Thursday, 29 December 2011

ಕೆನ್ನೆ ಮುಟ್ಟಿಕೊಳ್ಳುವಂಗೆ ಮಾಡ್ದ ಲೇಖನ !


ವಿಶ್ವೇಶ್ವರ ಭಟ್ ಸ್ವಲ್ಪದಿನ ಹಿಂದೆ ಕನ್ನಡಪ್ರಭಲಿ `ಲೂಸ್ಟಾಕ್' ಬಗ್ಗೆ ಬರ್ದಿದ್ದೊ... ಅದ್ನ ಓದ್ತಿದ್ದಂಗೆ ನನ್ನ ಕೈ ಒಂದ್ಸಲ ಎಡಗೆನ್ನೆ ಮೇಲೆ ಹೋತ್... ಕೆಂಡದಂಗೆ ಕೆಂಪಾಗಿದ್ದ ಎರಡ್ ಕಣ್ಣ್ಗ ನೆನಪಿಗೆ ಬಂದೊ. ಅದ್ ನಾನ್ ಎಸ್ಎಸ್ಎಲ್ಸಿ ಓದ್ತಿದ್ದಾಗ ನಡ್ದ ಘಟನೆ. ಆದ್ರೂ ನಿನ್ನೆ ಮೊನ್ನೆ ನಡ್ದಂಗೆ ಮನಸ್ಲಿ ಹಸಿರಾಗಿ ಉಟ್ಟು.
ಭಾಗಮಂಡಲ ಟೌನ್ಂದ ಕಾವೇರಿ ಹೈಸ್ಕೂಲ್ಗೆ ಮೂರು ಕಿಲೋ ಮೀಟರ್ ದೂರ. ಸಾಮಾನ್ಯವಾಗಿ ಎಲ್ಲಾ ಮಕ್ಕ ನಡ್ಕಂಡೇ ಸ್ಕೂಲ್ಗೆ ಹೋಗ್ತಿದ್ದೊ. ಹಿಂಗೆ ನಡ್ಕಂಡ್ ಹೋಕಾಕನ ಪ್ರಪಂಚದ ಮಾತೆಲ್ಲಾ ಅಲ್ಲಿ ಬಂದ್ಬಿಡ್ತಿತ್ತ್. ಅಂದ್ ಹಂಗೆನೇ, ನನ್ನ ಜೊತೆ ಕೋಡಿ ಮಂಜು ಮತ್ತೊಬ್ಬ `ಪುಣ್ಯಾತ್ಮ' ಇತ್ತ್. ಮಂಜು ನನ್ನ ಕ್ಲಾಸ್ಮೆಟ್ ಇನ್ನೊಬ್ಬ `ಪುಣ್ಯಾತ್ಮ' ಇತ್ತಲ್ಲ, ಅಂವ ಪಿಯುಸಿ. ನಡ್ಕಂಡ್ ಹೋಕಾಕನ, ಲೋಕರೂಢಿ ಮಾತ್ಗ ಮುಗ್ದಮೇಲೆ, ನಮ್ಮ ಒಬ್ಬ ಲೆಕ್ಚರರ್ ವಿಷಯ ಬಾತ್. ಆ ಲೆಕ್ಚರರ್ ಬಗ್ಗೆ ಯಾವನೋ ಕೆಟ್ಟದಾಗಿ ಮಾತಾಡಿತ್ತ್. ಆ ಲೆಕ್ಚರರ್ ಒಬ್ಬ ನಡತೆಕೆಟ್ಟ ಹೆಂಗಸಿನ ಜೊತೆ ಸಂಬಂಧ ಇಟ್ಕೊಂಡುಟ್ಟು ತೇಳ್ದು, ಅಂವ ಹಬ್ಬಿಸಿದ್ದ ಸುದ್ದಿಯ ತಾತ್ಪರ್ಯ. ನಾನ್ ಇದ್ನ ಮಂಜು ಜೊತೆ ಹೇಳ್ದೆ. `ಏ ನೋಡ್ರ... ಸರ್ ಬಗ್ಗೆ ಅಂವ ಹಿಂಗಿಂಗೆ ಹೇಳ್ತುಟ್ಟು...ಪಾಪ, ಒಳ್ಳೇ ಸರ್ ಅವು. ಅವ್ರ ಬಗ್ಗೆ ಅಂಥದ್ದೆಲ್ಲಾ ಹೇಳ್ದು ಸರಿ ಅಲ್ಲ' ತಾ ನಾ ಹೇಳ್ದೆ.
