ಭಾಗಮಂಡಲ ಕಡೆ ಸ್ಕೂಲ್ಗಳಲ್ಲಿ ಕೂಡ ಅರೆಭಾಷೆ ಒಂಥರ `ರಾಷ್ಟ್ರೀಯ ಭಾಷೆ' ಇದ್ದಂಗೆ. ಮಕ್ಕ ಮಕ್ಕ ಮಾತಾಡಿಕನ ಅರೆಭಾಷೆನೇ ಮಾತಾಡ್ದು. ಅಯ್ಯಂಗೇರೀಂದ ಬರ್ವ ಅಬ್ದುಲನೇ ಇರ್ಲಿ, ಚೆಟ್ಟಿಮಾನಿಂದ ಬರ್ವ ಕೊಡವ ಹೈದನೇ ಆಗಿರ್ಲಿ, ಎಲ್ಲವೂ ಅರೆಭಾಷೆಲೇ ಮಾತಾಡ್ದು. ಈ ವಿಷಯ ಕ್ಲಾಸ್ಗಳಲ್ಲಿ ಒಂದೊಂದ್ಸಲ ತುಂಬಾ ತಮಾಷೆ ನಡೆಯಕ್ಕೆ ಕಾರಣ ಆಗ್ತಿತ್ತ್.
ಭಾಗಮಂಡಲ ಹೈಸ್ಕೂಲ್ಲಿ ಶ್ರೀಕೃಷ್ಣ ಭಟ್ತೇಳಿ ಒಬ್ಬ ಮಾಷ್ಟ್ರು ಒಳೊ. ಅವು ಗಣಿತ ಪಾಠ ಮಾಡಿವೆ. ನಾವು ಅಲ್ಲಿ ಶಾಲೆಗೆ ಹೋಕಾಕನ ಈ ಮಾಷ್ಟ್ರು ತುಂಬಾ ಹೊಡಿತ್ತಿದ್ದೊ. (ಈಗ ಹಂಗೆ ಹೊಡ್ದವೆನಾತ ಗೊತ್ಲೆ) ಹೇಳಿಕೇಳಿ ನಮ್ಮಂತವ್ಕೆ ಲೆಕ್ಕತೇಳಿರೇ ಯಾವಾಗ್ಲೂ ಗಟ್ಟಿ ಕಡಂಬುಟ್ಟು ಇದ್ದಂಗೆ. ಹಂಗಾಗಿ ಪೆಟ್ಟು ಸ್ವಲ್ಪ ಜಾಸ್ತಿನೇ ಬೀಳ್ತಿತ್. ಕೆನ್ನೆಗೆ ಛಟೀರ್ತಾ ಹೊಡೆಯುದು ಅವ್ರ ಸ್ಟೈಲ್. ಮಕ್ಕ ಎಲ್ಲಾ ಅವ್ರನ್ನ ಕರೀತ್ತಿದ್ದದ್ `ಭಟ್ಟ ಮಾಷ್ಟ್ರು' ತೇಳಿಯೇ... 8ನೇ ಕ್ಲಾಸ್ `ಬಿ' ಸೆಕ್ಸನ್ಗೆ `ಭಟ್ಟ ಮಾಷ್ಟ್ರು' ಕ್ಲಾಸ್ ಟೀಚರ್. ಗಣಿತದ ಜೊತೆ ಭೌತಶಾಸ್ತ್ರನೂ ಆವೇ ಪಾಠ ಮಾಡ್ತಿದ್ದೊ. ಅಂದ್ರೆ ದಿನಲಿ ಎರಡೆರಡು ಪೀರಿಯಡ್ ! ಒಂದೊಂದು ಸಲ ಎರಡೂ ಪೀರಿಯಡ್ಗಳ್ಲಿ ಎಲ್ಲವ್ಕೂ `ಲಾಠಿ ಚಾಜರ್್' ಆಗಿಬಿಡ್ತಿತ್ತ್. ಅವು ಒಂದ್ ದಿನ ಬಾತ್ಲೆತೇಳಿರೇ ನಮ್ಗೆಲ್ಲಾ ಖುಷಿಯೋ ಖುಷಿ `ಇಂದ್ ಭಟ್ಟ ಬಾಲೆ ಗಡ' ತೇಳಿಕಂಡ್ ಮಕ್ಕ ತಿರ್ಗಾಡ್ತಿದ್ದೊ. ಮಾಷ್ಟ್ರು ಬಾದುಲ್ಲೆತೇಳುವ ಖುಷೀಲಿ `ಭಟ್ಟ ಮಾಷ್ಟ್ರು' ಹೋಗಿ ನಮ್ಮ ಬಾಯೀಲಿ ಬರೀ `ಭಟ್ಟ' ಉಳ್ಕಂಡ್ಬಿಡ್ತಿತ್ತ್ !
