ಈ ವರ್ಷ ಹುತ್ರಿಲಿ ಪಟಾಕಿ ಶಬ್ಧ ತುಂಬಾ ಕಡ್ಮೆ...ವರ್ಷ ವರ್ಷ ಕೇಳ್ತಿದ್ದಷ್ಟ್ ಪಟಾಕಿಗಳ ಶಬ್ಧ ಈ ವರ್ಷ ಕೇಳ್ತ್ಲೆ. ಇದ್ ಬರೀ ಹುತ್ರಿ ಕಥೆ ಮಾತ್ರ ಅಲ್ಲ. ದೀಪಾವಳಿಲಿ ಕೂಡ ಹಿಂಗೆನೆ ಆಗಿತ್ತ್. ಏಕೆ ಹಿಂಗೆ ? ಮೊದಲ್ಲೆಲ್ಲಾ ಪಟಾಕಿ ಹೊಡ್ಸಿಕೆ ಇದ್ದ ಆಸಕ್ತಿ ಈಗ ಯಾರಿಗೂ ಇಲ್ಲೆನಾ ? ಪಟಾಕಿಗೆ ಬೆಂಕಿ ಇಡಿಕೆ ಎಲ್ಲವ್ಕೂ ಒಂಥರ ಖುಷಿ ಇದ್ದದೆ. ಗರ್ನಲ್ ಪಟಾಕಿ ನೆಲಲಿಟ್ಟ್, ಅದ್ರ ಬತ್ತಿದ್ ಸಿಪ್ಪೆನ ಸ್ವಲ್ಪ ಜಾರ್ಸಿ, ಊದುಕಡ್ಡಿನೋ ಇನ್ನೆಂಥದ್ದೋ ತಕ್ಕಂಡ್ ಕೈ ಉದ್ದ ಮಾಡಿ ಬೆಂಕಿಇಡ್ದು, ಬತ್ತಿ ಸುರುಸುರುಥೇಲಿಕ್ಕನ ಒಂದೇ ಉಸುರಿಗೆ ಓಡಿ ಹೋಗಿ ಕಿವಿಮುಚ್ಚಿಕಂಡ್ ಪಟಾಕಿ ಹೊಡೆಯುದ್ದನ್ನೇ ಬಿಟ್ಟ ಕಣ್ಣ್ ಬಿಟ್ಟ ಹಂಗೆ ನೋಡ್ದು... ಇದೊಳ್ಳೇ ಮಜಾ ಕೊಟ್ಟದೆ. ಇಂಥ ಒಂದು ಖುಷಿನ ಕಳ್ಕಣಿಕೆ ಯಾರಾರ್ ಇಷ್ಟಪಟ್ಟವೆನಾ ? ಆದ್ರೂ ಈಸಲ ಪಟಾಕಿ ಹೊಟ್ಟಿದ್ ಮಾತ್ರ ಕಡಿಮೆನೇ...
ಹುತ್ರಿ ಟೈಂಗೆ ಕುಶಾಲನಗರದಂಥ ಒಂದೇ ಊರ್ಲಿ ಲಕ್ಷಗಟ್ಟಲೆ ರೂಪಾಯಿನ ಪಟಾಕಿ ಮಾರಾಟ ಆಗ್ತಿತ್ತ್. ಆದ್ರೆ ಈ ವರ್ಷದ ಪರಿಸ್ಥಿತಿ ಮಾತ್ರ ಉಲ್ಟಾ. ಇಲ್ಲಿನ ವ್ಯಾಪಾರಿಗಳಿಗೆ ಹಾಕಿದ ಬಂಡವಾಳನೇ ಬಾತ್ಲೆ. ಅಂಗಡೀಲಿ ಪಟಾಕಿ ಹಂಗಗಂಗೆನೇ ಉಳ್ಕಂಡುಟ್ಟು. `ಏನು ಮಾಡೋದು ಸರ್, ಈ ವರ್ಷ ಪಟಾಕಿ ವ್ಯಾಪಾರ ಫುಲ್ ಡಲ್' ಇದ್ ಕುಶಾಲನಗರದ ವ್ಯಾಪಾರಿಗಳ ಮಾತ್. ಈ ವರ್ಷ ಯಾಕೆ ಹಿಂಗಾತ್? ಮೊದಲ್ನೇ ಕಾರಣ ಟಿವಿಗ. ಹೌದು, ಈ ವರ್ಷ ದೀಪಾವಳಿ ಟೈಂಲಿ ಟಿವಿಗಳ್ಲಿ ಪೂರ ಪಟಾಕಿ ಸಿಡ್ಸಿದ್ರೆ ಹಂಗಾದೆ, ಹಿಂಗಾದೆತಾ ದೊಡ್ಡ ದೊಡ್ಡ ಸ್ಟೋರಿಗಳ್ನ ದಿನಗಟ್ಟಲೇ ತೋರ್ಸಿದ್ದೋ... ಅಲ್ಲಿ ಹೇಳಿದ್ದೆಲ್ಲಾ ನಮ್ಗೆ ಗೊತ್ತಿರೋ ವಿಷ್ಯನೇ. ಆದ್ರೆ ಟೀವೀಲಿ ನೋಡಿಕಾಕನ ಮತ್ತೊಮ್ಮೆ ಯೋಚಿಸೋ ಹಂಗೆ ಆತ್ ಅಷ್ಟೆ.