ನಮ್ಮ ಜೊತೆ ಆ ಪಿಯುಸಿ ಪುಣ್ಯಾತ್ಮ ಇತ್ತಲ್ಲಾ, ಅವಂಗೆ ಆ ಲೆಕ್ಚರ್ನ ಒಳ್ಳೆದ್ ಮಾಡಿಕಣೋಕೂತ ಇತ್ತೋ ಏನೋ... ಸ್ಕೂಲ್ಗೆ ಹೋದಮೇಲೆ ನನ್ನ ಮೇಲೆ ಸರಿಯಾಗೇ ಫಿಟ್ಟಿಂಗ್ ಇಟ್ಟ್ಬಿಟ್ಟತ್ತ್. ಲೆಕ್ಚರರ್ ಮೇಲೆ ನಾನೇ ಏನೇನೋ ಹೇಳ್ಕಂಡ್ ಹೋಗ್ತೊಳೆತಾ ಒಂದಿಷ್ಟ್ ಉಪ್ಪು, ಖಾರ, ಹುಳಿ ಎಲ್ಲಾ ಸೇರ್ಸಿ ಚಾಡಿ ಹೇಳ್ತ್. ಆ ಲೆಕ್ಚರರ್ ನಮ್ಮ ಪುಣ್ಯಾತ್ಮ ಹೇಳ್ದೆಲ್ಲಾ ನಿಜತಾ ತಿಳ್ಕೊಂಡೋ. ಆದ್ರೆ ನಾನ್ ಮಂಜು ಜೊತೆ ಮಾತಾಡಿದ್ನ ಅಲ್ಲೇ ಮರ್ತ್ಬಿಟ್ಟಿದ್ದೆ.
ಜನಾರ್ದನ ಮಾಷ್ಟ್ರ್ ಗಣಿತ ಪಾಠ ಮಾಡ್ತಿದ್ದೊ. ಪಿವನ್ ಸೋಮಣ್ಣ ಬಂದ್ ನನ್ನ ಕರ್ತ್... `ಪ್ರಿನ್ಸಿಪಾಲ್ ಕರೀತೊಳೊ, ನೀನ್ ಬರೋಕುಗಡ...'ತಾ ಹೇಳ್ತ್. ಆದ್ರೆ ಅಲ್ಲಿ ಹೋದ್ರೆ ಪ್ರಿನ್ಸಿಪಾಲ್ ಇತ್ಲೆ. ಆ ಲೆಕ್ಚರರ್ ಕುದ್ದಿದ್ದೊ. `ಬಾ ಇಲ್ಲಿ...' ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಕಿರ್ಚಿದೊ... ನಂಗೆ ಗೊತ್ತಿಲ್ಲದಂಗೆ, ನಾ ಹೋಗಿ ಅವ್ರ ಮುಂದೆ ನಿಂತ್ಕಂಡಿದ್ದೆ. `ಟಪ್' ಜೋರಾಗಿ ಶಬ್ದ ಬಂದದಷ್ಟೇ ಗೊತ್ತ್.. ಅವ್ರ ಬಲಗೈ ನನ್ನ ಎಡಗೆನ್ನೆ ಮೇಲೆ 5 ಬೆರಳುಗಳ ಗುರ್ತು ಮಾಡಿತ್ತ್. ಅದೇ ನೋವ್ಲಿ ಅವ್ರ ಮುಖ ನೋಡ್ದೆ, ಎರಡೂ ಕಣ್ಣುಗ ಕೆಂಡದಂಗೆ ಕೆಂಪಾಗಿದ್ದೊ. 
ಅಂದೇ ಕೊನೆ... ನಾನ್ ಯಾರ ಬಗ್ಗೆನೂ ಏನೂ ಹೇಳಿಕಾದುತಾ ನಿಧರ್ಾರ ತಕ್ಕಂಡೆ... ಈಗ್ಲೂ ಹಂಗೆನೇ ನಡ್ಕಳ್ತೊಳೆ. ಆದ್ರೂ ಒಮ್ಮೊಮ್ಮೆ ಅಪವಾದಗ ಬಂದದೆ... ಬಹುಶ: ಚೌತಿ ದಿನ ಅಪ್ಪಿತಪ್ಪಿ ಚಂದ್ರನ ನೋಡಿಬಿಟ್ಟೊಳೆತೇಳ್ಕಂಡ್ ನಂಗೆ ನಾನೇ ಸಮಧಾನ ಮಾಡಿಕಂಡನೆ...
arebhase@gmail.com

No comments:

Post a Comment