`ಭಟ್ಟ ಮಾಷ್ಟ್ರು' ಮಂಗಳೂರು ಕಡೆಯವು. ಅರೆಭಾಷೆ ಸ್ವಲ್ಪ ಸ್ವಲ್ಪ ಅರ್ಥ ಮಾಡ್ಕೊಳ್ತಿದ್ದೊ. ಒಂದೊಂದ್ಸಲ ಮೂಡ್ ಬಂದಾಗ ಅರೆಭಾಷೆಲೇ ಮಾತಾಡಿ ಜೋಕ್ ಮಾಡ್ತಿದ್ದೊ. `ಭಟ್ಟ ಮಾಷ್ಟ್ರು' ಹೋಗಿ ನಮ್ಮ ಬಾಯೀಲಿ `ಭಟ್ಟ' ಮಾತ್ರ ಉಳ್ಕಂಡಿದ್ದದ್ ಅವ್ಕೂ ಹೆಂಗೋ ಗೊತ್ತಾಗಿತ್ತ್. ಕ್ಲಾಸ್ಗೆ ಬಾಕಾಕನ ಒಂದೊಂದ್ಸಲ ಅವೇ `ಭಟ್ಟ ಬಾತ್ ಭಟ್ಟ' ತೇಳಿಕಂಡೇ ಬರ್ತಿದ್ದೊ. ನಂ ಕ್ಲಾಸ್ಗೆ ತಣ್ಣಿಮಾನಿಂದ ಒಬ್ಬ ಹೈದ ಬರ್ತಿತ್. ಮಲ್ಲೇಶತೇಳಿ ಅವ್ನ ಹೆಸ್ರ್. ಅವಂದ್ ಅಪ್ಪಟ ಅರೆಭಾಷೆ. ಒಂದು ವಾರ ಮಲ್ಲೇಶ ಸ್ಕೂಲ್ಗೆ ಚಕ್ಕರ್ ಹೊಡ್ದಿತ್ತ್. ಅಂವ ವಾಪಸ್ ಸ್ಕೂಲ್ಗೆ ಬಂದ ದಿನ, ಕ್ಲಾಸ್ ಟೀಚರ್ ಆಗಿದ್ದ `ಭಟ್ಟ ಮಾಷ್ಟ್ರು', `ಯಾಕೋ ಒಂದು ವಾರ ಬಂದಿಲ್ಲ?' ತಾ ಕೇಳ್ದೊ... ಅದ್ಕೆ ಮಲ್ಲೇಶ `ದೊಂಡೆ ಬೇನೆ ಸಾ...' ತಾ ಉತ್ತರ ಕೊಟ್ಟತ್. ಎಲ್ಲವ್ಕೆ ಜೋರು ನಗೆ. ಇಂವ ಎಂಥ ಹೇಳ್ತುಟ್ಟುತಾ ನಮ್ಮ `ಭಟ್ಟ ಮಾಷ್ಟ್ರಿ'ಗೆ ಗೊತ್ತಾತ್ಲೆ. `ದೊಂಡೆ ಬೇನೆನಾ..? ಏನೋ ಹಾಗೆ ಹೇಳಿದ್ರೆ ?' ತಾ ಮತ್ತೆ ಕೇಳ್ದೊ. ಆಗ ಮಲ್ಲೇಶ ಅವ್ನ ಗಂಟಲ್ ಹಿಡ್ಕಂಡ್ `ಸಾ... ನಂಗೆ ಇಲ್ಲೇ ಬೇನೆ ಆಗ್ತಿತ್ತು... ಅದ್ಕೆ ದೊಂಡೆ ಬೇನೆತಾ ಹೇಳ್ದೆ' ತಾ ಹೇಳ್ತ್. ಅಂದ್ `ಭಟ್ಟ ಮಾಷ್ಟ್ರು' ಮಕ್ಕಳ ಜೊತೆ ಸೇರ್ಕಂಡ್ ಜೋರಾಗಿ ನಗಾಡಿಬಿಟ್ಟಿದ್ದೊ.
ಸ್ಕೂಲ್ಲಿ ಮಾತಾಡಿಕಾಕನ ಹಿಂಗೆ ಅರೆಭಾಷೆ ಮಿಶ್ರ ಆಗಿ ತುಂಬಾ ಸಲ ತಮಾಷೆಯ ಪ್ರಸಂಗಗ ಸೃಷ್ಟಿಯಾಗಿದ್ದೊ.
arebhase@gmail.com
No comments:
Post a Comment