ಜೇನು ಪೆಟ್ಟಿಗೆ ಹತ್ರ ಹೋಕೆನೇ ಹೆದ್ರಿಕೆ. ಅಂಥದ್ರಲ್ಲಿ ಮಾವ ಸುಲಭಲಿ ಜೇನು ತೆಗೀತ್ತಿದ್ದಿದ್ದನ್ನ, ಹುಲ್ಲುಮುಂಡ ಸೆರೇಲಿ ನಿಂತ್ಕಂಡ್ ನಾವೆಲ್ಲಾ ಕುತೂಹಲಂದ ನೋಡ್ತಿದ್ದೊ. 
ಪೆಟ್ಟಿಗೆಂದ ಜೇನ್ ತೆಗೆಯುದೇಳಿರೆ, ಎರಿಗಳ್ನ ತೆಗೆಯುದು. ಆ ಎರಿಗಳ್ನ ತಂದ್, ಅದ್ರ ಮೇಲಿರ್ವ ಮೇಣದ ಸಿಪ್ಪೆನ ತೆಳ್ಳಂಗೆ ಕೀಸಿ (ಇದೇ ಮೇಣದ ಸಿಪ್ಪೆನ ಅಗ್ದ್ ತಿಂದರೆ ತುಂಬಾ ರುಚಿತಾ ನಾ ಹೇಳ್ದ್) ಮೆಷಿನ್ಗೆ ಹಾಕಿ ತಿರುಗಿಸಿರೆ, ಮೆಷಿನ್ ಬುಡಲಿರ್ವ ಟ್ಯಾಪ್ಲಿ ಚಿನ್ನದ ಬಣ್ಣಲಿ ಗಟ್ಟಿ ಜೇನ್ ಬಂದದೆ. ಹಿಂಗೆ ಮೆಷಿನ್ ತಿರುಗಿಸಿಕೂ ನಮ್ಮ ಮಧ್ಯೆ ಪೈಪೋಟಿ ನಡೀತ್ತಿತ್ತ್. ಇಲ್ಲಿ ಸಿಕ್ವ ಜೇನ್ನ ಸೋಸಿ ಗಾಜ್ನ ಬಾಟ್ಲಿಲಿ ಇಟ್ಟ್ರೆ, ನೂರು ವರ್ಷ ಕಳೆದ್ರೂ ಹಂಗೆನೇ ಇದ್ದದೆ. 
ಇಂಥದ್ದನೆಲ್ಲಾ ಯೋಚನೆ ಮಾಡಿಕಾಕನ ಆ ಕಾಲನೇ ಎಷ್ಟು ಲಾಯ್ಕತಾ ಅನ್ಸಿದೆ. ಈ ಒಂದು ವಿಷಯಲ್ಲಂತೂ ನಾವು ಪುಣ್ಯ ಮಾಡಿದ್ದೊ. ಈಗಿನ ಎಷ್ಟು ಮಕ್ಕಳಿಗೆ ಇಂಥ ಅವಕಾಶ ಸಿಕ್ಕಿದೆ ? ರಜೆ ಸಿಕಿರೆ ಸಾಕ್ ಟ್ಯೂಷನ್ ಹಾವಳಿ. ಹಂಗಾಗಿ ಪುಸ್ತಕದ ಬದನೆಕಾಯಿ ಬಿಟ್ಟರೆ ಬೇರೆ ಎಂತ ಕೂಡ ತಿಳ್ಕಂಬಕೆ ಆದುಲ್ಲೆ...

- `ಸುಮಾ' 
arebhase@gmail.com

No comments:

Post a Comment