ನಿಜ, ಪಟಾಕಿ ಹೊಡೆಯುದ್ರಿಂದ ವಾಯು ಮಾಲಿನ್ಯ, ಶಬ್ಧ ಮಾಲಿನ್ಯ, ಬೆಳಕಿನ ಮಾಲಿನ್ಯ ಹಿಂಗೆ ಪರಿಸರದ ಮೇಲೆ ಎಲ್ಲಾ ಥರದ ಮಾಲಿನ್ಯಗ ಆದೆ. ಜೊತೆಗೆ ಸ್ವಲ್ಪ ಎಚ್ಚರ ತಪ್ಪಿರೆ ಕಣ್ಣಿನ ದೃಷ್ಟಿನೂ ಹೋಗಿಬಿಟ್ಟದೆ. ಇದಕ್ಕೆಲ್ಲಾ ಟೀವೀಲಿ ಬಣ್ಣ ಕಟ್ಟಿ ಹೇಳಿಕಾಕನ ಜನಕೂ `ಹೌದೌದು ಇದೂ ನಿಜ' ತಾ ಅನ್ಸಿಟ್ಟು. ಹಂಗಾಗಿ ಜನ ಕೂಡ ಈಸಲ ಪಟಾಕಿಗೆ ದುಡ್ಡು ಹಾಕುದನ ಕಡ್ಮೆ ಮಾಡಿಬಿಟ್ಟೊ. ಅದೇ ದುಡ್ಡ್ನ ತಕ್ಕಂಡ್ಹೋಗಿ ಬೇಕರಿಗೆ ಸುರ್ದೊ... ಈಸಲ ದೀಪಾವಳಿ ಮತ್ತೆ ಹುತ್ತರಿ ಟೈಮ್ಲಿ ಬೇಕರಿಗಳಿಗೆ ಬಂಪರ್ ವ್ಯಾಪಾರ !
ಈಗ ಕಾಲ ಬದಲಾಗ್ಯುಟ್ಟು. ಜನ ಏನೇ ಕೆಲ್ಸ ಮಾಡಿಕೆ ಮುಂಚೆ ಒಂದೆರಡು ಸಲ ಯೋಚನೆ ಮಾಡಿವೆ. ದುಡ್ಡು ಖರ್ಚ್ ಮಾಡಿಕೆ ಕೂಡ ಹಿಂದೆ ಮುಂದೆ ನೋಡಿವೆ. ಇದೆಲ್ಲದರ ಫಲ ಪಟಾಕಿ ವ್ಯಾಪರದ ಮೇಲೆ ಆಗ್ಯಟ್ಟು... ಇದೊಂಥರ ಒಳ್ಳೆ ಬೆಳವಣಿಗೆತಾ ಹೇಳಕ್... ನೀವೇನ್ ಹೇಳ್ಯರಿ?
- `ಸುಮ'
ನೀವೂ ಬರೆಯನಿ..
True...
ReplyDelete