Thursday 22 December 2011

ಜೇನು ಬೇಟೆ !


ನಂದಿ ಮರದ ಮೇಲೆ
ದೊಡ್ಡಜೇನ್ ಗೂಡು
ಮೊರದಗಲ ಗಾತ್ರ, ಕಂದು ಬಣ್ಣ
ಅದ್ರ ಮೇಲೆ ಬಿತ್ತ್ ಚೋಮುಣಿ ಕಣ್ಣ್ !
ಆಕಾಶದಷ್ಟ್ ಎತ್ತರದ ಮರ
ಕೊಡೆ ಬಿಡಿಸಿದಂಗೆ ನಿತ್ತುಟ್ಟು
ಅಡೀಲಿ ಒಂದೂ ಕೊಂಬೆಗ ಇಲ್ಲೆ
ಮೇಲೆ ಇರ್ವ ಜೇನು ಕರೀತ್ತುಟ್ಟು !
10 ಕೆಜಿ ಇರುದಾ ಜೇನು ?
ಮರಿಗಾ ಕುಡ್ದು ಬಿಟ್ಟೊಳನಾ ?
ಚಳಿ ಬೇರೆ, ಬೆರ್ಸಿ ಕಚ್ಚಿಬಿಡುದಾ?
ಮನಸೊಳಗೇ ಲೆಕ್ಕ ಹಾಕಿತ್ ಚೋಮುಣಿ
ಆದದ್ದಾಗಲಿ ಇಂದ್ ರಾತ್ರಿನೇ ಜೇನ್ಬೇಟೆ
ಮೂಲೆಮನೆ ಮೊಣ್ಣಪ್ಪನೂ ಸೇರ್ಕಂಡತ್
ಮುಖ ಮುಚ್ಚಿಕೆ ಬಲೆ ಬಲೆ ಬ್ಯಾಗ್
ಬೆಂಕಿ ಇಡಿಕೆ ಹುಲ್ಲು ರೆಡಿಯಾತ್
ರಾತ್ರಿಯಾತ್,  ನಂದಿ ಮರದ ಬುಡಲಿ
ಸದ್ದಿಲ್ಲದೆ ಸೇರಿದ್ದೋ ಇಬ್ಬರೂ
ಹುಲ್ಲು ಸೇರ್ಸಿ ಬೆಂಕಿ ಹಾಕಿತ್ ಮೊಣ್ಣಪ್ಪ
ಮಂಗನಂಗೆ ಮರಹತ್ತಿದ್ ಚೋಮುಣಿ
ಸುತ್ತಲೂ ಗುಂಯ್ ಗುಂಯ್....
ಶುರುವಾಗಿತ್ತ್ ಜೇನ್ನೊಣಗಳ ಹಾಡು
ಮೊಣ್ಣಪ್ಪನ ತಲೆನೇ ಕಾಣ್ತಿಲ್ಲೆ...
ಅದ್ ಹೆದ್ರಿ ಅವ್ನ ತೊಡೆಸೆರೆ ಸೇರಿತ್ತ್ !
ಮರದ ಮೇಲೆ ಚೋಮುಣಿ ಹೈದ
ಅವ್ನ ಕೈಲಿ ಜೇನ್ ಗೂಡ್ !
ಉಫ್... ಉರುಗಿರೇ...
ಅಲ್ಲಿ ಬಂಗಾರದ ಬಣ್ಣದ ಜೇನ್ !

- `ಸುಮಾ'
 arebhase@gmail.com

No comments:

Post a Comment